ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಂಡನ ಶೂಟಿಂಗ್ ಸ್ಥಳಕ್ಕೆ ಬಂದ ಹರಿಪ್ರಿಯಾ ನೋಡಿ…ಚಿಂದಿ ವಿಡಿಯೋ

2,181

Haripriya meets vasishta simha Lovely movie: ಸದ್ಯ ನಟಿ ಹರಿಪ್ರಿಯಾ ಜೊತೆ ನಿಶ್ಚಿತಾರ್ಥದ ಬಳಿಕ ಸಖತ್ ಲವ್ ಮೂಡ್‌ನಲ್ಲಿರುವ ನಟ ವಸಿಷ್ಠ ಸಿಂಹ ಲವ್ಲಿ ಚಿತ್ರದಲ್ಲಿ ನಟಿಸುತ್ತಿದ್ದು ವಿದೇಶಿ ಹಾಟ್ ಸ್ಪಾಟ್ ಬೀಚ್‌ಗಳಿಗೆ ಸರಿಸಮನಾದ ಉಡುಪಿ ಸಮೀಪದ ಪಡುಕೆರೆ ಕಡಲ ತೀರದಲ್ಲಿ ಲವ್ಲಿ ಚಿತ್ರಕ್ಕೆ ಬರೋಬ್ಬರಿ ಬಂದು ಕೋಟಿ ವೆಚ್ಚದ ಅದ್ದೂರಿ ಸೆಟ್ ಹಾಕಲಾಗಿದೆ. ದಕ್ಷಿಣ ಭಾರತದ ಮಟ್ಟಿಗೆ ಇದೊಂದು ಅಪರೂಪದ ಮತ್ತು ಮೊದಲ ಪ್ರಯತ್ನ ಎನ್ನುತ್ತಿದೆ ಚಿತ್ರತಂಡ.

ಇನ್ನು ಗಡಸು ಧ್ವನಿಯ ನಾಯಕ ನಟ ವಸಿಷ್ಟ ಸಿಂಹ ಉತ್ತರ ಭಾರತದ ಚಾರ್ಮಿಂಗ್ ನಟಿ ಸ್ಟೆಫಿ ಪಟೇಲ್ಇವರ ಜೊತೆ ಸಿ ಫೇಸ್ ಸೈಟ್‌ನಲ್ಲಿ ಸೆಟ್ ಹಾಕಿಕೊಂಡು ಅಬುವನಸ ಕ್ರಿಯೆಷನ್ಸ್ ಚಿತ್ರ ತಂಡ ಕಳೆದ ಎರಡು ವಾರಗಳಿಂದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದೆ. ಹೌದು ಬಹುನಿರೀಕ್ಷಿಯ ಲವ್ಲಿ ಚಿತ್ರಕ್ಕಾಗಿ ಮಲ್ಪೆ ಸಮೀಪದ ಪಡುಕೆರೆ ಬೀಚಿನಲ್ಲಿ ಈ ಅದ್ದೂರಿ ಸೆಟ್ ಹಾಕಲಾಗಿದ್ದು ಲವ್-ಫ್ಯಾಮಿಲಿ-ಸೆಂಟಿಮೆಂಟ್ ಹಾಗೂ ರೌಡಿಸಂ ಎಳೆ ಹೊಂದಿರುವ ಚಿತ್ರದಲ್ಲಿ ಈ ಮನೆ ಕೂಡ ಒಂದು ಮಹತ್ವದ ಪಾತ್ರ ವಹಿಸುತ್ತೆ ಅಂತಿದೆ ಚಿತ್ರತಂಡ.

ಇನ್ನು ಮನೆಯ ಸುತ್ತಲೇ ಕಥೆ ನಡೆಯುವದರಿಂದ ನಿರ್ಮಾಪಕರು ಹಿಂದೂ ಮುಂದು ನೋಡದೆ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಅದ್ಧೂರಿ ಮನೆಯ ಸೆಟ್ ನಿರ್ಮಿಸಿದ್ದಾರೆ. ಹೌದು ಕಲಾ ನಿರ್ದೇಶಕ ಪ್ರತಾಪ್ 16 ಜನರ ತಂಡದೊಂದಿಗೆ ಹರಸಾಹಸಪಟ್ಟು ಈ ಸೆಟ್ ತಯಾರಿಸಿದ್ದು ಈ ಸೆಟ್ಟಿನ ಒಳಗೊಂದು ಸುತ್ತು ಹಾಕಿದ್ರೆ ಸಿನಿಮಾದ ಕಥೆ ಬಗ್ಗೆ ಕುತೂಹಲ ಮೂಡುತ್ತದೆ.

ಪ್ರತಿಯೊಂದು ವಸ್ತುವನ್ನು ಅತ್ಯಂತ ಕಾಳಜಿಯಿಂದ ಜೋಡಿಸಿದ್ದು ಈ ಎಲ್ಲ ಮೆಟೀರಿಯಲ್ಸ್ ಪಾತ್ರಗಳ ರೀತಿಯಲ್ಲಿ ಚಿತ್ರಕ್ಕೆ ಕಾಂಟ್ರಿಬ್ಯುಟ್ ಮಾಡುತ್ತೆ ಅಂತಾರೆ ನಿರ್ದೇಶಕ ಚೇತನ್ ಕೇಶವ್. ಮಫ್ತಿ ಚಿತ್ರದಲ್ಲಿ ಸಹಾಯಕರಾಗಿದ್ದ ಚೇತನ್ ಅವತ್ತಿಂದಲೇ ವಶಿಷ್ಠ ಜೊತೆ ಸಹೋದರತ್ವ ಬೆಳೆಸಿಕೊಂಡಿದ್ದರು. ಇವರನ್ನು ತಮ್ಮ ಅಂತಾನೇ ಕರೆಯುವ ವಶಿಷ್ಠ ಸಿಂಹ ರವರು ಚೇತನ್ ಕೇಶವ್ ಅವರ ಮೊದಲ ಪ್ರಯತ್ನಕ್ಕೆ ಸಾತ್ ನೀಡಿದ್ದಾರೆ. ಲವ್ಲಿ ಚಿತ್ರದಲ್ಲಿ ನಾಯಕ ನಟನಾಗಿ ಹೊಸ ಫೀಲ್ ಕೊಡಲಿದ್ದಾರೆ.

ಇನ್ನು ನಾಲ್ಕೈದು ದಿನ ಪಡುಕೆರೆಯಲ್ಲಿ ಶೂಟಿಂಗ್ ನಡೆಯಲಿದ್ದು ನಂತರ ಕೆಲ ದಿನಗಳ ಕಾಲ ಚಿತ್ರತಂಡ ಲಂಡನ್‌ಗೆ ಶಿಫ್ಟ್ ಆಗಲಿದೆ. ಸದ್ಯ ಸ್ಯಾಂಡಲ್‌ವುಡ್‌ನ ಲವರ್ ಬಾಯ್ ವಸಿಷ್ಠ ಸಿಂಹ ಲವ್ಲಿ ಚಿತ್ರದ ಮೂಲಕ ನಾಯಕ ನಟನಾಗಿ ಮುದು ಕೊಡಲು ಸಿದ್ಧರಾಗಿದ್ದಾರೆ. ಸಿನಿಮಾದಲ್ಲಿ ಯಶಸ್ಸಿನ ಮೇಲೆ ಯಶಸ್ಸು ಕಾಣುತ್ತಿರುವ ವಸಿಷ್ಠ ಸಿಂಹ ಕೆಲವೇ ದಿನಗಳಲ್ಲಿ ಮದುವೆ ಸಹ ಆಗಲಿದ್ದಾರೆ.

ಇನ್ನು ಸಕ್ಕತ್ ಲವ್ ಮೂಡ್‌ನಲ್ಲೆ ವಸಿಷ್ಟ ಸಿಂಹ ಲವ್ಲಿ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡರೂ ಗೆಳತಿ ಹರಿಪ್ರಿಯಾ ಜೊತೆ ಇವರಿಗೆ ಸಮಯ ಕಳೆಯಲು ಸಾಧ್ಯವಾಗಿಲ್ಲವಂತೆ. ಹಾಗಾಗಿ ಸ್ವತಃ ಹರಿಪ್ರಿಯಾನೇ ಶೂಟಿಂಗ್ ಸೆಟ್‌ಗೆ ಬಂದು ಸರ್ಪ್ರೈಸ್ ಕೊಟ್ಟಿದ್ದು ಸ್ಯಾಂಡಲ್‌ವುಡ್‌ನ ಈ ಪ್ರೇಮಿಗಳು ಕಡಲ ತೀರದ ಬೀಚ್ ಮಠ ಮಂಗಳೂರು ಅಂತ ಬಹಳಷ್ಟು ಸುತ್ತಾಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಮಂಗಳೂರಿನ ಸ್ಟುಡಿಯೋ ಒಂದರಲ್ಲಿ ಜೊತೆಯಾಗಿ ಡ್ಯುಯೆಟ್ ಹಾಡೊಂದನ್ನು ಹಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ವಸಿಷ್ಠ ಸಿಂಹಗೆ ಸಖತ್ ಥ್ರಿಲ್ ಕೊಟ್ಟಂತಿದೆ. ಒಮ್ಮೆ ಲೇಖನಿಯ ಕೆಳಗಿನ ವಿಡಿಯೋ ನೋಡಿ. ನಿಮಗೂ ಕೂಡ ಬಾವಿ ಪತಿಯನ್ನು ಹರಿಪ್ರಿಯಾ ಬಿಟ್ಟಿರುವುದಿಲ್ಲ ಎನಿಸುತ್ತದೆ.