ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಭಿಷೇಕ್ ಪತ್ನಿ ಅವಿವಾ ಮಾತಾಡೋ ಕನ್ನಡ ನೋಡಿ….ಚಿಂದಿ ವಿಡಿಯೋ

118,593

ಸದ್ಯ ರೆಬಲ್ ಸ್ಟಾರ್ ಅಂಬರೀಷ್ ಮತ್ತು ಸುಮಲತಾ ಅವರ ಪುತ್ರ ನಟ ಅಭಿಷೇಕ್ ಅಂಬರೀಷ್ ಜೀವನದಲ್ಲಿ ಹೊಸ ಅದ್ಯಾಯ ಶುರುವಾಗಿದ್ದು ತಾವು ಇಷ್ಟಪಟ್ಟ ಹುಡುಗಿಯ ಅವೀವಾ ಬಿದ್ದಪ್ಪ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲನಲ್ಲಿ ಡಿಸೆಂಬರ್ ಹನ್ನೊಂದರಂದು ನಿಶ್ಚಿತಾರ್ಥ ನೆರವೇರಿದೆ ಕುಟುಂಬದವರು ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಅಭಿಷೇಕ್ ಮತ್ತು ಅವೀವ್ ಬಿದ್ದಪ್ಪ ಉಂಗುರ ಬದಲಾಯಿಸಿಕೊಂಡಿದ್ದು ಇಬ್ಬರದ್ದು ಒಳ್ಳೆಯ ಜೋಡಿ ಎಂದು ಅಭಿಮಾನಿಗಳು ಹೇಳಿದ್ದಾರೆ .

ಇನ್ನು ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಅಭಿಷೇಕ್ ಬಳಿಗೆ ಬಂದಿದ್ದಾರೆ. ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳು ಈಗಾಗಲೇ ಕುತೂಹಲದಲ್ಲಿದ್ದು ಅಭಿಷೇಕ ಅವರು ಅವೀವಾವ ಬೆರಳಿಗೆ ಬರೋಬ್ಬರಿ ಮೂವತ್ತೇಳು ಲಕ್ಷ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವನ್ನು ತೊಡಿಸಿದ್ದಾರೆ. ಈ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಲಾಗಿತ್ತು ಎಂದು ಹೇಳಲಾಗಿದ್ದು ಇನ್ನು ಮೊದಲ ಬಾರಿಗೆ ಬಾವಿ ಪತಿ ಅಭಿಷೇಕ್ ಬಗ್ಗೆ ಮಾತನಾಡಿರುವ ಅವಿವಾ ಅವರು ಮೊದಲಿಗೆ ನಿಶ್ಚಿತಾರ್ಥಕ್ಕೆ ಶುಭ ಹಾರೈಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ನಾನು ತುಂಬಾ ಅದೃಷ್ಟವಂತೆ. ಅಂಬರೀಶ್ ಸರ್ ಅವರ ಮನೆಗೆ ಸೊಸೆಯಾಗಿ ಹೋಗುವ ಭಾಗ್ಯ ಸಿಕ್ಕಿದೆ. ತಾಯಿಯಂತ ಅತ್ತೆ ಸಿಕ್ಕಿದ್ದಾರೆ ಅಭಿ ಹಾಗು ನನ್ನದು ಹಲವು ವರ್ಷಗಳ ಸ್ನೇಹ. ಒಳ್ಳೆಯ ಸ್ನೇಹಿತರಾಗಿದ್ದ ನಾವು ಇದೀಗ ಪತಿ ಪತ್ನಿಯರಾಗುತ್ತಿದ್ದೇವೆ. ಅಂಬರೀಶ್ ಕುಟುಂಬದ ಮೇಲಿರುವ ಅಭಿಮಾನಿಗಳ ಪ್ರೀತಿಗೆ ನಾನು ಮೂಕವಿಸ್ಮಿತಳಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮೇಲೆ ಇರಲಿ ಅನ್ನುವ ಮಾತು ಹೇಳಿದ್ದಾರೆ.
ಈ ನಡುವೆ ಅವರು ರೇಡಿಯೋ ಸ್ಟೇಷನ್ ನಲ್ಲೊ ಆರ್ ಜೆ ಜೊತೆ ಚಿಟ್ ಚಾಟ್ ಶೋ ನಡೆಸಿದ ವಿಡಿಯೋ ವೈರಲ್ ಆಗಿದ್ದು ಇಲ್ಲಿ ಏನು ಹೇಳಿದ್ದಾರೆ ಎಂದು ತಿಳಿಯಲು ಲೇಜಕನಿಯ ಕೆಳಗಿನ ವಿಡಿಯೋ ನೋಡಿ

ಇನ್ನು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಪರಸ್ಪರ ಉಂಗುರ ತೊಡಿಸಿದ ಸಂದರ್ಭದಲ್ಲಿ ನೆರೆದಿದ್ದ ಎರಡೂ ಕುಟುಂಬಗಳ ಸದಸ್ಯರು ಹಾಗೂ ಬಂಧುಗಳು ಚಪ್ಪಾಳೆ ತಟ್ಟುವುದರ ಮೂಲಕ ಸಂಭ್ರಮಿಸಿದ್ದಾರೆ ಹಾಗೂ ಶುಭ ಕೋರಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಗು ನಗುತ್ತಾ ಉಂಗುರ ಬದಲಿಸಿಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ.

ಅನೇಕ ಅಂಬರೀಶ್ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅಭಿಮಾನಿಗಳ ಪಾಲಿಗೆ ಈ ಸುದ್ದಿ ಸರ್‌ಪ್ರೈಸ್ ಎನಿಸಿದರೆ ತಪ್ಪಾಗಲಾರದು. ಹೌದು ಇದಕ್ಕೆ ಕಾರಣ ಈ ಬಗ್ಗೆ ಅಂಬರೀಶ್ ಕುಟುಂಬಸ್ಥರು ಒಂದೇ ಒಂದು ಬಾರಿ ಕೂಡ ಮಾಹಿತಿಯನ್ನು ಹೊರಗೆ ಬಿಟ್ಟುಕೊಡದೇ ಇದ್ದದ್ದು.

ಕಳೆದ ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ವಿಚಾರ ಕೇಳಿದಾಗಲೂ ಸುಮಲತಾ ನೀವೇ ಹುಡುಗಿಯನ್ನು ಹುಡುಕಿ ಎಂದು ಉತ್ತರ ನೀಡುವ ಮೂಲಕ ನಿಶ್ಚಿತಾರ್ಥದ ಯೋಜನೆ ಸದ್ಯಕ್ಕಿಲ್ಲ ಎನ್ನುವಂತೆ ಮಾತನಾಡಿದ್ದರು. ಆದರೆ ಇದೀಗ ನಿಶ್ಚಿತಾರ್ಥ ಮಾಡಿ ಮುಗಿಸಿ ಸರ್‌ಪ್ರೈಸ್ ನೀಡಿದ್ದಾರೆ ಹಾಗೂ ನಿಶ್ಚಿತಾರ್ಥದ ಫೋಟೊ ಹಾಗೂ ವಿಡಿಯೊಗಳನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ.