ಜೀ ಕನ್ನಡ ವಾಹಿನಿ ವೀಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ ಎನ್ನಬಹುದು. ಜೀ ಕನ್ನಡ ವಾಹಿನಿ ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಟಾಪ್ ಸ್ಥಾನದಲ್ಲಿರುತ್ತದೆ ಎನ್ನಬಹುದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ ಧಾರವಾಹಿ ಕೂಡ ಒಂದಾಗಿದ್ದು ಪ್ರಸಾರವಾದ ಮೊದಲ ದಿನದಿಂದಲೂ ಕೂಡ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಹೌದು ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಂದಾದ ಪಾತ್ರ ನಾಯಕಿ ಲೀಲಾ ಅವರ ತಾಯಿ ಕೌಶಲ್ಯ. ಇನ್ನು ಈ ಪಾತ್ರವನ್ನು ನಟಿ ಅಭಿನಯ ನಿರ್ವಹಿಸುತ್ತಿದ್ದಾರೆ. ನಟಿ ಅಭಿನಯ ಕನ್ನಡ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ಸಕ್ರಿಯರಾಗಿರುವ ನಟಿ ಎನ್ನಬಹುದು.
ಅಭಿನಯ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾಗಿದ್ದು ಕನ್ನಡ ಸಿನಿಮಾರಂಗದ ಜೊತೆಗೆ ಕಿರುತೆರೆಯಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ ನಟಿ ಅಭಿನಯ. ತಮ್ಮ 13 ನೆ ವಯಸ್ಸಿಗೆ ನಟಿ ಅಭಿನಯ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದು 1984 ರಲ್ಲಿ ತೆರೆಕಂಡ ನಟ ನಿರ್ದೇಶಕ ಕಾಶಿನಾಥ್ ಅವರ ಅನುಭವ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ನಟಿ ಅಭಿನಯ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
ಹೌದು ಈ ಸಿನಿಮಾದ ಹೊದೆಯಾ ದೂರ ಓ ಜೊತೆಗಾರ ಇಂದಿಗೂ ಸಹ ತುಂಬಾ ಫ್ಹೇಮಸ್. ಅನುಭವ ಸಿನಿಮಾದಲ್ಲಿ ನಟಿ ಅಭಿನಯ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು ಅವರ ಈ ಸಿನಿಮಾಗೆ ಅವರಿಗೆ ಸ್ಟೇಟ್ ಅವಾರ್ಡ್ ಕೂಡ ಲಭಿಸಿತ್ತು. ತಮ್ಮ ಮೊದಲ ಸಿನಿಮಾದ ಮೂಲಕವೇ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಮಾಡಿದರು ನಟಿ ಅಭಿನಯ.
ಕಿಂದರಿ ಜೋಗಿ ಗಜಪತಿ ಗರ್ವಭಂಗ ಅಪ್ಪ ನಂಜಪ್ಪ ಮಗ ಗುಂಜಪ್ಪ ನಂತಹ ಹಲವಾರು ಸಿನಿಮಾಗಳಲ್ಲಿ ನಟಿ ಅಭಿನಯ ನಟಿಸಿದ್ದು ಸಿನಿಮಾಗಳಿಗಿಂತ ನಟಿ ಅಭಿನಯ ಹೆಚ್ಚು ಹೆಸರು ಮಾಡಿದ್ದು ಕಿರುತೆರೆಯ ನಟಿಯಾಗಿ. ಹೌದು ಡ್ರೈವರ್ ಡುಮ್ಮಣ್ಣ ಬದುಕು ಇನ್ನು ಹಲವಾರು ಧಾರವಾಹಿಗಳಲ್ಲಿ ನಟಿಸಿ ಕಿರಿತೆರೆ ಲೋಕದಲ್ಲಿ ನಟಿ ಅಭಿನಯ ಸಕ್ರಿಯರಾಗಿದ್ದು ಇನ್ನು ಇಂದಿಗೂ ಸಹ ಅಭಿನಯ ಅವರು ಕಿರುತೆರೆಯ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು 2009 ರಲ್ಲಿ ನಟಿ ಅಭಿನಯ ಛಾಯಾಗ್ರಾಹಕ ಉಮಾಕಾಂತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಧರ್ಮಸ್ಥಳದಲ್ಲಿ ಸರಳವಾಗಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮುಖದಲ್ಲಿ ನಟಿ ಅಭಿನಯ ಮದುವೆಯಾದರು.
ಬರುಬರುತ್ತಾ ಅಭಿನಯ ಅವರಿಗೆ ಬಣ್ಣದ ಲೋಕದಲ್ಲಿ ಬೇಡಿಕೆ ಕಡಿಮೆಯಾಗುತ್ತಾ ಹೋಗಿದ್ದು ಮದುವೆಯ ನಂತರ ನಟಿ ಬಣ್ಣದ ಲೋಕದಿಂದ ಕೊಂಚ ಸಮಯ ಬ್ರೇಕ್ ತೆಗೆದುಕೊಂಡರು. ನಂತರ ಸತತ 7 ವರ್ಷಗಳ ನಂತರ ನಟಿ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.
ಕ್ರಶ್ ಎಂಬ ಕನ್ನಡ ಸಿನಿಮಾದ ಮೂಲಕ ನಟಿ ಅಭಿನಯ ಮತ್ತೆ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದು ಈ ಸಿನಿಮಾದಲ್ಲಿ ನಟಿ ಅಭಿನಯ ನಾಯಕಿಯ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತದ ನಂತರ ನಟಿ ಅಭಿನಯ ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು.
ಹೌದು ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿ ಅಭಿನಯ ನಾಯಕಿ ಲೀಲಾ ಅವರ ಮಲತಾಯಿ ಪಾತ್ರದಲ್ಲಿ ನಟಿಸುತ್ತಿದ್ದು ಈ ಪಾತ್ರದ ಮೂಲಕ ನಟಿ ಮತ್ತೆ ಕನ್ನಡ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ. ಈ ಮೂಲಕ ನಟಿ ಮತ್ತೆ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ತುಂಬಾ ಖುಷಿ ತಂದುಕೊಟ್ಟಿದೆ.
ಇನ್ನು ನಟಿ ಅಭಿನಯ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದು ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಇರುವ ನಟಿ ತಮ್ಮ ಫೋಟೋಗಳು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.ಇದೀಗ ಜೈಲು ಪಾಲಾಗಿರುವ ಈ ನಟಿಯ ಹಳೆ ವಿಡಿಯೋ ನೋಡಿ.