ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಮೋಘವಾಗಿ ಯೋಗ ಮಾಡಿದ ವೈಷ್ಣವಿ ಗೌಡ…ಚಿಂದಿ ವಿಡಿಯೋ

3,142

ನಮ್ಮ ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ತಮ್ಮ ಅದ್ಭುತ ನಟನೆಯಿಂದ ಕರ್ನಾಟಕದ ಮನೆ ಮನೆಗಳಲ್ಲಿ ಫೇಮಸ್ ಆದವರು ನಟಿ ವೈಷ್ಣವಿ ಗೌಡರವರು. ಹೌದು ಅಗ್ನಿಸಾಕ್ಷಿ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರ ಜೀವನದಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್ ಎಂದರೆ ಖಂಡಿರ ತಪ್ಪಾಗುವುದಿಲ್ಲ.

ಏಕೆಂದರೆ ಇದೇ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಅವರು ಜನಮನ್ನಣೆ ಗಳಿಸುವುದರ ಜೊತೆಗೆ ಅವರದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಕೂಡ ಪಡೆದುಕೊಂಡರು. ಹೌದು ಇದರ ಜೊತೆಗೆ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ನಲ್ಲಿ ಕೂಡ ಭಾಗವಹಿಸಿ ವೀಕ್ಷಕರ ಗಮನ ಸೆಳೆದಿದ್ದು ಇದರ ಬಳಿಕ ಕೂಡ ಅವರ ಅಭಿಮಾನಿ ಬಳಗ ಹೆಚ್ಚಾಗುತ್ತಲೇ ಹೋಯಿತು..

ಇನ್ನು ನಟಿ ವೈಷ್ಣವಿ ಗೌಡ ಅವರು ದೇವಿ ಎಂಬ ಧಾರವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಇದರ ನಂತರ ಪುನರ್ ವಿವಾಹ ಸೀರಿಯಲ್ ನಲ್ಲಿ ಕೂಡ ನಟಿಸಿದ್ದರು. ಆದರೆ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟು ಜನಪ್ರಿಯ ರಾಗುವಂತೆ ಮಾಡಿದ್ದು ಮಾತ್ರ ಅಗ್ನಿಸಾಕ್ಷಿ ಧಾರವಾಹಿ ಎನ್ನಬಹುದು.

ಇನ್ನು ಭರತನಾಟ್ಯಂ ನೃತ್ಯದಲ್ಲಿ ಸೈ ಎನಿಸಿಕೊಂಡಿರುವ ವೈಷ್ಣವಿ ಗೌಡ ರವರು ಬೇರೆ ಬೇರೆ ರೀತಿಯ ವೆಸ್ಟ್ರನ್ ಡ್ಯಾನ್ಸ್ ಗಳನ್ನು ಕೂಡ ಮಾಡುತ್ತಾರೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಗಿ ಭಾಗವಹಿಸಿದ್ದ ವೈಷ್ಣವಿ ಗೌಡ ಅವರು ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದರು. ಇನ್ನು ಇವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದು ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ತನ್ನ ಮದುವೆ ಬಗ್ಗೆ ಮಾತನಾಡಿದ್ದರು.

ಇನ್ನು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದು ಗೃಹಪ್ರವೇಶ ಕೂಡ ಅದ್ದೂರಿಯಾಗಿ ಮಾಡಿದ್ದರು. ಇದೇ ವೇಳೆ ಬಿಗ್ ಬಾಸ್ ಸೀಸನ್ ಎಂಟರ ಸಹ ಸ್ಪರ್ಧಿಗಳಾದ ರಾಜೀವ್ ರಘು ಗೌಡ ಕೆಪಿ ಅರವಿಂದ್ ದಿವ್ಯ ಉರುಡುಗ ಸೇರಿದಂತೆ ಕಿರುತೆರೆಯ ನಟ ನಟಿಯರು ಹಾಗೂ ಆತ್ಮೀಯರು ಬಂದು ಶುಭಾಶಯ ತಿಳಿಸಿದ್ದರು.

ಇತ್ತೀಚೆಗೆ ಕೆಲ ಸಿನಿಮಾಗಳಲ್ಲಿಯೂ ಕೂಡ ನಟಿಸಿರುವ ವೈಷ್ಣವಿ ಗೌಡ ಅವರು ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈಗ ನಟಿ ವೈಷ್ಣವಿ ಗೌಡ ಅವರು ಯೋಗ ಮಾಡಿರುವ ವಿಡಿಯೋ ವನ್ನ ತಮ್ಮ ಯುಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದ್ದು ಏರಿಯಲ್ ಯೋಗ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಹೌದು ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಟ್ಟೆಯಿಂದ ಮಾಡಲಾದ ತೂಗು ಉಯ್ಯಾಲೆ ಮೇಲೆ ನಟಿ ವೈಷ್ಣವಿ ಗೌಡ ಅವರು ಮಾಡಿರುವ ಯೋಗಾಸನಗಳು ಈಗ ಎಲ್ಲರ ಗಮನ ಸೆಳೆಯುತ್ತಿದೆ. ನೀವು ಕೂಡ ಕೆಳಗಿನ ವಿಡಿಯೋದಲ್ಲಿ ಇದನ್ನು ನೋಡಬಹುದು.