ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪೆಟ್ರೋಲ್ ಬಂಕ್ ನಲ್ಲಿ ನಡೆದ ಈ ಘಟನೆ ನೋಡಿ…ಸಿಸಿಟಿವಿ ದ್ರಶ್ಯ ಎಚ್ಚರ ಎಚ್ಚರ

1,922

ಸಾಮಾಜಿಕ ನಮ್ಮ ಜೀವನದಲ್ಲಿ ಆಘಾತಗಳು ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹೌದು ಮಾನವ ಜೀವನದ ನೌಕೆಯೇ ಹಾಗೆ. ಇದ್ದಷ್ಟು ದಿನ ನಾನು ನಾನು ಎಂದು ಬದುಕುವ ಮನುಷ್ಯ ತಾನು ಯಾವಾಗ ಬೇಕಾದರೂ ಪ್ರಾಣ ಕಳೆದುಕೊಳ್ಳಬಹುದು ಎಂಬುದನ್ನು ಮಾತ್ರ ನೆನೆಯುವುದಿಲ್ಲ. ಹೌದು ಅವನ ಸ್ವಾರ್ಥದಿಂದಾಗಿಯೇ ಈಗಾಗಲೇ ಅರಣ್ಯಗಳು ನಾಶವಾಗಿದ್ದು ಅವನ ಸ್ವಾರ್ಥಬುದ್ಧಿಯಿಂದಲೇ ತಮ್ಮ ಆಪ್ತರು ಮತ್ತು ಬಂಧು ಬಳಗವನ್ನೆಲ್ಲಾ ದೂರ ಮಾಡಿಕೊಂಡಿರುತ್ತಾನೆ.

ಇದರಿಂದಾಗಿ ಅವನಿಗೆ ಏನು ಸಿಗುತ್ತದೋ ಅಥವಾ ಯಾವ ಸಾಧನೆ ಮಾಡುತ್ತಾನೆ ತಿಳಿದಿಲ್ಲ. ಹೌದು ಇಹಲೋಕ ತ್ಯಜಿಸಿದ ಮೇಲೆ ನಮ್ಮ ಮೈಮೇಲೆ ಇರುವಂತಹ ಉಡುದಾರವನ್ನೂ ಕೂಡ ಬಿಡದಂತೆ ಕಿತ್ತುಹಾಕಿ ಮಣ್ಣಲ್ಲಿ ಮಣ್ಣು ಮಾಡುತ್ತಾರೆ. ಆದರೆ ಇದ್ಯಾವುದರ ಬಗ್ಗೆಯೂ ಸಹ ಯೋಚನೆ ಮಾಡದ ಮನುಷ್ಯ ಜೀವಿ
ಹಣ ಆಸ್ತಿ ಐಶ್ವರ್ಯ ಹಿಂದೆ ಬಿದ್ದು ತಾನು ಹಾಗೂ ತನ್ನವರನೆಲ್ಲಾ ಕಳೆದುಕೊಂಡು ಬಿಡುತ್ತಾನೆ.

ಪ್ರಾಣಿಗಳೇ ಗುಣದಲಿ ಮೇಲು ಮಾನವನದಕ್ಕಿಂತ ಕೀಳು ಉಪಕಾರ ಮಾಡಲಾರ. ಮಾಡಿದರೂ ಸಹಿಸಲಾರ ಎಂತಹ ಅದ್ಬುತ ಸಾಲುಗಳು ಅಲ್ಲವೇ? ಅವನ ಜೀವನ ಕ್ಷಣಿಕ ಎಂಬುದು ಸಹ ತಿಳಿದಿದ್ದರೂ ಕೂಡ ಅನೇಕ ಕೃತ್ಯವನ್ನು ಎಸಗುತ್ತಾನೆ. ಆದುದರಿಂದ ಪ್ರತಿಯೊಬ್ಬರೂ ಕೂಡ ಯಮಧರ್ಮರಾಜನು ನಮ್ಮ ಹಿಂದೆಯೇ ಇರುತ್ತಾನೆ ಎಂಬುದನ್ನು ಮಾತ್ರ ಮರೆಯಬಾರದು.

ಹೌದು ಅದೆಷ್ಟೋ ಮಂದಿ ರಾತ್ರಿ ನಮ್ಮ ಜೊತೆ ಊಟ ಮಾಡಿದ್ದು ಬೆಳಿಗ್ಗೆ ಹಾಲು ತರುತ್ತೇನೆ ಎಂದು ದ್ವಿಚಕ್ರ ವಾಹನದಲ್ಲಿ ಹೋಗಿ ರಸ್ತೆ ಆಘಾತದಲ್ಲಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಇದೇ ಅಲ್ಲವೇ ದುರ್ವಿಧಿಯೆಂದರೆ ? ಆದುದರಿಂದ ಇರುವಷ್ಟು ದಿನ ಪ್ರತಿಯೊಬ್ಬರ ಜೊತೆ ಪ್ರೀತಿ ಹಾಗೂ ವಾತ್ಸಲ್ಯದಿಂದ ನಡೆದುಕೊಂಡರೆ ನಾವು ಇಹಲೋಕ ತ್ಯಜಿಸಿದ ಮೇಲೆಯೂ ಸಹ ನಮ್ಮನ್ನು ನೆನಪಿಸಿಕೊಂಡು ನಮ್ಮ ನೆನಪಲಿಯೇ ನಮ್ಮನ್ನು ಜೀವಿಸಿರುತ್ತಾರೆ.

ಹೌದು ಅದೆಷ್ಟೋ ಮಂದಿ ಹುಟ್ಟಿದಾಗಲಿಂದಲೂ ಕೂಡ ಯಾರಿಗೂ ಕೇಡನ್ನು ಬಯಸದೆ ಯಾರಿಗೂ ಕೂಡ ಮೋಸ ಮಾಡದೆ ಶ್ರಮಜೀವಿಯಾಗಿ ಅನ್ಯರ ಮುಖದಲ್ಲಿ ಸಂತೋಷ ತರಿಸುವುದನ್ನೇ ಕಾಯಕ ಮಾಡಿಕೊಂಡಿದ್ದರೂ ಸಹ ಭೂಮಿಯ ಮೇಲೆ ಅವರ ಋಣ ತೀರಿದ ಮೇಲೆ ಅವರು ಎಷ್ಟೇ ಒಳ್ಳೆಯವರಾದರೂ ಕೂಡ ಇಹಲೋಕ ತ್ಯಜಿಸಲೇಬೇಕು.

ಇನ್ನೂ ಈ ಯಮಧರ್ಮರಾಜ ಯಾವಾಗ ನಮ್ಮ ಪ್ರಾಣವನ್ನು ಕಸಿದುಕೊಂಡು ಹೋಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಹೌದು ಆದರೆ ಒಮ್ಮೆ ಅವನಿಂದ ಪಾರಾದರೆ ನಮ್ಮನ್ನು ಶತಾಯುಷಿ ಎಂದು ಕರೆಯಲಾಗುತ್ತದೆ. ಸದ್ಯ ಈ ರೀತಿಯಾಗಿ ಓರ್ವ ವ್ಯಕ್ತಿ ಬದುಕುಳಿದ ಘಟನೆ ನಡೆದಿದ್ದು ಭೀಕರ ಅನಾಹುತದಲ್ಲಿಯೂ ಕೂಡ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ.

ಹೌದು ಈ ರೀತಿಯಾದಂತಹ ಒಂದು ಘಟನೆ ನಡೆದಿದ್ದು ಸಾಮಾನ್ಯವಾಗಿ ದ್ವಿಚಕ್ರ ವಾಹನದಾರರು ಪೆಟ್ರೋಲ್ ಪಂಪ್ ಗೆ ತೆರಳಿ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುತ್ತಾರೆ. ಅಂತೆಯೇ ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ದ್ವಿಚಕ್ರ ವಾಹನಕ್ಕೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ದು ಇನ್ನೇನು ಹಣ ಪಾವತಿಸಿ ಮುಂದೆ ಹೋಗಬೇಕು ಎಂದುಕೊಳ್ಳುವಷ್ಟರಲ್ಲಿ ಇದ್ದಕ್ಕಿದ್ದಂತೆ ದ್ವಿಚಕ್ರ ವಾಹನ ಬೆಂಕಿಯಿಂದ ಧಗಧಗನೆ ಉರಿಯುತ್ತದೆ. ತಕ್ಷಣ ಬೈಕ್ ನಿಂದ ಇಳಿದ ಆ ಸವಾರ ಬೈಕ್ ಬಿಟ್ಟು ಓಡಿ ಹೋಗಿದ್ದು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ವಾಹನ ಚಾಲಕರು ಓಡಿ ಹೋಗಿದ್ದಾರೆ.

ಸದ್ಯ ಆ ವ್ಯಕ್ತಿ ಪೆಟ್ರೋಲ್ ಹಾಕಿಸಿಕೊಂಡು ಮುಂದೆ ಹೋಗಬೇಕಾದರೆ ಈ ರೀತಿಯಾದ ಅನಾಹುತ ಸಂಭವಿಸಿದ್ದರೆ ಆತ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿತ್ತು. ಆದರೆ ವಾಹನ ಚಲಾಯಿಸುವ ಮುನ್ನವೇ ಈ ರೀತಿಯಾಗಿ ಬೆಂಕಿ ಹತ್ತಿದ್ದು ಇದರಿಂದ ಆ ವ್ಯಕ್ತಿ ಬೈಕ್ ನಿಂದ ಓಡಿ ಹೋಗಿ ತನ್ನ ಪ್ರಾಣವನ್ನೇ ಉಳಿಸಿಕೊಂಡಿದ್ದಾನೆ. ಇನ್ನು ಆ ದ್ವಿಚಕ್ರವಾಹನ ಬೆಂಕಿಯಿಂದ ಧಗಧಗನೆ ಉರಿಯುವಾಗ ಪೆಟ್ರೋಲ್ ಪಂಪ್ ಹುಡುಗರ ದೈರ್ಯ ಮೆಚ್ಚ ಬೇಕಾಗಿದ್ದ ಗ್ಯಾಸ್ ಬಳಸಿ ಬೆಂಕಿಯನ್ನು ಆರಿಸಿದ್ದಾರೆ. ನಂತರ ನಡೆದ ಘಟನೆ ಏನು ಗೊತ್ತಾ? ಈ ವಿಡಿಯೋ ನೋಡಿ.