ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಚುಟು ಚುಟು ಅಂತೈತಿ ಹಾಡು ಹಾಡಿದ ಆಶಿಕಾ ರಂಗನಾಥ್..ಅದ್ಬುತ ಗಾಯನ ನೋಡಿ ವಿಡಿಯೋ

7,498

2016ರಲ್ಲಿ ಬಿಡುಗಡೆಗಡೆಯಾದ ಕ್ರೇಜಿ ಬಾಯ್ ಸಿನಿಮಾ ಮೂಲಕ ನಾಯಕಿಯಾಗಿ ಸಿನಿಮಾರಂಗಕ್ಕೆ ಪ್ರವೇಶ ಪಡೆದುಕೊಂಡ ಆಶಿಕಾ ರಂಗನಾಥ್ ತದನಂತರ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಆದರೆ ಆಶಿಕಾ ರಂಗನಾಥ್ ಅವರಿಗೆ ಐಡೆಂಟಿಟಿ ತಂದು ಕೊಟ್ಟದ್ದು ಮಾತ್ರ ಗಣೇಶ್ ಅಭಿನಯದ ಮುಗುಳುನಗೆ ಚಿತ್ರ.

ಹೌದು ಮುಗುಳುನಗೆ ಚಿತ್ರದಲ್ಲಿ ವೈಶಾಲಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದ ಆಶಿಕಾ ರಂಗನಾಥ್ ಚಿತ್ರದಲ್ಲಿನ ಮೂವರು ನಾಯಕಿಯರ ಪೈಕಿ ಓರ್ವರಾಗಿದ್ದು ಚಿತ್ರದುದ್ದಕ್ಕೂ ಇರುವ ಪಾತ್ರವಲ್ಲದಿದ್ದರೂ ಸಹ ಆಶಿಕಾ ರಂಗನಾಥ್ ಕಡಿಮೆ ಸಮಯದಲ್ಲಿಯೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೌದು ಹೀಗೆ ಮುಗುಳುನಗೆ ಚಿತ್ರದ ಮೂಲಕ ಸಿನಿಮಾ ರಂಗದಲ್ಲಿ ದೊಡ್ಡ ತಿರುವು ಪಡೆದುಕೊಂಡ ಆಶಿಕಾ ರಂಗನಾಥ್ ಕೆಲವು ಆಫರ್ ಪಡೆದುಕೊಂಡರು.

ಸದ್ಯ ಶ್ರೀ ಮುರಳಿ ಶರಣ್ ಹಾಗೂ ಅಜಯ್ ರಾವ್ ಚಿತ್ರಗಳಲ್ಲಿ ಅಭಿನಯಿಸಿರುವ ಆಶಿಕಾ ರಂಗನಾಥ್ ಅವರಿಗೆ ಕನ್ನಡದ ಸ್ಟಾರ್ ನಟರಾದ ಪುನೀತ್ ಯಶ್ ಸುದೀಪ್ ಹಾಗೂ ದರ್ಶನ್ ಅವರ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಲಭಿಸಲಿಲ್ಲ. ಹೌಫು ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಹಾಗೂ ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಕುಣಿದದ್ದನ್ನು ಬಿಟ್ಟರೆ ಆಶಿಕಾ ರಂಗನಾಥ್ ಕನ್ನಡದ ಬಿಗ್ ನಟರ ಚಿತ್ರಗಳಲ್ಲಿ ನಟಿಸಿಲ್ಲ. ಇನ್ನು ಹೀಗೆ ಕನ್ನಡದ ದಿಗ್ಗಜ ನಟರ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗದ ಆಶಿಕಾ ರಂಗನಾಥ್ ಇದೀಗ ಪರಭಾಷೆಯತ್ತ ಮುಖ ಮಾಡಿದ್ದಾರೆ.

ಹೌದು ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದು ಈ ಸುದ್ದಿಯನ್ನು ಸ್ವತಃ ಆಶಿಕಾ ರಂಗನಾಥ್ ಅವರೇ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಮುಹೂರ್ತ ಸಮಾರಂಭದ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು. ಇನ್ನು ಸಿದ್ಧಾರ್ಥ್ ತನ್ನ ಬಾಲ್ಯದ ನೆಚ್ಚಿನ ನಟ ಎಂದು ನೆಚ್ಚಿನ ನಟನ ಜತೆಗೆ ನಾಯಕಿಯಾಗಿ ಕಾರ್ಯನಿರ್ವಹಿಸುವುದು ನಿಜಕ್ಕೂ ಅದೃಷ್ಟ ಎಂದು ಆಶಿಕಾ ರಂಗನಾಥ್ ಬರೆದುಕೊಂಡಿದ್ದರು. ಹೀಗೆ ಈ ಚಿತ್ರದ ಚಿತ್ರೀಕರಣ ಮುಗಿಯುವ ಮುನ್ನವೇ ಇದೀಗ ಆಶಿಕಾ ರಂಗನಾಥ್ ತೆಲುಗು ಚಿತ್ರದಲ್ಲಿ ನಟಿಸುವ ಸುದ್ದಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಬಿಂಬಿಸಾರ ಎಂಬ ಚಿತ್ರದ ಮೂಲಕ ಭರ್ಜರಿ ಯಶಸ್ಸು ಸಾಧಿಸಿರುವ ನಟ ನಂದಮೂರಿ ಕಲ್ಯಾಣ್ ರಾಮ್ ರವರ ಅಭಿನಯದ ಮುಂದಿನ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಹರಿದಾಡುತ್ತಿದ್ದು ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆಗಳ ಕೆಲ ಮೀಮ್ ಪೇಜ್ ಕೂಡ ಈ ವಿಷಯವನ್ನು ಪೋಸ್ಟ್ ಮಾಡಿವೆ.

ಸದ್ಯ ಸಕ್ಸಸ್ ಹಾದಿಯಲ್ಲಿರುವ ನಂದಮೂರಿ ಕಲ್ಯಾಣ್ ರಾಮ್ ಜತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರೆ ಫೇಮ್ ಬರುವುದು ಖಚಿತ.ಆಶಿಕಾ ರಂಗನಾಥ್ ಪವನ್ ಒಡೆಯರ್ ನಿರ್ದೇಶನದ ರೇಮೋ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ ಹಾಗೂ ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ.

ಈ ಚಿತ್ರವನ್ನು ಹೊರತುಪಡಿಸಿ ಇನ್ನುಳಿದಂತೆ ಓ2 ತಮಿಳು ನಟ ಅಥರ್ವ ಜತೆಗಿನ ಚಿತ್ರ ಹಾಗೂ ಸಿಂಪಲ್ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ನಡುವೆ ಅಶಿಕಾರ ಹಳೆಯ ಕ್ಯೂಟ್ ವಿಡಿಯೋ ವೈರಲ್ ಆಗಿದ್ದು ಗಾನಬಜಾನ ಸೀಸನ್ ೨ ಕಾರ್ಯಕ್ರಮಗದಲ್ಲಿ ಭಾಗವಹಿಸಿದ್ದ ಆಶಿಕಾ ಚುಟು ಚುಟು ಹಾಡನ್ನು ಹೇಗೆ ಹಾಡಿದ್ದಾರೆ ನೀವೆ ನೋಡಿ.