ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಡ ಮಗುವನ್ನು ತಳ್ಳಿದ್ರಾ ಯಶ್…ನೋಡಿ ಯಶ್ ವರ್ತನೆಯ ವಿಡಿಯೋ

4,653

ರಾಕಿಂಗ್ ಸ್ಟಾರ್ ಯಶ್​ ರವರ ಈ ಹೆಸರು ಕೇಳಿದರೆ ಸಾಕು ಎಂತಹವರ ಮೈಂಡ್​ನಲ್ಲಿ ಕೂಡ ಸಲಾಂ ರಾಕಿ ಭಾಯ್​ ಸಲಾಂ ರಾಕಿ ಭಾಯ್​ ಎಂಬ ಹಾಡಿನ ಸಾಲು ಕಂಡಿತವಾಗಿಯೂ ಗುನುಗುತ್ತದೆ ಎನ್ನಬಹುದು. ಹೌದು ಯಶ್​ ರವರು ಕನ್ನಡ ಚಿತ್ರರಂಗದ ಸೂಪರ್​ ಸ್ಟಾರ್​​ ಆಗಿಬುಟ್ಟಿದ್ದು ಕೆಜಿಎಫ್​ ಸಿನಿಮಾದ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆದವರು ಈ ರಾಕಿ ಭಾಯ್​. ಇನ್ನು ಬೇರೆ ದೇಶಗಳಲ್ಲೂ ಸಹ ಕನ್ನಡ ಚಿತ್ರಗಳಿಗೆ ಡಿಮ್ಯಾಂಡ್​ ತಂದುಕೊಟ್ಟಿದ್ದು ಕೂಡ ನಮ್ಮ ರಾಕಿ.

ಪರ ಭಾಷೆಯ ಸಿನಿಮಾಗಳು ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿ ಬಾಯಿ ಮೇಲೆ ಬೆರೆಳು ಇಟ್ಟುಕೊಳ್ಳುವಂತೆ ಮಾಡಿದ್ದು ಇದೇ ರಾಕಿ ಭಾಯ್ ಎಂದು ಕೂಡ ಹೇಳಬಹುದು. ನಾನು ಬರೋ ವರೆಗೂ ಮಾತ್ರ ಬೇರೆ ಯವರ ಹವಾ ನಾನ್​ ಬಂದ್ಮೇಲೆ ನನದೆ ಹವಾ ಎಂದು ಡೈಲಾಗ್​ ಹೊಡೆದು ಅದನ್ನ ಸಾಬೀತು ಮಾಡಿದ್ದು ಕೂಡ ಇದೇ ರಾಕಿಂಗ್​ ಸ್ಟಾರ್​.

ಸದ್ಯ ಈಗ ನಟ ಯಶ್​ ರವರು ಏನೇ ಮಾಡಿದರು ಕೂಡ ಅದು ಬ್ರೇಕಿಂಗ್​ ನ್ಯೂಸ್​ಆಗುತ್ತದೆ. ಹೌದು ಇದೀಗ ರಾಕಿ ಬಾಯ್ ​ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದು ನೇರವಾಗಿ ತಮ್ಮ ಅಭಿಮಾನಿಗಳನ್ನ ತುಂಬಾ ಕೂಲ್ ಆಗಿ ಭೇಟಿ ಮಾಡಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿರುವ ವಿಡಿಯೋಗಳು ವೈರಲ್​ ಆಗಿದ್ದು ಇದರ ನಡುವೆ ಮತ್ತೊಂದು ಘಟನೆ ನಡೆದಿದ್ದು ಯಶ್ ಮೇಲೆ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಹೌದು ಏನಿದು ಸುದ್ದಿ? ಮುಂದೆ ಓದಿ.

ನಟ ರಾಕಿಂಗ್​ ಸ್ಟಾರ್​ ಯಶ್​ ರವರು ಬಹು ನಿರೀಕ್ಷಿತ ಕೆಜಿಎಫ್​-2 ಸಿನಿಮಾ ಹಿಟ್ ಆದ ನಂತರ ತಮ್ಮ ಕುಟುಂಬದ ಜೊತೆ ಅದ್ಬುತ ಸಮಯವನ್ನ ಕಳೆದಿದ್ದು ಮಗಳು ಐರಾ ಮಗ ಐರಾ ಯಥರ್ವ್​ ಮತ್ತು ಪತ್ನಿ ರಾಧಿಕಾ ಪಂಡಿತ್ ರವರ ಜೊತೆಯಲ್ಲಿ ಸಮಯ ಕಳೆಯುತ್ತಾ ಎಂಜಾಯ್​ ಮಾಡಿದ್ದು ಸದ್ಯ ಇತ್ತೀಚೆಗಷ್ಟೇ ದಿಢೀರ್​ ಮುಂಬೈ ಕಡೆ ಪ್ರಯಾಣ ಬೆಳೆಸಿದ್ದು ಮತ್ತೊಮ್ಮೆ ಮುಂಬೈಗೆ ಯಶ್​ ರವರು ಭೇಟಿ ನೀಡಿದ್ದರು.

ಅಲ್ಲೂ ಸಹ ಯಶ್​ ರವರ ಹವಾ ಜೋರಾಗಿದ್ದು ಕೆಲ ದಿನಗಳಿಂದ ಯಶ್ ಮುಂಬೈ ಮತ್ತು ಹೈದರಾಬಾದ್​ ಎರಡು ಕಡೆ ಓಡಾಡುತ್ತಿದ್ದಾರೆ. ಹೌದು ಮುಂಬೈನಲ್ಲಿ ರಾಕಿ ಭಾಯ್​ ಕಂಡ ಫ್ಯಾನ್ಸ್​ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಇನ್ನು ವೈರಲ್​ ಆದ ವಿಡಿಯೋದಲ್ಲಿ ರಾಕಿ ಭಾಯ್​ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿದ್ದು ಉದ್ದನೆಯ ಗಡ್ಡ ಉದ್ದವಾದ ಕೂದಲಿರುವ ಹೇರ್​​ಸ್ಟೈಲ್​ ಡೆನಿಮ್​ ಜಾಕೆಟ್​ನೊಂದಿಗೆ ಕಪ್ಪು ಕಲರ್​ ಕನ್ನಡಕ ಧರಿಸಿ ರಾಕಿ ಭಾಯ್​ ಮಿಂಚಿದ್ದಾರೆ. ಇನ್ನು ಇತ್ತ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿಳುವ ದೃಶ್ಯಗಳು ಈ ವಿಡಿಯೋದಲ್ಲಿದ್ದು ಇನ್ನೂ ಮಕ್ಕಳು ಸಹ ಯಶ್​ ರವರ ಜಾಕೆಟ್​ ಹಿಡಿದು ಭಾಯ್​ ಫೋಟೋ ಅಂತ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

ಈ ವಿಡಿಯೋ ಕಂಡ ಅಭಿಮಾನಿಗಳು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಝೀರೋ ಪರ್ಸೆಂಟ್​ ಆಟಿಟ್ಯೂಡ್​ ಹೊಂದಿರುವ ಓರ್ವ ಸೂಪರ್ ಸ್ಟಾರ್ ನಮ್ಮ ಯಶ್ ಅಂತ ಟ್ವೀಟ್​ ಮಾಡಿದ್ದು ಅಭಿಮಾನಿಗಳು ಫೋಟೋ ತೆಗಿಸಿಕೊಳ್ಳಲು ಬಂದಾಗ ಯಶ್​ ವರ್ತನೆ ಕಂಡು ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ. ಇಷ್ಟು ಕೂಲ್​ ಆಗಿ ಯಾವ ನಟರು ಸ್ಪಂದಿಸುವುದಿಲ್ಲ ಸಲಾಂ ರಾಕಿ ಭಾಯ್​ ಅಂತ ಟ್ವೀಟ್​ ಮಾಡಿದ್ದರು.

ರಾಕಿ ಭಾಯ್​ ಕೆಜಿಎಫ್​ 2 ಸಿನಿಮಾದ ಬಳಿಕ ಹೊಸ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಕಾರಣದಿಂದಾಗಿ ರಾಕಿ ಭಾಯ್​ ದಿಢೀರ್​ ಮುಂಬೈಗೆ ಹೋಗಿದ್ದು ಯಾಕೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಇನ್ನು ಇದೆಲ್ಲದರ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಯಶ್ ಕಂಡು ನೆಟ್ಟಿಗರು ಕೆಂಡಮಂಡಲವಾಗಿದ್ದಾರೆ. ಮೆಂಬೈ ಬೀದಿಯಲ್ಲಿ ಯಶ್ ನಡೆದುಕೊಂಡು ಹೋಗುತ್ತಿದ್ದಾಗ ಕಡು ಬಡವರ ಹುಡುಗನೊಬ್ಬ ರಾಕಿ ಭಾಯ್ ರಾಕಿ ಭಾಯ್ ಎಂದು ಹಿಂದೆ ಓಡುತ್ತಿದ್ದರು ಕೂಡ ಯಶ್ ಕ್ಯಾರೆ ಅಂದಿಲ್ಲ.

ಹೌದು ಒಂದೇ ಒಂದು ಫೋಟೋ ತೆಗೆಸಿಕೊಳ್ಳಲು ಯಶ್ ಹಿಂದೆ ಆಸೆ ಪಟ್ಟು ಓಡಿ ಹೋದರು ಯಶ್ ಮಾತ್ರ ತಿರುಗಿ ಸಹ ನೋಡದೆ ತಮ್ಮ ಪಾಡಿಗೆ ತಾವು ಕಾರ್ ಹತ್ತಿ ಹೊರಟು ಹೋಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ರವರನ್ನು ಉದಾಹರಣೆಯಾಗಿ ಕೊಟ್ಟು ಯಶ್ ರವರನ್ನು ಇದೀಹ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಈ ವಿಡಿಯೋ ನೋಡಿ ಯಶ್ ವರ್ತನೆ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.