ವಾರ್ತಾ ಮಂಜರಿ
Trending Stories, Viral News, Gossips & Everything in Kannada

Kantara: ರಿಷಬ್ ಶೆಟ್ಟಿ ಹಾಗು ಮುದ್ದಿನ ಮಡದಿ ಪ್ರಗತಿ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ..

84,257

ಸದ್ಯ ಇದೀಗ ಕಾಂತರಾ kantara  ಸಿನಿಮಾದ ಯಶಸ್ಸಿನ ಉತ್ತುಂಗದಲ್ಲಿರುವಂತಹ ರಿಷಬ್ ಶೆಟ್ಟಿಯವರು  (Rishab shetty ) ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಲೇ ಇದ್ದು ಹೀಗಿರುವಾಗ ಸದ್ಯ ರಿಶಬ್ ಶೆಟ್ಟಿ ಅವರ ವೈಯಕ್ತಿಕ ವಿಚಾರ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಅವರ ಪತ್ನಿ ಯಾರು? ಪ್ರೀತಿ ಆರಂಭ ಆಗಿದ್ದು ಹೇಗೆ? ಅವರಿಬ್ಬರ ನಡುವೆ ಇರುವಂತಹ ವಯಸ್ಸಿನ ಅಂತರ ಎಷ್ಟು ಎಂಬ ಎಲ್ಲ ಮಾಹಿತಿಯನ್ನು ಇಂದಿನ ಲೇಖನಿಯ ಮುಖಾಂತರ ತಿಳಿಸಲಿದ್ದೇವೆ. ಆದ್ದರಿಂದ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

೨೦೧೬ ರಲ್ಲಿ ರಿಷಬ್ ಶೆಟ್ಟಿ ಅವರ ನಿರ್ದೇಶನದ ಸಿನಿಮಾ ಬಿಡುಗಡೆಯಾಗುತ್ತು. ಹೌದು ಅಂದು ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿದುಕೊಳ್ಳಲು ಥಿಯೇಟರ್ ಗೆ ಭೇಟಿ ನೀಡಿದ್ದರು. ಅಂದಿನ ದಿನವೇ ಅವರ ಪತ್ನಿಯಾದ ಪ್ರಕೃತಿಯವರು ಸಹಿತ ಸಿನಿಮಾ ವೀಕ್ಷಿಸಲು ಬಂದಿದ್ದರು. ಇವರಿಬ್ಬರು ಎಂದು ಮೂಖಾಮುಖಿಯಾಗಿರಲಿಲ್ಲ ಆದರೆ ಪ್ರಗತಿಯವರಿಗೆ ರಿಷಬ್ ಒಬ್ಬ ನಿರ್ದೇಶಕ ಎಂಬುದು ಮಾತ್ರ ತಿಳಿದಿತ್ತು. ಆದರೆ ಪ್ರಗತಿಯವರು ರಕ್ಷಿತ್ ಶೆಟ್ಟಿ ಅವರ ಅಭಿಮಾನಿ ಯಾಗಿದ್ದು ಅವರಿಗೋಸ್ಕರ ರಿಕ್ಕಿ ಸಿನಿಮಾವನ್ನು ವೀಕ್ಷಿಸಲು ಬಂದಿದ್ದರು.

ಉಳಿದವರು ಕಂಡಂತೆ ಸಿನಿಮಾ ನೋಡಿದ ಮೇಲೆ ಪ್ರಗತಿ ಅವರಿಗೆ ರಕ್ಷಿತ್ ಶೆಟ್ಟಿ ಅವರು ಬಹಳ ಇಷ್ಟವಾಗಿದ್ದು ಆದುದರಿಂದ ರಿಕ್ಕಿ ಸಿನಿಮಾ ವೀಕ್ಷಿಸಲು ಅವರೊಡನೆ ಇದ್ದ ಮಂಗಳೂರು ಗಾಂಗ್ ಜೊತೆ ಸಿನಿಮಾಗೆ ಬಂದಿದ್ದರಂತೆ. ಆ ಸಮಯದಲ್ಲಿ ಥೀಯೇಟರ್ ಗೆ ಬಂದಿದ್ದ ರಿಷಬ್ ಅವರನ್ನು ನೋಡಿ ಇವರು ಉಳಿದವರು ಕಂಡಂತೆ ಸಿನಿಮಾದಲ್ಲಿ
ಅಭಿನಯಿಸದ್ದಾರೆ ಆಲ್ವಾ? ಎಂದು ತನ್ನ ಗೆಳತಿಯ ಬಳಿ ವಿಚಾರಿಸಿಕೊಂಡಿದ್ದಾರೆ.Rishab Shetty: ರಿಷಬ್​ ಶೆಟ್ಟಿ-ಪ್ರಗತಿ ಫ್ಯಾಮಿಲಿಯ ಸುಂದರ ಫೋಟೋ ಗ್ಯಾಲರಿ; ರಣ್ವಿತ್​  ಕ್ಯೂಟ್​ ನಗುವಿಗೆ ಎಲ್ಲರೂ ಫಿದಾ - Rishab Shetty wife Pragathi Shetty and son  Ranvith Shetty cute family ...

ರಿಕ್ಕಿ ಸಿನಿಮಾದ ಬಿಡುಗಡೆ ಸಮಯದಲ್ಲಿ ಎಲ್ಲಾ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತಿತ್ತು. ಸಿನಿಮಾ ಮಗಿದ ಮೇಲೆ ರಕ್ಷಿತ್ ಮತ್ತು ಹರಿಪ್ರಿಯಾ ಹತ್ತಿರ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದರೇ ಇತ್ತ ರಿಷಬ್ ಶೆಟ್ಟಿಯವರನ್ನು ಮಾತನಾಡಿಸುವವರ ಸಂಖ್ಯೆ ಕಮ್ಮಿ ಇತ್ತು. ಯಾಕೆಂದರೆ ಆಸಮಯದಲ್ಲಿ ರಿಷಬ್ ಅವರು ಅಷ್ಟು ಖ್ಯಾತರಾಗಿರಲಿಲ್ಲ ಹಾಗೂ ಸಿನಿಮಾ ಬಿಡುಗಡೆಯ ಯೋಚನೆಯಲ್ಲಿ ಗಡ್ಡವನ್ನು ಬಿಟ್ಟು ವಡ್ಡನಂತೆ ಕಾಣುತ್ತಿದ್ದರು. ಆದರು ಕೆಲವೊಂದು ಪ್ರೇಕ್ಷಕರು ಇವರು ನಿದೇಶಕರು ಎಂದು ಗುರುತಿಸಿ ಮಾತನಾಡಸಿಲು ಬರತ್ತಿದ್ದರಂತೆ ಆ ಸಾಲಿನಲ್ಲಿ ಪ್ರಗತಿ ಕೂಡ ಒಬ್ಬರು.

ಆದರೆ ಪ್ರಗತಿ ಅವರು ರಿಷಬ್ ಗೆ ಆಗಲೇ ಮದುವೆಯಾಗೋಗಿದೆ ಅಂದುಕೋಂಡಿದ್ದರಂತೆ. ಸ್ನೇಹಿತರೊಡನೆ ರಿಷಬ್ ಅವರ ಬಳಿ ಬಂದ ಪ್ರಗತಿ ಪರ್ವಾಗಿಲ್ಲ ನಮ್ ಊರಿನವರೆಲ್ಲ ಶೈನ್ ಆಗುತ್ತಿರಾ ಎಂದು ಪ್ರಶಂಸೆಯ ಮಾತನಾಡಿದ್ದು ಎಲ್ಲೋ ನೋಡುತ್ತಿದ್ದ ರಿಷಬ್ ಅವರು ಈ ಮಾತನ್ನು ಕೇಳಿ ಪಟ್ ಅಂತಾ ಪ್ರಗತಿ ಯ ಕಡೆ ನೋಡಿದ್ದಾರೆ. ಅವಾಗ್ಲೇ ನೋಡಿ ನಮ್ ರಿಷಬ್ ಅವರಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿದ್ದು ಪ್ರಗತಿಯವರ ಸ್ನೇಹಿತೆ ಅರ್ಪಿತಾ ಎನ್ನವವರು ಮಾತನಾಡುತ್ತಾ ಸಿನಿಮಾದಲ್ಲಿ ಪ್ರಗತಿ ಅವರಿಗೂ ಒಂದು ಅವಕಾಶ ಕೊಡಿ ಎಂದು ಕೇಳಿದ್ದು ಆಡಿಷನ್ ಅಟೆಂಡ್ ಮಾಡಿ ಎಂದು ಹೇಳಿ ರಿಷಬ್ ಮೆಟ್ಟಲು ಇಳಿಯುತ್ತಾ ಹೊರಡುತ್ತಿದ್ದರಂತೆ.

ನಂತರ ಮನಸ್ಸಿನಲ್ಲಿ ಪ್ರಗತಿಯನ್ನು ಎಲ್ಲೋ ನೋಡಿರಬಹುದು ಎಂದು ಯೋಚಿಸುತ್ತಾ ಫೇಸ್‌ಬುಕ್ ಅಲ್ಲಿ ನೋಡಿರಬೇಕು ಅಂದುಕೊಂಡು ಹುಡುಕಾಟ ಶುರು ಮಾಡಿದ್ದಾರೆ. ಸತತವಾಗಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದವರನೆಲ್ಲಾ ಹುಡುಕಲು ಪ್ರಾರಂಬಿಸಿದ ರಿಷಬ್ ಅವರಿಗೆ ಹೇಗೋ ಪ್ರಗತಿಯ ಪೇಸ್‌ಬುಕ್ ಖಾತೆ ಸಿಕ್ಕೆದೆ. ಹೀಗೆ ಸುಮಾರ ದಿನಗಳು ಇಬ್ಬರು ಪೇಸ್‌ಬುಕ್ ನಲ್ಲಿ ಮಾತುಕಥೆ ಶುರುಮಾಡಿದ್ದು ಹೀಗೇ ಕಿರಿಕ್ ಪಾರ್ಟಿ ರಿಲೀಸ್ ಸಮಯದಲ್ಲಿ ಪ್ರಗತಿ ಅವರು ಆಲ್ ದ ಬೆಸ್ಟ್ ಎಂದು ಮೇಸೇಜ್ ಮಾಡಿದ್ದರಂತೆ ತಕ್ಷಣ ರಿಷಬ್ ನಿಮ್ಮ ನಂಬರ್ ಕೊಡಿ ಎಂದು ಕೇಳಿದ್ದಾರೆ.

Progress, Rakshit Name What is saved in Mobile? The answer given by Rishab  Shetty was: Rakshit Shetty And Wife Pragathi Shetty Name – filmyzoo –  Hindisip
ದಿನ ಕಳೆದ ಮೇಲೆ ಒಬ್ಬರನೊಬ್ಬರು ನೋಡಬೇಕು ಎಂದು ಒಂದೆಡೆ ಮೀಟ್ ಆಗಿದ್ದಾರೆ ಮೀಟ್ ಮಾಡಲು ರಿಷಬ್ ಕರೆದಾಗ ಪ್ರಗತಿ ಮೊದಲು ಅವರ ಬ್ಯಾಗ್‌ಗ್ರೌಂಡ್ ತಿಳಿದು ನಂತರ ಯೋಚಿಸಿ ಮೀಟ್ ಮಾಡಲು ಹೋದರಂತೆ. ತದ ನಂತರ ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಬೇಕೆಂದು ಮಾತನಾಡಿದ್ದಾರೆ. ಆದರೆ ಪ್ರಗತಿ ಅವರ ಮನೆಯಲ್ಲಿ ಸಿನಿಮಾದವರಿಗೆ ಮದುವೆ ಮಾಡಿ ಕೊಡಲ್ಲ ಎಂದು ಹೇಳಿದ್ದರಂತೆ.

ಆದರೆ ರಿಷಬ್ ಅವರ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡ ಪೋಷಕರು ತಮ್ಮ ಮಕ್ಕಳ ಆಸೆಯಂತೆ ಮದುವೆಯಾಗಲು
ಒಪ್ಪಿದ್ದಾರೆ. ರಿಷಬ್ ಶೆಟ್ಟಿಯವರು ಫೆಬ್ರವರಿ 9 ನೇ ತಾರೀಕು 2017 ರಂದು ಪ್ರಗತಿಶೆಟ್ಟಿ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು
ಇವರಿಬ್ಬರ ಪ್ರೀತಿಗೆ ಸಾಕ್ಷಿ ಎಂಬಂತೆ ರನ್ವಿತ್ ಶೆಟ್ಟಿ ಮುದ್ದಾದ ಗಂಡು ಮಗು ಕೂಡ ಜನಿಸಿದೆ. ಇನ್ನು ರಿಷಬ್ ಶೆಟ್ಟಿಯವರಿಗೆ ವಯಸ್ಸು 39 ಆದರೆ ಪ್ರಗತಿಶೆಟ್ಟಿಯವರಿಗೆ 37 ವರ್ಷ ವಯಸ್ಸಾಗಿದೆ. ಹೀಗಾಗಿ ಇವರಿಬ್ಬರ ನಡುವೆ ಕೇವಲ ಎರಡು ವರ್ಷಗಳ ವಯಸ್ಸಿನ ಅಂತರವಿರುವ ಕಾರಣ ಇವರಿಬ್ಬರ ನಡುವೆ ಹೊಂದಾಣಿಕೆ ಎಂಬುದು ಬಹಳ ಚೆನ್ನಾಗಿದ್ದು
ಪ್ರಗತಿ ಶೆಟ್ಟಿ ಅವರು ಗಂಡನ ಯಶಸ್ವಿಗೆ ಕಾರಣವಾಗಿದ್ದಾರೆ ಎಂದರೆ ತಪ್ಪಾಗಲಾರದು.