ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸುಂದರವಾದ ಗಿಣಿ ಹಿಡಿಯಲು ಈತ ಮಾಡಿರುವ ಪ್ಲಾನ್ ನೋಡಿ…ವಿಡಿಯೋ

4,095

ಸಾಮಾನ್ಯವಾಗಿ ಈ ಪ್ರಕೃತಿಯ ಮುಂದೆ ಮಾನುಷ್ಯನ ಸಾಧನೆ ಏನೂ ಅಲ್ಲ ಬಿಡಿ. ಆತ ಎಂತಹ ಆವಿಷ್ಕಾರಗಳನ್ನೂ ಮಾಡಿದರೂ ಅದಕ್ಕೆ ಪ್ರಕೃತಿಯ ಸಹಕಾರ ಬೇಕೇ ಬೇಕು. ಮನುಷ್ಯನು ಹಕ್ಕಿಗಳನ್ನ ನೋಡಿ ವಿಮಾನ ಕಂಡುಹಿಡಿದ ವಿಮಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ಬುತ. ಶಬ್ದದ ವೇಗವನ್ನೂ ಮೀರಿ ಸಾಗುವ ವಿಮಾನಗಳನ್ನು ತಯಾರಿಕೆಯನ್ನೂ ನಾವು ಮಾಡತೊಡಗಿದ್ದೇವೆ. ಅವುಗಳಲ್ಲಿ ಕುಳಿತು ಹಕ್ಕಿಗಳಿಗಿಂತ ವೇಗವಾಗಿ ಅವಕ್ಕಿಂತ ಎತ್ತರದಲ್ಲೂ ಹಾರಿ ಸಂಭ್ರಮಿಸುತ್ತಿದ್ದೇವೆ. ಆದರೆ ಮನುಷ್ಯ ಇದೀಗ ಈ ರೀತಿಯಾದ ಹಕ್ಕಿಗಳನ್ನೆ ಹಿಡಿದು ತಿನ್ನಲು ಪ್ರಾರಂಭಿಸಿದ್ದಾನೆ. ಮನುಷ್ಯ ಎಷ್ಟು ಬುದ್ದಿವಂತ ಎಂದರೆ ಈ ಭೂಮಂಡಲದಲ್ಲಿ ಅವನಷ್ಟು ಬುದ್ದಿವಂತ ಹಾಗೂ ನಿಪೂಣ ಬೇರೆ ಯಾವ ಜೀವಿಗಳಲ್ಲೂ ನೋಡಲು ಸಾಧ್ಯವಾಗುವುದಿಲ್ಲ. ಅಂತೆಯೇ ಅವನ ಬುದ್ದಿ ಉಪಯೋಗಿಸಿ ಅನಿಗೆ ಬೇಕಾದ ಆಹಾರ ಹಣ ಎಲ್ಲವನ್ನು ಕೂಡ ಸಂಪಾದಿಸಿಕೊಳ್ಳುತ್ತಾನೆ.

ಇನ್ನು ಹಕ್ಕಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸ್ವತಂತ್ರವಾಗಿ ಬಾನೆತ್ತೆಕ್ಕೆ ಹಾರುತ್ತಾ ಚಿಲಿಪಿಲಿ ಎಂದು ಗುನುಗುತ್ತಾ ಮರಗಳ ಮೇಲೆ ಕುಳಿತು ನರ್ತಿಸುತ್ತಾ ತನ್ನ ಬಣ್ಣಗಳಿಂದ ಪ್ರತಿಯೊಬ್ಬ ಮನುಷ್ಯನನ್ನು ಗಮನ ಸೆಳೆಯುತ್ತವೆ. ಕೆಲವರು ಈ ಪಕ್ಷಿಗಳ ಕಲರವ ಕೇಳಲೆಂದೇ ಅರಣ್ಯದತ್ತ ಪ್ರಯಾಣ ನಡೆಸುತ್ತಾರೆ. ಹೌದು ಆಕಾಶದಲ್ಲಿ ಗುಂಪಾಗಿ ಅವುಗಳು ಹಾರುತ್ತ ಎತ್ತರದ ಮರಗಳಲ್ಲಿ ಅವುಗಳ ಚಿಲಿಪಿಲಿ ಎಂದು ಗುನುಗುವ ಶಬ್ದವನ್ನು ಕೇಳಿದರೆ ಏನೋ ಒಂದು ರೀತಿ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಹೌದು ಸಾಕಷ್ಟು ಜನರು ಇವುಗಳ ಪೋಟೋ ಸೆರೆಹಿಡಿಯಲೂ ದಿನ ಪೂರ್ತಿ ಕಾಡಿನಲ್ಲಿ ನೆಲೆಸಿರುತ್ತಾರೆ. ದಿನಕಳೆದಂತೆ ಪಕ್ಷಿಗಳ ಸಂತತಿ ಕೂಡ ಕಾಣೆಯಾಗುತ್ತಿದ್ದು ನಮ್ಮ ಬಾಲ್ಯದಲ್ಲಿ ಕಾಣುತ್ತಿದ್ದ ಗುಬ್ಬಚ್ಚಿಗಳು ಕೂಡ ಗಪ್ ಚಿಪ್ ಆಗಿಬಿಟ್ಟಿವೆ. ಈ ಮನುಷ್ಯ ಜೀವಿ ತನ್ನ ದುರಾಸೆಯಿಂದ ಕಾಡುಗಳನ್ನು ಕಡೆಯುತ್ತಿದ್ದು ಇದರ ಪರಿಣಾಮ ಪಕ್ಷಿಗಳಿಗೆ ಗೂಡಿಲ್ಲದೇ ಅದೆಷ್ಟೋ ಗುಂಪುಗಳು ನಾಶವೇ ಆಗಿ ಬಿಟ್ಟಿದೆ.

ಇನ್ನು ೮೦ ಹಾಗೂ ೯೦ ರ ದಶಕದ ಗ್ರಾಮಂತರ ಪೀಳಿಗೆಗಳಿಗೆ ಬೇಸಿಗೆ ರೆಜೆ ಅಥವಾ ಬಾನುವಾರದಂತಹ ರೆಜೆ ದಿನಗಳು ಬಂದರೆ ಸಾಕು ಎತ್ತರದ ಮರಗಳನ್ನೇರಿ ಪಕ್ಷಿಗಳನ್ಬು ಹಿಡಿದು ತಂದು ಸಾಕುವುದೇ ಅವರಿಗೆ ಆಟವಾಗಿತ್ತು. ಗಿಳಿಗಳು ಹಾಗೂ ಪಾರಿವಾಳಗಳು ಎಲ್ಲಿ ಗೂಡು ಕಟ್ಟುತ್ತವೆ ಎಂಬುದನ್ನು ತಿಳಿದು ಯಾವುದೇ ಆಯುಧಗಳನ್ನು ಬಳಸದೇ ಪಕ್ಷಿಗಳನ್ನು ಹಿಡಿದು ಮನೆಗೆ ತಂದು ಸಾಕುತ್ತಿದ್ದರು. ಹೀಗೆ ಪಕ್ಷಿಗಳನ್ನು ಹಿಡಿದು ಚೆನ್ನಾಗಿ ಸಾಕಬೇಕು ಎಂಬ ಯೋಚನೆ ಹಾಗೂ ಸಂತೋಷ ಅವರಲ್ಲಿದ್ದರೆ ಗೂಡು ಸೇರಿ ಬಿಟ್ಟೆನಲ್ಲ ಎಂಬ ನೋವು ಆತಂಕ ಆ ಪಕ್ಷಿಯ ಮನದಲಿತ್ತು.

ಆದರೆ ಇದೀಗ ಕಾಲ ಬದಾಲಗಿದೆ ಯಾವ ಮಕ್ಕಳು ಕೂಡ ಮರ ಹತ್ತಿ ಪಕ್ಷಿ ಹಿಡಿಯುವ ಸಾಹಸ ಮಾಡುವುದಿಲ್ಲ. ಇನ್ನು ಹಕ್ಕಿಗಳೆಂದರೆ ಕೇವಲ ಹಕ್ಕಿಗಳಲ್ಲ. ಜೀವವೈವಿಧ್ಯದಲ್ಲಿ ಹಕ್ಕಿಗಳದ್ದೇ ವಿಶಿಷ್ಟ ವಿಸ್ಮಯಕಾರಿ ಜಗತ್ತಿದೆ. ಹಕ್ಕಿಯೊಂದರ ಬದುಕನ್ನು ಬೆಂಬೆತ್ತಿದರೆ ಹತ್ತು ಹಲವು ಕೌತುಕದ ವಿಷಯಗಳು ತಿಳಿಯುತ್ತವೆ. ಆದರೆ ಹಕ್ಕಿಯ ಜಾಡು ಹಿಡಿಯವುದು ಸುಲಭವಲ್ಲ. ಹೌದು ಅದಕ್ಕೆ ನಿರಂತರ ಅಧ್ಯಯನಶೀಲತೆ ತಾಳ್ಮೆ ಗ್ರಹಣ ಶಕ್ತಿ ಅಗತ್ಯ. ಆದರೆ ಇಲ್ಲೊಬ್ಬ ಯುವಕ ತನ್ಮ ಯೋಚನಾ ಶಕ್ತಿಯಿಂದ ಯವುದೇ ಮರ ಹತ್ತದೆ ಸುಲಭಾವಾಗಿ ಪಕ್ಷಿಯೊಂದನ್ನು ಹೇಗೆ ಹಿಡಿದಿದ್ದಾನೆ ನೀವೆ ನೋಡಿ.