ದಕ್ಷಿಣದ ಖ್ಯಾತ ನಿರ್ದೇಶಕ, ಹಿಟ್ ಚಿತ್ರಗಳನ್ನು ಚಿತ್ರೋದ್ಯಮಕ್ಕೆ ನೀಡಿರುವ ರಾಜಮೌಳಿ ಕುರಿತು ಗುರುತರ ಆಪಾದನೆಯೊಂದು ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಹಿಂದಿಯ ಬ್ರಹ್ಮಾಸ್ತ್ರ ಸಿನಿಮಾವನ್ನು ಪ್ರಚಾರ ಮಾಡಲು ಮತ್ತು ಗೆಲ್ಲಿಸಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರು ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
RRR’ ಬಳಿಕ ಮಹೇಶ್ ಬಾಬು ಜೊತೆಗೆ ಹೊಸ ಸಿನಿಮಾ ಘೋಷಿಸಿರುವ ರಾಜಮೌಳಿ ಈ ನಡುವೆ ಆ ಸಿನಿಮಾದ ಕೆಲಸಗಳನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಈ ನಡುವೆ ಹಿಂದಿ ಸಿನಿಮಾ ಒಂದರ ಸಲುವಾಗಿ ಬಹಳ ಶ್ರಮಪಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಅದುವೆ ‘ಬ್ರಹ್ಮಾಸ್ತ್ರ’. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಮೊದಲ ಎರಡು ದಿನದಲ್ಲೇ 160 ಕೋಟಿ ರೂಪಾಯಿ ಗಳಿಸಿದೆ. ಈ ಕುರಿತು ಸ್ವತಃ ನಿರ್ಮಾಪಕ ಕರಣ್ ಜೋಹರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಆದರೆ ಇದು ಪಕ್ಕಾ ಫೇಕ್ ಲೆಕ್ಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಗನಾ ಈ ಚಿತ್ರದ ಬಾಕ್ಸ್ ಆಫೀಸ್ ಲೆಕ್ಕ ಸಂಪೂರ್ಣ ನಿಜವಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಹೌದು ಅದಕ್ಕೆ ಸಂಬಂಧಿಸಿದ ಪೋಸ್ಟ್ಗಳನ್ನು ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ, ಈ ಸಿನಿಮಾದ ಪ್ರಚಾರಕ್ಕಾಗಿ ರಾಜಮೌಳಿಯವರಿಗೆ ಚಿತ್ರತಂಡವು ನೀಡಿದ ಹಣದ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ. ರಣ್ಬೀರ್ ಕಪೂರ್-ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಾಜಮೌಳಿ ತಮ್ಮನ್ನು ತಾವು ಬಹುವಾಗಿ ತೊಡಗಿಸಿಕೊಂಡಿದ್ದಾರೆ. ಹಿಂದಿ ಸಿನಿಮಾದ ಮೇಲೆ ರಾಜಮೌಳಿಗೇಕೆ ಇಷ್ಟೋಂದು ಆಸಕ್ತಿ ಎಂದು ಹಲವರು ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಕಾರಣ ಇದೆ.
ಬ್ರಹ್ಮಾಸ್ತ್ರ’ ಸಿನಿಮಾ ತಂಡ ಆಂಧ್ರ, ತೆಲಂಗಾಣಕ್ಕೆ ಬಂದಾಗಲೆಲ್ಲ ರಾಜಮೌಳಿ, ಸಿನಿಮಾ ತಂಡದ ಜೊತೆಗೆ ಪ್ರಚಾರಕ್ಕೆ ಹೋಗಿದ್ದಾರೆ. ಸತತವಾಗಿ ಸಿನಿಮಾದ ಬಗ್ಗೆ ಪೋಸ್ಟ್ಗಳನ್ನು ಹಾಕಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಈ ಸಿನಿಮಾದ ಪ್ರಚಾರ ಹೇಗಿರಬೇಕು ಎಂಬ ಡಿಸೈನ್ ಅನ್ನು ಸಹ ಅವರೇ ಮಾಡಿದ್ದಾರೆ. ರಣ್ಬೀರ್ ಹಾಗೂ ಆಲಿಯಾಗೆ ತೆಲುಗು ಜನರನ್ನು ಆಕರ್ಷಿಸಲು ತೆಲುಗಿನ ಸಂಭಾಷಣೆಗಳನ್ನು ಬರೆದುಕೊಟ್ಟಿದ್ದಾರೆ.
ಇವುಗಳ ಜೊತೆಗೆ ಚಿತ್ರತಂಡ ಹೋದಲ್ಲೆಲ್ಲ ತಾವೂ ಚಿತ್ರತಂಡದ ಜೊತೆಗೆ ಹೋಗಿ ವೇದಿಕೆ ಹಂಚಿಕೊಂಡು ಪ್ರಚಾರ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ರಾಜಮೌಳಿ ‘ಬ್ರಹ್ಮಾಸ್ತ್ರ’ ಸಿನಿಮಾದ ವಿತರಣೆ ಹಕ್ಕನ್ನು ಖರೀದಿಸಿರುವುದು. ಸಿನಿಮಾವನ್ನು ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ರಾಜಮೌಳಿಯವರು ತಮ್ಮೊಬ್ಬ ಗೆಳೆಯನ ಜೊತೆ ಸೇರಿ ವಿತರಣೆ ಮಾಡುತ್ತಿದ್ದಾರೆ. ರಾಜಮೌಳಿಯ ಮಿತ್ರ ಬಳ್ಳಾರಿ ಸಾಯಿ ಜೊತೆ ಸೇರಿ ಬ್ರಹ್ಮಾಸ್ತ್ರ ಸಿನಿಮಾವನ್ನು ರಾಜಮೌಳಿ ವಿತರಣೆ ಮಾಡುತ್ತಿದ್ದಾರೆ.
ಬ್ರಹ್ಮಾಸ್ತ್ರ’ ಸಿನಿಮಾದೊಟ್ಟಿಗೆ ರಾಜಮೌಳಿ ಮಾತ್ರವೇ ಅಲ್ಲದೆ ಅವರ ಪುತ್ರ ಕಾರ್ತಿ ಸಹ ಗುರುತಿಸಿಕೊಂಡಿದ್ದಾರೆ. ಕಾರ್ತಿ ಸಿನಿಮಾ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಸಿನಿಮಾ ಯುನಿಟ್ ಉದ್ಯಮ ನಡೆಸುತ್ತಿದ್ದು, ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರಚಾರ ಕಾರ್ಯದ ಆಯೋಜನೆಯನ್ನು ಕಾರ್ತಿಯೇ ನೋಡಿಕೊಂಡಿದ್ದಾರೆ. ಇದಕ್ಕಾಗಿ ಕೋಟ್ಯಂತರ ಹಣ ಶುಲ್ಕವನ್ನೂ ಕಾರ್ತಿ ಪಡೆದಿದ್ದಾರೆ. ‘RRR’ ಸಿನಿಮಾದ ಪ್ರಚಾರದ ಮೇಲುಸ್ತುವಾರಿಯನ್ನು ಕಾರ್ತಿಯ ಸಂಸ್ಥೆಯೇ ನೋಡಿಕೊಂಡಿತ್ತು.
ಬ್ರಹ್ಮಾಸ್ತ್ರ’ ಸಿನಿಮಾಕ್ಕೆ ರಾಜಮೌಳಿ ಮಾತ್ರವೇ ಅಲ್ಲದೆ ತೆಲುಗಿನ ನಟ ನಾಗಾರ್ಜುನ ಸಹ ಸಾಥ್ ನೀಡಿದ್ದಾರೆ. ಆದರೆ ನಾಗಾರ್ಜುನ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿರುವ ಕಾರಣ ಅವರು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ರಾಜಮೌಳಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಸಾಕಷ್ಟು ಸಿದ್ಧತೆ ಇರುತ್ತದೆ. ಅದೇ ರೀತಿ ಅವರು ಒಂದು ಸಿನಿಮಾ ಪ್ರೆಸೆಂಟ್ ಮಾಡಲು ಒಪ್ಪಿಕೊಂಡರು ಎಂದರೆ ಆ ಚಿತ್ರದಲ್ಲಿ ಏನೋ ವಿಶೇಷತೆ ಇದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಹೀಗಾಗಿ, ರಾಜಮೌಳಿ ಅವರಿಂದಾಗಿ ಹಲವರು ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದಾರೆ.