ಚಿತ್ರರಂಗದಲ್ಲಿ ಆಗ ತಾನೇ ಸ್ಟಾರ್ ಪಟ್ಟ ಪಡೆದಿದ್ದ ಸುಶಾಂತ್ ಅವರು ಮೃತಪಟ್ಟ ವಿಚಾರ ಸಾಕಷ್ಟು ಜನರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಅವರು ಮೃತಪಟ್ಟು ಇಂದಿಗೆ ಎರಡು ವರ್ಷ ಕಳೆದಿದೆ. ಆದಾಗ್ಯೂ ಅವರ ಸಾವಿನ ರಹಸ್ಯ ಮಾತ್ರ ಹೊರಬಿದ್ದಿಲ್ಲ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಭಾರತೀಯ ಚಿತ್ರರಂಗವನ್ನೇ ದಿಗ್ಭ್ರಮೆಗೊಳಿಸಿತ್ತು. ಹಿಂದಿ ಚಿತ್ರರಂಗದ ಹ್ಯಾಂಡ್ಸಮ್ ಹಂಕ್ ಆಗಿದ್ದ ಸುಶಾಂತ್ ಸಿಂಗ್, 2020 ಜೂನ್ 14ರಂದು ಬಾಂದ್ರಾದ ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇ ಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೇವಲ ಬಾಲಿವುಡ್ ಅಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಯ ಸುಶಾಂತ್ ಸಿಂಗ್ ಅಭಿಮಾನಿಗಳು ಯುವ ನಟನ ದಿಢೀರ್ ಅಗಲಿಕೆಗೆ ಕಣ್ಣೀರು ಹಾಕಿದ್ದರು.
ಸುಶಾಂತ್ ಸಿಂಗ್ ಸಾವು ಇಂದಿಗೂ ನಿಗೂಢವಾಗಿದ್ದು, ಈ ಬಗ್ಗೆ ಅನೇಕ ವಿಚಾರಗಳು ಆಗಾಗ ಮುಖ್ಯಭೂಮಿಕೆಗೆ ಬಂದು ಹೋಗುತ್ತಿರುತ್ತವೆ. ನಟನ ಒಳಾಂಗ ಮತ್ತು ಶವಪರೀಕ್ಷೆಯ ವರದಿಗಳನ್ನು ಸಂಗ್ರಹಿಸಿದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ವೈದ್ಯರ ಸಮಿತಿಯು ಅಕ್ಟೋಬರ್ನಲ್ಲಿ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ, ಅವರು ಕೊಲೆಯಾಗಿಲ್ಲ ಎಂದು ಕೇಂದ್ರ ಸಂಸ್ಥೆಗೆ ಮಾಹಿತಿ ನೀಡಿದ್ದರು. ಸ್ಥಳೀಯ ಬಾಂದ್ರಾ ಪೊಲೀಸರು ಆಕಸ್ಮಿಕ ಸಾವಿನ ವರದಿಯನ್ನು (ಎಡಿಆರ್) ಲಗತ್ತಿಸಿ, ಚಲನಚಿತ್ರ ತಾರೆಯರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದ್ದರು.
ಮರಣೋತ್ತರ ವರದಿಯು ಸಹ ಆ ತ್ಮ ಹ ತ್ಯೆ ಯ ಬಗ್ಗೆ ಸೂಚಿಸಿತ್ತು.ಮೊದಲು ಸುಶಾಂತ್ ಸಿಂಗ್ ಸಾವನ್ನು ಆತ್ಮಹತ್ಯೆ ಎಂದು ಕರೆಯಲಾಗಿದ್ದು, ನಟ ಖಿನ್ನತೆಯಿಂದ ಬಳಲುತ್ತಿದ್ದರು, ಹೀಗಾಗಿ ನೇಣಿಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಸುಶಾಂತ್ ಸಿಂಗ್ ಕುಟುಂಬಸ್ಥರು, ಆಪ್ತರು ಹಾಗೂ ಅಪಾರ ಅಭಿಮಾನಿಗಳು ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ದೃಢವಾಗಿ ವಾದಿಸಿದ್ದರು. ಇದಾದ ಬಳಿಕ
ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ನಟನ ಮರಣದ ಒಂದು ತಿಂಗಳ ನಂತರ, ಸುಶಾಂತ್ ಸಿಂಗ್ನನ್ನು ಹತ್ಯೆಗೈದ ಬಗ್ಗೆ ಹಲವಾರು ಸಿದ್ಧಾಂತಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಆರಂಭವಾದವು. ಬಳಿಕ ಹಲವು ನಟನಟಿಯರು ಈ ವಿವಾಧದಲ್ಲಿ ಸಿಲುಕಿಕೊಂಡರು.
ಎರಡು ವರ್ಷದ ಬಳಿಕ ಸುಶಾಂತ್ ಸಿಂಗ್ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಬಾಲಿವುಡ್ ನಟ ಆಮೀರ್ ಖಾನ್ ಸಹೋದರ ಸುಶಾಂತ್ ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ನಟ ಫೈಸಲ್ ಖಾನ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ಕೆಲ ಆಪ್ತರು ಹಾಗೂ ಅಭಿಮಾನಿಗಳಂತೆ ಫೈಸಲ್ ಖಾನ್ ಕೂಡ ಇದೊಂದು ವ್ಯವಸ್ಥಿತ ಕೊಲೆ ಎನ್ನುವುದನ್ನು ನಂಬಿದ್ದಾರೆ.
ಫೈಸಲ್ ಖಾನ್ ಇತ್ತೀಚಿಗೆ ಟೈಮ್ಸ್ ನೌ ನವಭಾರತದ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದು, ಸುಶಾಂತ್ ಸಿಂಗ್ ರಜಪೂತ್ ಕೊಲೆಯಾಗಿದ್ದಾನೆ ಎಂದು ನನಗೆ ತಿಳಿದಿದೆ. ಸತ್ಯ ಯಾವಾಗ ಹೊರ ಬರುತ್ತದೆಯೋ, ಇಲ್ಲವೊ ಗೊತ್ತಿಲ್ಲ. ಆದರೆ ಸಮಯ ಎಲ್ಲವನ್ನೂ ಹೇಳುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ಎಷ್ಟೇ ತನಿಖೆ ನಡೆದರೂ ಸತ್ಯ ಹೊರ ಬರುವುದಿಲ್ಲ. ಆದರೆ ಸುಶಾಂತ್ ಸಿಂಗ್ ಸಾವಿನ ಸತ್ಯ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಆಗಾಗ ಸುಶಾಂತ್ ಫೋಟೋಗಳನ್ನು ಶೇರ್ ಮಾಡಿ ಆತನೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದು ಈಗಾಗಲೇ ಸಾಕಷ್ಟು ಬಾರಿ ಇದು ಕೊ ಲೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.
ಸುಶಾಂತ್ ಸಾವಿಗೆ ಕಾರಣ ಬಾಲಿವುಡ್ನಲ್ಲಿರುವ ನೆಪೋಟಿಸಂ ಕಾರಣ ಎಂದು ಹೇಳಲಾಗುತ್ತಿದ್ದು, ನಟನ ಅಗಲಿಕೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ದೊಡ್ಡ ಅಭಿಯಾನವೇ ನಡೆದಿತ್ತು. ಸುಶಾಂತ್ ಸಾವನ್ನಪ್ಪಿದ್ದ ನಂತರ ಬಾಯ್ಕಾಟ್ ಸ್ಟಾರ್ ಕಿಡ್ಸ್ ಹಾಗೂ ಕರಣ್ ಜೋಹರ್ ವಿರುದ್ಧ ಸಾಕಷ್ಟು ಪೋಸ್ಟ್ಗಳನ್ನು ಮಾಡಲಾಗಿತ್ತು. ಅದೇನೇ ಇರಲಿ ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಮಾಡಿದ ಪಾತ್ರಗಳ ಮೂಲಕ ನೆನಪಾಗಿ ನಮ್ಮೊಂದಿಗೆ ಯಾವಾಗಲೂ ಮಾನಸಿಕವಾಗಿ ಇರುತ್ತಾರೆ. ಆದರೂ ಅಬಿಮಾನಿಗಳ ಬಾಯಲ್ಲಿ ಸದ್ಯ ಬರುವುದು ಒಂದೇ ಮಾತು ವಿ ಮಿಸ್ ಯೂ ಸುಶಾಂತ್ ಎನ್ನುವುದು.