ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜೊತೆ ಜೊತೆಯಲಿ ಧಾರವಾಹಿಯಿಂದ ಅನಿರುಧ್ ಕಿಕ್ ಔಟ್ ಬಳಿಕ ಮೇಘಾ ಶೆಟ್ಟಿ ಮಾಡಿರುವ ಕೆಲಸ ನೋಡಿ

122
ಮೇಘಾ  ಶೆಟ್ಟಿ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು ಜೊತೆ ಜೊತೆಯಲಿ ಸೀರಿಯಲ್ ನಲ್ಲಿನ ಅನು ಪಾತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ರವರ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿದ್ದಾರೆ.  ಜೊತೆ ಜೊತೆಯಲಿ ಸೀರಿಯಲ್​ನಿಂದ ನಟ ಅನಿರುದ್ಧ್ ಅವರನ್ನು ತೆಗೆದುಹಾಕಿದ್ದಾರೆ. ಸೀರಿಯಲ್ ಸೆಟ್​​ನಲ್ಲಿ ಅನಿರುದ್ಧ್ ಅವರ ವರ್ತನೆ ಅತಿರೇಕಕ್ಕೆ ತಿರುಗಿದ ಹಿನ್ನೆಲೆ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ ಎಂದು ನಿರ್ಮಾಪಕ ಆರೂರು ಜಗದೀಶ್ ಹೇಳಿದ್ದರು. ಆರ್ಯವರ್ಧನ್​ ಹಾಗೂ ಅನು ಸಿರಿಮನೆ ಜೋಡಿಯನ್ನು ಪ್ರೇಕ್ಷಕರು ಸಖತ್​ ಇಷ್ಟಪಟ್ಟಿದ್ದಾರೆ. ಆದ್ರೆ ಇದೀಗ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ್ ಅವರನ್ನು ಕಿತ್ತು ಹಾಕಲಾಗಿದೆ. ಅನು ಸಿರಿಮನೆ ಪಾತ್ರಧಾರಿ ನಟಿ ಮೇಘಾ ಶೆಟ್ಟಿ ಏನು ಹೇಳಿದ್ದಾರೆ ಎಂಬ ಕುರಿತು ಈ ಲೇಖನ.
ಜೀ ಕನ್ನಡ ವಾಹಿನಿಯಲ್ಲಿ ಪ್ರಾಸವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ್ ಕಿರಿಕ್ ಮಾಡಿಕೊಂಡ  ಹಿನ್ನಲ್ಲೆ ಅನಿರುದ್ಧ್ ಅವರನ್ನು ಕಿರುತೆರೆಯಿಂದನೇ ಕಿಕ್ ಔಟ್ ಮಾಡಲಾಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ. ಈ ವಿವಾದದ ಬಗ್ಗೆ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತಿರುವ  ​ಮೇಘಾಶೆಟ್ಟಿ ಪ್ರತಿಕ್ರಿಯಿಸಿದ್ದು, ತಮ್ಮ ಮೌನ ಮುರಿದಿದ್ದಾರೆ.
ವಿಭಿನ್ನ ಪ್ರೇಮಕಥೆಯ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಷ್ಟೇ ಅನು ಸಿರಿಮನೆ ಪಾತ್ರಕ್ಕೂ ಪ್ರಾಮುಖ್ಯತೆ ಇದೆ.
ಅನು ಸಿರಿಮನೆ ಎಂದೇ ಮನೆ ಮಾತಾಗಿರುವ ಮೇಘಾಶೆಟ್ಟಿ, ಅನಿರುದ್ಧ್ ಅವರನ್ನು ಕಿರುತೆರೆಯಿಂದನೇ ಕಿಕ್ ಔಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಇದು ಅವರ ವ್ಯಯಕ್ತಿಕ ವಿಚಾರ ಇದರ ಬಗ್ಗೆ ನಾನು ಮಾತನಾಡುವುದು ಸರಿ ಬರುವುದಿಲ್ಲ, ನಾನೇನೆ ಮಾತನಡಿದ್ದರೂ ಅದು ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಈ ಬಗ್ಗೆ ನಾನು ಯಾವುದೇ ಕಮೆಂಟ್​ ಮಾಡುವುದಿಲ್ಲ.  ಕೆಲವೊಂದು ಸರಿ ಆ ರೀತಿ ವರ್ತಿಸಿದ್ದು ಇದೆ.

 

ಅನಿರುದ್ಧ್​ ಅವರನ್ನು ಸೀರಿಯಲ್​ನಿಂದ ಹೊರಗಿಟ್ಟಿರೋ ವಿಚಾರಕ್ಕೆ ಪ್ರತಿಕ್ರಿಯಿಸಿರೋ ನಟಿ ಮೇಘಾ ಶೆಟ್ಟಿ, ಸೀರಿಯಲ್​ ಸೆಟ್​ ನಲ್ಲಿ ಗಲಾಟೆ ಆಗಿದ್ದು ನಿಜ. ಸಣ್ಣ ಪುಟ್ಟ ಗಲಾಟೆಗಳು ಸಹ ನಡೆಯುತ್ತಿರುತ್ತೆ. ಇಷ್ಟು ದಿನ ಸಂಧಾನದ ಮೂಲಕ ಎಲ್ಲವೂ ಸರಿ ಹೋಗಿದೆ. ಈ ವಿಚಾರದಲ್ಲೂ ಎಲ್ಲಾ ಒಳ್ಳೆಯದ್ದೇ ಆಗುತ್ತದೆ ಎಂದು ಸಂದರ್ಶನದಲ್ಲಿ  ಮೇಘಾ ಶೆಟ್ಟಿ ಹೇಳಿದ್ದಾರೆ. ಒಂದು ಜನಪ್ರಿಯ ಧಾರಾವಾಹಿಯ ನಾಯಕ ನಟನನ್ನು ಕೈಬಿಡುವುದೆಂದರೆ  ತಮಾಷೆಯ ಮಾತಲ್ಲ. ಆದರೆ’ ಜೊತೆ ಜೊತೆಯಲಿ’ ತಂಡ ಇಂತಹದೊಂದು ರಿಸ್ಕ್ ತಗೊಂಡಿದೆ. ಎಲ್ಲಾ ಒಳ್ಳೆಯದೇ ಆಗುತ್ತದೆ ಅನ್ನುವ ನಂಬಿಕೆ ಇದೆ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.