ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಾಯಿ ಹೀಗೆ ಮಾಡುತ್ತೆ ಅಂತ ಅಂದುಕೊಂಡಿರಲಿಲ್ಲ…ಚಿಂದಿ ವಿಡಿಯೋ

487
Join WhatsApp
Google News
Join Telegram
Join Instagram

ಶ್ವಾನ (Dog) ಮನುಷ್ಯನ ಮೊದಲ ಸಾಕುಪ್ರಾಣಿ (Domestic animal)ಎನ್ನುವುದರಲ್ಲಿ ಅನುಮಾನ ಉಳಿದಿಲ್ಲ ಅಂತಾರೆ ತಜ್ಞರು (Experts). ಹೌದು ಮನುಷ್ಯ ನಾಯಿಯನ್ನು ನನ್ನ ಸಾಕುಪ್ರಾಣಿ ಅಷ್ಟೇ ಅಲ್ಲ ನನ್ನ ಗೆಳೆಯ (Friend) ಅಂತ ಒಪ್ಪಿಕೊಂಡಂತೆ ನಾಯಿ ಮನುಷ್ಯನನ್ನು ತನ್ನ ಒಡೆಯ ಮಾತ್ರವಲ್ಲ ಆತ ನನ್ನ ಗೆಳೆಯ ಎಂದು ಒಪ್ಪಿಕೊಂಡಿದ್ದು ಅನಾದಿಕಾಲದಲ್ಲೇ. ಹೌದು ಶ್ವಾನ ಹಾಗೂ ಮಾನವನ (Dog & Man) ಈ ಸಂಬಂಧಕ್ಕೆ ಹದಿನೈದು ಸಾವಿರ ವರ್ಷದ ಇತಿಹಾಸವಿದೆ ಎನ್ನುತ್ತಾರೆ.

ಇನ್ನು ಮಾನವ ವಸಾಹತುಗಳ ದಿನಗಳಿಂದಲೂ ರಕ್ಷಣೆ ಒಡನಾಟ ಹಾಗೂ ಬೇಟೆಯ ಸಹಾಯವನ್ನು ನಾಯಿ ಒದಗಿಸಿದೆ. ಇನ್ನು ಒಂದು ಅಂದಾಜು ಲೆಕ್ಕದ ಪ್ರಕಾರ ಭೂಮಿಯಲ್ಲಿ ಸುಮಾರು ತೊಂಬತ್ತು ಕೋಟಿ ನಾಯಿಗಳಿವೆ ಎನ್ನಲಾಗಿದೆ. ಹೌದುಬ ಈ ಪೈಕಿ ನಾಯಿಗಳಲ್ಲಿ ಸುಮಾರು ನಾಲ್ಕು ನೂರಕ್ಕಿಂತ ಜಾಸ್ತಿ ವೈವಿಧ್ಯ ತಳಿಗಳಿವೆ ಅಂತಾರೆ ಕೂಡ ತಜ್ಞರು.

ಇನ್ನು ನಾಯಿ ಸಾಕುವರಿಗೆ ಇದು ಅನುಭವಕ್ಕೆ ಬಂದಿರಬಹುದು. ನಾಯಿ ಬಗ್ಗೆ ಗೊತ್ತಿಲ್ಲದವರಿಗೆ ಇದು ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಹೌದು ನಾಯಿಗಳು ಮನುಷ್ಯನ ಮೂಡ್ (Mood) ಅರ್ಥ ಮಾಡಿಕೊಳ್ಳುವ ಚಾಕಚಕ್ಯತೆ ಹೊಂದಿವೆಯಂತೆ. ನಾವು ಸಂತೋಷದಿಂದಿದ್ದಲ್ಲಿ ತೀರಾ ದುಃಖ ಅಥವಾ ಕೋಪದಲ್ಲಿದ್ದಾಗ ನಾಯಿಗೆ ನಮ್ಮ ಮುಖ ನೋಡಿಯೇ ತಿಳಿಯುತ್ತವೆಯಂತೆ. ಇನ್ನು ಇಂಗ್ಲೆಂಡಿನ ಲಿಂಕನ್ ಯೂನಿವರ್ಸಿಟಿಯಲ್ಲಿ(Lincoln University England)ಈ ಬಗ್ಗೆ ಸಂಶೋಧನೆ ಮಾಡಲಾಗಿದ್ದು ಸುಮಾರು ಇಪ್ಪತ್ತು ನಾಯಿಗಳನ್ನು ವಿಜ್ಞಾನಿಗಳು ಸ್ಕ್ರೀನ್ ಎದುರುಗಡೆ ನಿಲ್ಲಿಸಿ ಅದರ ಕಣ್ಣಿನ ಚಲನವಲನವನ್ನು ಕಂಪ್ಯೂಟರೀಕೃತ ಕ್ಯಾಮರಾದಲ್ಲಿ ಗ್ರಹಿಸುವ ವ್ಯವಸ್ಥೆಯಾಯಿತು. ಹೌದು ನಾಯಿಗಳ ಎದುರಿಗಿನ ಸ್ಕ್ರೀನ್ ನಲ್ಲಿ ಬೇರೆ ಬೇರೆ ವಸ್ತುಗಳನ್ನು ಮತ್ತು ಮಧ್ಯೆ ಮಧ್ಯೆ ಮನುಷ್ಯನ ಮುಖವನ್ನು ತೋರಿಸಲಾಯಿತು.

ಪ್ರತೀ ಬಾರಿ ವಸ್ತುಗಳನ್ನು ನೋಡಿದಾಗ ನಾಯಿಗಳ ಕಣ್ಣು ಇಡೀ ವಸ್ತುವನ್ನು ಎಡ-ಬಲ-ಮೇಲೆ-ಕೆಳಕ್ಕೆ ನೋಡಿದವು. ಅದಕ್ಕೊಂದು ಪ್ಯಾಟರ್ನ್ ಇರಲಿಲ್ಲ ಆದರೆ ನಡು ನಡುವೆ ಮನುಷ್ಯನ ಮುಖವನ್ನು ತೋರಿಸಿದಾಗ ಮಾತ್ರ ನಾಯಿಯ ಕಣ್ಣು ಮನುಷ್ಯನ ಎಡಮುಖದತ್ತ,ಲ ಎಡಗಣ್ಣಿನತ್ತ ಹೊರಳಿತು. ತದ ನಂತರ ಇದೇ ಪ್ರಯೋಗವನ್ನು ಸುಮಾರು ನೂರಕ್ಕಿಂತ ಜಾಸ್ತಿ ನಾಯಿಗಳನ್ನಿಟ್ಟು ಮಾಡಲಾಯಿತು. ಪ್ರತೀಯೊಂದು ನಾಯಿಯೂ .ಕೂಡ ಪ್ರತೀ ಬಾರಿ ಮನುಷ್ಯನ ಮುಖ ಕಂಡಾಗ ಎಡ ಭಾಗವನ್ನೇ ಗ್ರಹಿಸಿದವು.

ನಂತರದಲ್ಲಿ ಬೇರೆ ಬೇರೆ ಸಾಕುಪ್ರಾಣಿ ಗಳನ್ನಿಟ್ಟು ಇದೇ ಪ್ರಯೋಗ ಮಾಡಿದಾಗ ಈ ರೀತಿ ಯಾವುದೇ ವಿಶೇಷ ಗೋಚರವಾಗಲಿಲ್ಲ. ಹೆಚ್ಚಿನ ಬೆಕ್ಕುಗಳಂತೂ ಸ್ಕ್ರೀನ್ ಅನ್ನೇ ನೋಡಲಿಲ್ಲ.ನಾಯಿಗಳು ಅದು ಹೇಗೋ ಮನುಷ್ಯನ ಮುಖದ ಈ ಸೂಕ್ಷ್ಮವನ್ನೂ ಗ್ರಹಿಸುತ್ತವೆ ಮತ್ತು ಮನುಷ್ಯನಂತೆ ಎದಿರಿಗಿರುವವರ ಆಂತರ್ಯ ಭಾವವನ್ನು ತಿಳಿಯುತ್ತವೆ ಎಂದೇ ಒಪ್ಪಿಕೊಳ್ಳಬೇಕಾಯಿತು. ಸದ್ಯ ಈಗ ನಾಯಿ ಬಗ್ಗೆ ಮಾತನಾಡಲು ಕಾರಣವಿದೆ. ಹೌದು ಇಲ್ಲಿ ಶ್ವಾನವೊಂದು ಮಾಲೀಕನ ಗ್ರಹಿಕೆಯಿಂದ ಸ್ಕೇಟಿಂಗ್ ಕಲಿತು ವಿಶ್ವದಾಖಲೆ ಮಾಡಿದ್ದು ಒಮ್ಮೆ ಕೆಳಗಿನ ವಿಡಿಯೋ ನೋಡಿ ಶಾಕ್ ಆಗ್ತೀರ.