ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪುಷ್ಪ ಚಿತ್ರದ ಲಾರಿ ಸೀನ್ ಹೇಗೆ ಮಾಡಲಾಗಿತ್ತು ನೋಡಿ…ಚಿಂದಿ ವಿಡಿಯೋ

9,184
Join WhatsApp
Google News
Join Telegram
Join Instagram

ಟಾಲಿವುಡ್ ನ (Tollywood) ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ನಟನೆಯ ಬಹುನಿರೀಕ್ಷಿತ ಪುಷ್ಪ- 2 (Pushpa 2) ಸಿನಿಮಾದ ಚಿತ್ರೀಕರಣ ಕೊನೆಗೂ ಶುರುವಾಗಿದ್ದು ಮೊದಲ ಭಾಗ (Firrst Part) ಬಿಡುಗಡೆಯಾಗಿ ಒಂದು ವರ್ಷದ ಬಳಿಕ ಎರಡನೇ ಭಾಗದ ಚಿತ್ರೀಕರಣ ಆರಂಭಿಸಿದೆ ಚಿತ್ರತಂಡ. ಹೈದರಾಬಾದ್‌ನ ಪಂಜಾಗುಡ್ಡಾದಲ್ಲಿ(Panjaagudda Hyderabad) ನಡೆಯುತ್ತಿರುವ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್ ಕೂಡ ಭಾಗವಹಿಸಿದ್ದು 2021 ರಲ್ಲಿ ತೆರೆಕಂಡಿದ್ದ ಪುಷ್ಪ (Pushpa) ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು.

ಐಕಾನ್ ಸ್ಟಾರ್(Icon Star) ರಕ್ತಚಂದನ ಸ್ಮಗ್ಲರ್ ಪುಷ್ಪರಾಜ್ (Pushparaj) ಆಗಿ ಅಬ್ಬರಿಸಿದರೆ ಆತನ ಮನದರಸಿ ಶ್ರೀವಲ್ಲಿ ಆಗಿ ರಶ್ಮಿಕಾ ಮಂದಣ್ಣ (Rashmika Mandanna) ಮಿಂಚಿದ್ದರು. ಇನ್ನು ಈ ಮಾಸ್ ಮಸಾಲಾ ಎಂಟರ್‌ಟೈನರ್ ಸಿನಿಮಾ 350 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಹೌದು ಹಿಂದಿ (Hindi) ಬೆಲ್ಟ್‌ನಲ್ಲೂ ಸಖತ್ ಸದ್ದು ಮಾಡಿತ್ತು. ಬಾಲಿವುಡ್ (Bollywood) ಮಂದಿ ಕೂಡ ಚಿತ್ರದ ಸೀಕ್ವೆಲ್‌ಗಾಗಿ ಕಾಯುತ್ತಿದ್ದಾರೆ.
ಇನ್ನು ಮೈತ್ರಿ ಮೂವಿ ಮೇಕರ್ಸ್ (Mytri Movie Makers) ಬ್ಯಾನರ್‌ನಲ್ಲಿ ಸುಕುಮಾರ್ (Sukumar) ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದು ಪ್ರೀಕ್ವೆಲ್‌ನಲ್ಲಿ ನಟಿಸಿದ್ದ ಬಹುತೇಕಲ ಕಲಾವಿದರು ಸೀಕ್ವೆಲ್‌ನಲ್ಲೂ ಬಣ್ಣ ಹಚ್ಚಲಿದ್ದಾರೆ. ಇನ್ನು ಈ ಬಾರಿ ಪುಷ್ಪರಾಜ್ ವರ್ಸಸ್ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ (SP Bhanvar Singh Shekhavath) ನಡುವಿನ ಕಾದಾಟ ಸಿನಿರಸಿಕರಿಗೆ ಕಿಕ್ ಕೊಡಲಿದೆ.

ಇನ್ನು ಪ್ರೀಕ್ವೆಲ್ 350 ಕೋಟಿ ಕಲೆಕ್ಷನ್ ಮಾಡಿದ್ದು ಸೀಕ್ವೆಲ್‌ಗಿರೋ ಕ್ರೇಜ್‌ನ ಎನ್‌ಕ್ಯಾಶ್ ಮಾಡಿಕೊಂಡು 1000 ಕೋಟಿ ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು ಸೀಕ್ವೆಲ್‌ನ ತೆರೆಗೆ ತರುವ ಪ್ರಯತ್ನ ನಡೀತಿದೆ.ಹೌದು ಅದಕ್ಕೆ ತಕ್ಕಂತೆ ಕಥೆಯನ್ನು ತಿದ್ದಿತೀಡಿ ಒಂದು ಶೇಪ್‌ಗೆ ತಂದಿದ್ದಾರೆ ಸುಕುಮಾರ್.

ಸದ್ಯ ಶೂಟಿಂಗ್ ಆರಂಭವಾಗಿದ್ದು 2024ರಲ್ಲಿ ಚಿತ್ರವನ್ನು ತೆರೆಗೆ (Release) ತರುವ ಸಾಧ್ಯತೆಯಿದೆ. KGF ಮೊದಲ ಭಾಗ 250 ಕೋಟಿ ಗಳಿಸಿದರೆ ಎರಡನೇ ಭಾಗ 1250 ಕೋಟಿ ಗಳಿಸಿ ದಾಖಲೆ ಬರೆದಿದ್ದು ಗೊತ್ತೇಯಿದೆ.ಕಾಡಲ್ಲಿ ಪ್ರಾಣಿಗಳು ನಾಲ್ಕು ಹೆಜ್ಜೆ ಹಿಂದೆ ಇಟ್ಟಿವೆ ಅಂದರೆ ಹುಲಿ ಬಂತು ಎಂದು ಅರ್ಥ. ಅದೇ ಹುಲಿ ನಾಲ್ಕು ಹೆಜ್ಜೆ ಹಿಂದೆ ಇಟ್ಟಿದೆ ಅಂದರೆ ಪುಷ್ಪರಾಜ್ ಬಂದ ಎಂದು ಅರ್ಥ ಇದು ಪುಷ್ಪ- 2 ಚಿತ್ರದ ಡೈಲಾಗ್ ಎನ್ನಲಾಗಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಈ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ(Social Media) ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಆದರೆ ಇದು ನಿಜಕ್ಕೂ ಸಿನಿಮಾ ಡೈಲಾಗ್ ಹೌದೋ ಅಲ್ವೋ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಪುಷ್ಪ ೨ ಬಿಡುಗಡೆಗೆ ಸಾಕಷ್ಟು ಸಮಯವಿದ್ದು ಅಲ್ಲಿಯ ವರೆಗೂ ಪುಷ್ಪ ಮೊದಲ ಭಾಗವನ್ನು ಹೇಗೆಲ್ಲ ಚಿತ್ರಿಸಿದ್ದರು ಎಂದು ಕೆಳಗಿನ ವಿಡಿಯೋದಲ್ಲಿ ನೋಡೋಣ ಬನ್ನಿ. ಇದು ಚಿತ್ರದ ಮೇಕಿಂಗ್ ವಿಡಿಯೋ ಆಗಿದ್ದು ಕೆಲವೊಂದು ಇಂಟ್ರೆಸ್ಟಿಂಗ್ ಸೀನ್ ಗಳನ್ನು ಹೇಗೆ ಚಿತ್ರಿಸಿದ್ದರು ನೀವೆ ನೋಡಿ..