ನಮ್ಮ ಕನ್ನಡ ಚಿತ್ರರಂಗದ(KFI) ಆಸ್ತಿ ನಮ್ಮ ರವಿಚಂದ್ರನ್ (Ravichandran). ಪ್ರೀತಿಗೆ ಬ್ರಾಂಡ್ ಅಂಬಾಸಿಡರ್ (Brand Ambassador) ಅಂದರೆ ಅದು ರವಿ ಸರ್ ಮಾತ್ರ. ಇನ್ನು ಪ್ರೀತಿ ಹೇಗೆ ಮಾಡಬೇಕು ಎಂದು ತೋರಿಸಿಕೊಟ್ಟಿರೋದು ಕೂಡ ರವಿ ಮಾಮ. ಸ್ಯಾಂಡಲ್ವುಡ್ ಗೆ (Sandalwood) ಹಲವು ವಿಭಿನ್ನ ಸಿನಿಮಾಗಳನ್ನ ಕೊಡುವ ಮೂಲಕ ಜನಮನ ಗೆದ್ದ ನಟ ನಮ್ಮ ರವಿಚಂದ್ರನ್ ಎಂದು ನಟ ನವರಸನಾಯಕ ಜಗ್ಗೇಶ್ (Jaggesh) ಇತ್ತೀಚೆಗಷ್ಟೇ ಹಾಡಿಹೊಗಳಿದ್ದಾರೆ.
ಇನ್ನು ಮಾತು ಮುಂದುವರಿಸಿದ ರವಿಚಂದ್ರನ್ ರವರು ಆ ಕಾಲದಲ್ಲೇ ಕೈ ತುಂಬಾ ಸಂಬಳ ಕೊಟ್ಟು ನಮಗೆ ಕೆಲ್ಸ ಕೊಟ್ರು. ಇನ್ನು 250 ರೂಪಾಯಿ ಇದ್ದರೆ ತುಂಬಾ ಚೆನ್ನಾಗಿ ಜೀವನ ಮಾಡೋ ಆ ಕಾಲದಲ್ಲಿ ನಮಗೆ 15 ಸಾವಿರ ಕೊಟ್ಟ ಮಹಾನುಭಾವ ಅಂದರೆ ಅದು ಕ್ರೇಜಿ ಸ್ಟಾರ್ (Crazy Star) ಎಂದು ಜಗ್ಗೇಶ್ ಹೇಳಿದ್ದಾರೆ. ಇಮ್ನು ಒಂದು ದಿನ ಜಗ್ಗೇಶ್ ರವಿ ಸರ್ ಮನೆ ಮುಂದೆ ಕೈಕಟ್ಟಿ ಅವಕಾಶಕ್ಕಾಗಿ ನಿಂತಿದ್ದರಂತೆ. ಆಗ ರವಿಚಂದ್ರನ್ ಮ್ಯಾನೇಜರ್ (Manager) ಯಾರ್ರೀ ಜಗ್ಗೇಶ್ ಒಳಗೆ ಬನ್ನಿ ಅಂತ ಕರ್ಕೊಂಡು ಹೋಗಿ ವೀರಸ್ವಾಮಿ (Veeraswamy) ಮುಂದೆ ನಿಲ್ಲಿಸಿದ್ರಂತೆ.
ಆಗ ಈ ಹುಡುಗ ಚನ್ನಾಗಿ ಮಾಡ್ತಾನೆ ಎಂದು ವೀರಸ್ವಾಮಿ ಅವರು ಕಳುಹಿಸಿದ ಮೇಲೆ ಆ ಪಾತ್ರ ಅವರಿಗೆ ಸಿಕ್ಕಿಲ್ಲ. ಯಾಕಂದ್ರೆ ಎತ್ತರವಿಲ್ಲ ಎನ್ನುವ ಕಾರಣಕ್ಕೆ ಆ ಪಾತ್ರಕ್ಕೆ ರವಿ ಸರ್ ಕಟಿಂಗ್ ಮಾಡಿದ್ರುಬಎಂದು ಜಗ್ಗೇಶ್ ನಗುತ್ತಲೇ ರವಿಚಂದ್ರನ್ ಮುಂದೆ ಹೇಳಿದ್ದಾರೆ. ಇನ್ನು ಅದಾದ ನಂತರ ಮತ್ತೇ ರಣಧೀರ (Randeera) ಸಿನಿಮಾಗೆ ಕರೆ ಮಾಡಿ ನಂಗೆ ಅವಕಾಶ ಕೊಟ್ಟಿದ್ದು ಹೊಸಬಟ್ಟೆ ಕೊಳ್ಳಲು ಹಣ ಕೊಟ್ರು ಎಂಬ ನೆನಪನ್ನ ಜಗ್ಗೇಶ್ ಮೆಲಕು ಹಾಕಿದರು.
ಅಷ್ಟೇ ಅಲ್ಲದೇ ಕ್ರೇಜಿ ಸ್ಟಾರ್ ಮ್ಯಾನೇಜರ್ ಬಳಿ ಸಾಕಷ್ಟು ಹಣವನ್ನ ಆಗಾಗ ತಗೊಂಡಿದ್ದೀವಿ ಅನ್ನೋದನ್ನ ಹೇಳೋ ಮೂಲಕ ವೇದಿಕೆ ಮುಂಭಾಗ ಇದ್ದ ಅಭಿಮಾನಿಗಳನ್ನು ಜಗ್ಗೇಶ್ ನಗಿಸಿದ್ದರು. ವರ ನಟ ಡಾ.ರಾಜ್ ಕುಮಾರ್(Rajkumar) ರವಿಚಂದ್ರನ್ ಶೂಟಿಂಗ್ ಮಾಡೋ ಜಾಗಕ್ಕೆ ಹುಡುಕಿಕೊಂಡು ಹೋಗ್ತಾ ಇದ್ದರು. ಜೊತೆಗೆ ಹೆಂಗಪ್ಪಾ ಸಿನಿಮಾನ ಇಷ್ಟು ಚೆನ್ನಾಗಿ ಮಾಡ್ತಿಯಾ? ನಾವು ಯಾವಾಗ ಹಿಂಗೆ ಮಾಡೋದು ಅಂತ ಕೇಳುತ್ತಿದ್ದರಂತೆ ಅಣ್ಣಾವ್ರು. ಜೀವನದಲ್ಲಿ ಏಳು ಬೀಳು ನೋವು,ಹಣ ಕಳೆದುಕೊಳ್ಳುವುದು ಹಣ ವಾಪಸ್ಸು ಬರೋದು ಸೋಲು ಗೆಲುವು ಇದೆಲ್ಲಾ ಕಂಡ ವ್ಯಕ್ತಿ ಯಾರಿದ್ದಾರೋ ಅವರು ಮಾತ್ರ ರವಿಚಂದ್ರನ್ ಆಗಲು ಸಾಧ್ಯಎಂದು ಜಗ್ಗೇಶ್ ಹೇಳಿದ್ದಾರೆ. ಸದ್ಯ ಇದೀಗ ಹೊಸ ವಿಡಿಯೋ ವೈರಲ್ ಆಗಿದ್ದು ಇಲ್ಲಿ ರವಿಚಂದ್ರನ್ ಮುಂದೆ ಅದ್ಬುತವಾಗಿ ಜಗ್ಗೇಶ್ ಹೇಗೆ ಮಾತನಾಡಿದ್ದಾರೆ ನೋಡಿ.