ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾತ್ರಿ ಕಾಣಿಸಿಕೊಂಡ ಅಪರೂಪದ ಕರಿಚಿರತೆ…ಚಿಂದಿ ವಿಡಿಯೋ

51,672

ಈ ವನ್ಯಜೀವಿಗಳ ಬದುಕು ಅವುಗಳ ಸಮಾಗಮ ಕಾದಾಟ ಎಲ್ಲವೂ ಕೂಡ ಬಹಳ ಕುತೂಹಲಕಾರಿಯಾಗಿರುತ್ತದೆ. ಹೌದು ಆದರೆ ಅವು ಮನುಷ್ಯರ ಕಣ್ಣಿಗೆ ಬೀಳುವುದು ತೀರಾ ವಿರಳವಾಗಿದ್ದು ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬಂದಾಗ ಭೀತಿ ಮೂಡಿದರೆ ನಾವು ಕಾಡಿನಲ್ಲಿ ಅವುಗಳಿಗಾಗಿ ಹುಡುಕುತ್ತಾ ಹೋದಾಗ ಎದುರಿಗೆ ಬಂದರಂತೂ ಆಗುವ ರೋಮಾಂಚನ ಅಷ್ಟಿಷ್ಟಲ್ಲ. ಇಂತಹ ಮುಖಾಮುಖಿಯಲ್ಲಿ ಅನೇಕ ರೋಚಕ ದೃಶ್ಯಗಳು ಪ್ರವಾಸಿಗರ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತಿದ್ದು ಬಲಿಷ್ಟ ಪ್ರಾಣಿಗಳ ನಡುವಿನ ಕಾದಾಟದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ಸದ್ಯ ದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿರುವ ಸುದ್ದಿ ಹೊರಬಿದ್ದಿದ್ದು ಇದು ಆಶಾದಾಯಕ ಬೆಳವಣಿಗೆಯೂ ಹೌದು. ಈ ನಡುವೆಯೇ ಆಗಾಗ್ಗೆ ಕಪ್ಪು ಚಿರತೆಗಳೂ ಕೂಡ ಸುದ್ದಿಯಾಗುತ್ತಿದ್ದು ವನ್ಯಜೀವಿ ಛಾಯಾಗ್ರಾಹಕರು ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಸೆರೆಯಾದ ಕಪ್ಪು ಚಿರತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಕಪ್ಪು ಚಿರತೆಯ ಹೆಸರು ಕೇಳಿದಾಕ್ಷಣ ಆಂಗ್ಲ ಸಾಹಿತಿ ರುಡ್ಯಾರ್ಡ್ ಕಿಪ್ಲಿಂಗ್ ಬರೆದ ಜಂಗಲ್ ಬುಕ್ ಕೃತಿ ನೆನಪಾಗುತ್ತದೆ.

ಆತ ಈ ಕೃತಿ ಬರೆದದ್ದು 1892ರಲ್ಲಿ. ಮೌಗ್ಲಿ ಎಂಬ ಕಾಡಿನ ಹುಡುಗನ ಕಥೆ ಇದಾಗಿದ್ದು ಮನುಷ್ಯ ಶಿಶುವೊಂದು ಎಳೆವರೆಯದಲ್ಲಿಯೇ ಕಾನನದ ಪಾಲಾಗುತ್ತದೆ. ಅದನ್ನು ತೋಳಗಳ ಗುಂಪೊಂದು ಸಾಕುತ್ತದೆ. ಮೌಗ್ಲಿಗೆ ಮಾತ್ರ ಮಾನವರಂತೆ ಮಾತನಾಡಲು ಬರುವುದಿಲ್ಲ. ತೋಳಗಳಂತೆ ಹೂಳಿಟ್ಟು ಸಂಭಾಷಿಸುವ ಈತನಿಗೆ ಭಗೀರಾ ಎಂಬ ಕಪ್ಪು ಚಿರತೆ ಹಾಗೂ ಬಾಲೂ ಎಂಬ ಕರಡಿ ಸ್ನೇಹಿತರು. ಅಂದಹಾಗೆ ಶೇರ್‌ಖಾನ್‌ ಎಂಬ ಹೆಬ್ಬುಲಿ ಕಾ ಎಂಬ ಹೆಬ್ಬಾವು ಹಾಗೂ ಕಿಂಗ್‌ಲೂಯಿ ಎಂಬ ಉರಾಂಗುಟಾನ್ ಕೋತಿಗಳೇ ಮೌಗ್ಲಿಯ ಶತ್ರುಗಳು. ಹೀಗಾಗಿ ಕಪ್ಪು ಚಿರತೆ ಬಗ್ಗೆ ಮಕ್ಕಳಿಗೂ ಕುತೂಹಲ.

ಮೈಬಣ್ಣ ಹಾಗೂವಕೂದಲಿನ ಬಣ್ಣದ ಗಾಢತೆಯು ಮೆಲಾನಿನ್‌ ಅಂಶವನ್ನು ಅವಲಂಬಿಸಿರುತ್ತದೆ. ದೇಹದಲ್ಲಿ ಮೆಲಾನಿನ್‌ ವರ್ಣದ್ರವ್ಯವು ಹೆಚ್ಚಾದರೆ ಚಿರತೆಗಳು ಸಾಮಾನ್ಯ ಬಣ್ಣವನ್ನು ಕಳೆದುಕೊಳ್ಳುತ್ತವೆ. ಹೌದು ಆಗ ಅವುಗಳ ದೇಹದ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದು ಸಹಜ. ಇನ್ನು ಈ ಬಣ್ಣ ಹೊರತುಪಡಿಸಿದರೆ ಉಳಿದ ಎಲ್ಲ ಲಕ್ಷಣಗಳು ಸಾಮಾನ್ಯ ಚಿರತೆಯಂತೆಯೇ ಇರುತ್ತದೆ. ಇನ್ನು ಹತ್ತಿರದಿಂದ ಕರಿ ಚಿರತೆಗಳನ್ನು ವೀಕ್ಷಿಸಿದರೆ ಕಪ್ಪು ಚುಕ್ಕೆಗಳು ಕಂಡುಬರುತ್ತವೆ. ಕರಿ ಚಿರತೆಗಳು ಹೆಚ್ಚಾಗಿ ಕಂಡುಬರುವುದು ಪಶ್ಚಿಮ ಘಟ್ಟದ ತೀವ್ರ ಆರ್ದ್ರತೆಯಿಂದ ಕೂಡಿದ ಅರಣ್ಯ ಪ್ರದೇಶ ಹಾಗೂ ಶೋಲಾ ಕಾಡುಗಳಲ್ಲಿ.

ಆದರೆ ಬಂಡೀಪುರದ ನುಗು ವಲಯ ಮಲೆಮಹದೇಶ್ವರ ವನ್ಯಜೀವಿಧಾಮದ ಕುರುಚಲು ಕಾಡುಗಳಲ್ಲೂ ಇವುಗಳು ಆವಾಸ ಕಂಡುಕೊಂಡಿರುವುದು ವಿಶೇಷವಾಗುದೆ. ಇನ್ನು ಅಷ್ಟಕ್ಕೂ ಇದೀಗ ಸರಿ ಚಿರತೆಯ ಬಗ್ಗೆ ಮಾತನಾಡಲು ಒಂದು ಕಾರಣವಿದೆ. ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು ಕಪ್ಪು ಚಿರತೆ ಎಷ್ಟು ಅಪಾಯಕಾರಿ ಎಂಬುದು ಈ ವೀಡಿಯೋ ಕಂಡುಬರುತ್ತದೆ. ಸದ್ಯ ಇದೀಗ ಕರಿ ಚಿರತೆ ಊಟಿಯ ನಗರದೊಳಗೆ ಪ್ರತ್ಯಕ್ಷವಾಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು ಕರಿ ಚಿರತೆ ಆಹಾರಕ್ಕಾಗಿ ನಾಡಿಗೆ ಬಂದಿದ್ದು ಹೇಗೆ ಶ್ವಾನವನ್ನು ಭೇಟೆಯಾಡಿದೆ ನೀವೆ ನೋಡಿ.