ಸದ್ಯ ಜೀಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋನಿಂದ ಅನೇಕ ಪ್ರತಿಭೆಗಳಿಗೆ ದೊಡ್ಡ ಅವಕಾಶ ಸಿಕ್ಕಿದೆ ಎನ್ನಬಹುದು. ಹೌದು ಹಲವಾರು ಸೀಸನ್ಗಳ ಮೂಲಕ ಸಾಕಷ್ಟು ಗಾಯಕರ ಬದುಕು ಬದಲಾಗಿದ್ದು ಈ ಶೋನಲ್ಲಿ ಸ್ಪರ್ಧಿಸಿ ಗಮನ ಸೆಳೆದ ಬಳಿಕ ಸಿನಿಮಾದಲ್ಲೂ ಹಾಡುವ ಅವಕಾಶ ಪಡೆದು ಮಿಂಚಿದವರು ಹಲವರಿದ್ದಾರೆ ಎನ್ನಬಹುದು.
ಈಗ ಸರಿಗಮಪ ಲಿಟ್ಲ್ ಚಾಂಪ್ಸ್ 19ನೇ ಸೀಸನ್ ನಡೆಯುತ್ತಿದ್ದು ಈ ಬಾರಿ ಕೂಡ ಅನೇಕ ಪ್ರತಿಭಾವಂತ ಮಕ್ಕಳು ವೇದಿಕೆ ಏರಿದ್ದಾರೆ. ಹೌದು ಪ್ರತಿ ಎಪಿಸೋಡ್ ಕೂಡ ರಂಜನೀಯವಾಗಿದ್ದು ಪುಟಾಣಿ ಗಾಯಕ-ಗಾಯಕಿಯರ ಕಂಠಸಿರಿಗೆ ಕಿರುತೆರೆ ವೀಕ್ಷಕರು ಫಿದಾ ಆಗುತ್ತಿದ್ದಾರೆ. ಆ ಪೈಕಿ ದಿಯಾ ಹೆಗಡೆ ಹೆಚ್ಚು ಗಮನ ಸೆಳೆಯುತ್ತಿದ್ದು ತನ್ನದೇ ರೀತಿಯಲ್ಲಿ ಪದಗಳನ್ನು ಜೋಡಿಸಿ ಹಾಡುವ ಆಕೆಯ ಪ್ರತಿಭೆಗೆ ಜಡ್ಜ್ಗಳು ಕೂಡ ಚಪ್ಪಾಳೆ ತಟ್ಟಿದ್ದಾರೆ ಎನ್ನಬಹುದು.
ಇನ್ನು ಪ್ರತಿ ವೀಕೆಂಡ್ನಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದು ದಿಯಾ ಹೆಗಡೆ ಹೈಲೈಟ್ ಆಗಿದ್ದಾಳೆ. ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ನಿರೂಪಕಿ ಅನುಶ್ರೀ ಕುರಿತಾಗಿಯೇ ದಿಯಾ ಹಾಡು ಹೇಳಿದ್ದು ಈ ವಿಡಿಯೋವನ್ನು ಜೀ ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ನಾನು ಮುದುಕಿಯಾದರೇನಂತೆ ನಾ ಇನ್ನೂ ಇರಾಕಿ..
ನನ್ನ ಮಗನ ಮಗನ ಮಗನ ಮದುವೆ ಮಾಡಾಕಿ ಹಾಡನ್ನು ದಿಯಾ ಹೆಗಡೆ ಹೇಳಿದ್ದು ಆದರೆ ಹಾಡಿಗೆ ತನ್ನದೇ ಶೈಲಿಯಲ್ಲಿ ಹೊಸ ಲಿರಿಕ್ಸ್ ಸೇರಿಸಿಕೊಂಡಿದ್ದಾಳೆ. ತನಗೆ ಅನುಶ್ರೀ ಸೊಸೆಯಾಗಬೇಕು ಎಂದು ಆಕೆ ಹೇಳಿದ್ದು ಇದನ್ನು ಕೇಳಿ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಅಚ್ಚರಿಯಿಂದ ನೋಡಿದ್ದಾರೆ.
ಇನ್ನು ಕಳೆದ ವಾರ ಸರಿಗಮಪ ವೇದಿಕೆಯಲ್ಲಿ ದೊಡ್ಮನೆ ವೈಭವ ನಡೆದಿದ್ದು ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಮುಖ್ಯ ಅಥಿತಿಯಾಗಿ ಬಂದಿದ್ದರು. ಎಲ್ಲಾ ಸ್ಪರ್ಧಿಗಳು ಶಿವಣ್ಣನ ಹಾಡುಗಳನ್ನು ಹಾಡಿದ್ದು ಶಿವಣ್ಣ ಸಹ ಖುಷಿ ಆಗಿದ್ದಾರೆ.
ಇನ್ನು ಈ ವೇಳೆ ದಿಯಾ ಹೆಗ್ಡೆ ಮತ್ತೊಮ್ಮೆ ಗಮನ ಸೆಳೆದಿದ್ದುಅಚ್ಚು ಮೆಚ್ಚಿನ ಅಣ್ಣವೊಬ್ಬರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಏನ್ ಸಡಗರ ಧೂಳು ಗೀಳು ಎಬ್ಬಿಸಿದ್ದಾರೆ ಏನ್ ಸಡಗರ ಸ್ಟಂಟ್ ಗಿಂಟು ಹೆಜ್ಜೆ ಹಾಕಿ ಸೆಂಟಿಮೆಂಟಲ್ ಲುಕ್ ಕೊಟ್ಟು ಚಮ್ ಚಮ್ ಹೊಳೆಯುತ್ತಾರೆ ಏನ್ ಸಂಭ್ರಮ ಆಹಾ ಸುರ ಸುಂದರ ಎಂಬ ವಿಶೇಷ ಹಾಡು ಹಾಡಿದ್ದು ದಿಯಾ ಹೆಗ್ಡೆ ಹಾಡು ಕೇಳಿ ನಟ ಶಿವಣ್ಣ ಮೆಚ್ಚಿಕೊಂಡಿದ್ದಾರೆ.
ಇಷ್ಟು ಪುಟ್ಟ ಮಗು ನಮ್ಮ ಬಗ್ಗೆ ಹಾಡು ಬರೆದ್ರೆ ಖುಷಿಯಾಗುತ್ತೆ ಎಂದು ಹೇಳಿದ್ದಾರೆ. ಕಂಠವೂ ಚೆನ್ನಾಗಿದೆ. ಸ್ವರಸ್ವತಿಯೂ ಒಲಿದಿದ್ದಾಳೆ ಎಂದು ಹೇಳಿದ್ದಾರೆ. ಮುಂದೆ ಈಕೆ ಹಂಸಲೇಖ ಅವರ ರೀತಿ ಆಗಬಹುದು ಎಂದು ಶಿವಣ್ಣ ಹೇಳಿದ್ದಾರೆ. ದಿಯಾಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ದಿಯಾ ಶಿವಣ್ಣನಿಗೆ ಹಾಡಿದ ಹಾಡು ಕೇಳಲು ಕೆಳಗಿನ ವಿಡಿಯೋ ನೋಡಿ.