ವಾರ್ತಾ ಮಂಜರಿ
Trending Stories, Viral News, Gossips & Everything in Kannada

ತಮಿಳು ಹಾಡಿಗೆ ವಿಚಿತ್ರವಾಗಿ ಕುಣಿದ ಸಪ್ತಮಿ ಗೌಡ…ಚಿಂದಿ ವಿಡಿಯೋ

9,687

Sapthami gowda reels : ರಿಷಬ್ ಶೆಟ್ಟಿ ರವರು ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಭರ್ಜರಿ 400 ಕೋಟಿ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ಮಟ್ಟದ ದಾಖಲೆಯನ್ನು ನಿರ್ಮಿಸಿದೆ.

ಹೌದು ಕೇವಲ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಮಾಡಿರುವ ಪ್ರತಿಯೊಂದು ದಾಖಲೆ ಸಹ ಅಪೂರ್ವ ಹಾಗೂ ವಿಶೇಷವಾದದ್ದು ಎಂದು ಹೇಳಬಹುದಾಗಿದೆ. ಇನ್ನು ಈ ಸಿನಿಮಾದಲ್ಲಿ ನಾಯಕನಾಗಿ ರಿಷಬ್ ಶೆಟ್ಟಿ ಎಷ್ಟರಮಟ್ಟಿಗೆ ಎಲ್ಲರ ಗಮನವನ್ನು ಸೆಳೆದಿದ್ದಾರೋ ಅಷ್ಟೇ ಪ್ರಾಮುಖ್ಯತೆಯನ್ನು ನಾಯಕಿ ಲೀಲಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಸಪ್ತಮಿ ಗೌಡ ರವರು ಸಹ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಈ ಹಿಂದೆ ಡಾಲಿ ಧನಂಜಯ್ ನಾಯಕನಟನಾಗಿ ಕಾಣಿಸಿಕೊಂಡಿರುವ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಸಹ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಆದರೆ ಆ ಪಾತ್ರ ಅಷ್ಟೊಂದು ಗಮನ ಸೆಳೆದಿರಲಿಲ್ಲ.ಕಾಂತಾದ ಸಿನಿಮಾದಲ್ಲಿ ಹಳ್ಳಿ ಸೊಗಡಿನ ಲೀಲಾ ಪಾತ್ರಧಾರಿಯಾಗಿ ಸಪ್ತಮಿ ಗೌಡ ಅವರು ನೂರಕ್ಕೆ ನೂರರಷ್ಟು ತಮ್ಮ ನಟನೆಯ ಪ್ರದರ್ಶನವನ್ನು ತೋರಿಪಡಿಸಿದ್ದಾರೆ. ಹೌದು ಹೀಗಾಗಿ ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ನಾಯಕನ ಪಾತ್ರವೇ ಡಾಮಿನೇಟ್ ಆಗುತ್ತಿದ್ದರೂ ಕೂಡ ತನ್ನ ನಟನೆಯ ಝಲಕ್ ಅನ್ನು ಕೂಡ ಪರದೆ ಮೇಲೆ ತೋರಿಸಲು ಯಶಸ್ವಿಯಾಗಿದ್ದಾರೆ ಸಪ್ತಮಿ ಗೌಡ.

ಸಪ್ತಮಿ ಗೌಡ ಅವರ ಹಿನ್ನೆಲೆ ಕೇಳಿದರೆ ನೀವು ಕೂಡ ಕೊಂಚಮಟ್ಟಿಗೆ ಬೆಚ್ಚಿ ಬೀಳೋದು ಗ್ಯಾರಂಟಿ ಎನ್ನಬಹುದು. ಹೌದು ಸಪ್ತಮಿ ಗೌಡ ಯಾವುದೇ ಸಿನಿಮಾ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದಿಲ್ಲ ನಿಜ ಆದರೆ ಅವರ ತಂದೆ ಕರ್ನಾಟಕ ಪೊಲೀಸ್ ಇಲಾಖೆ ಕಂಡಂತಹ ಅತ್ಯಂತ ಶಿಸ್ತುಬದ್ಧ ಹಾಗೂ ದಕ್ಷ ಪೊಲೀಸ್ ಅಧಿಕಾರಿ ಆಗಿರುವ ಎಸ್ ಕೆ ಉಮೇಶ್. ಇನ್ನು ನಟನೆ ಹೊರತುಪಡಿಸಿ ಈಜುವಿಕೆಯಲ್ಲಿ ಕೂಡ ಸಪ್ತಮಿ ಗೌಡ ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ನ್ಯಾಷನಲ್ ಲೆವೆಲ್ ನಲ್ಲಿ ಸಾಬೀತುಪಡಿಸಿದ್ದಾರೆ.

ಇನ್ನು ರಿಷಬ್‌ ಶೆಟ್ಟಿಯ ಕಾಂತಾರ ಸಿನಿಮಾ ಮಾಡಿರುವ ಮೋಡಿ ಬಹಳ ದೊಡ್ಡದು. ಈ ಸಿನಿಮಾದಲ್ಲಿ ನಟಿಸಿರುವ ಹಲವರು ಈಗ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ. ಈ ಪೈಕಿ ನಾಯಕಿ ನಟಿ ಸಪ್ತಮಿ ಗೌಡರಿಗೂ ಬೇಡಿಕೆ ಹೆಚ್ಚಾಗಿದ್ದು ಹಲವು ಸಿನಿಮಾ ಕಥೆಗಳನ್ನು ಅವರು ಕೇಳುತ್ತಿದ್ದಾರೆ. ಅದರಲ್ಲಿ ನಟ ಅಭಿಷೇಕ್‌ ಅಂಬರೀಶ್‌ ಜತೆಗಿನ ಕಾಳಿ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಕಾಳಿ ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರದ ಬಗ್ಗೆ ಹೇಳಿರುವ ನಿರ್ದೇಶಕ ಕೃಷ್ಣ ಸಪ್ತಮಿ ಗೌಡರದ್ದು ಬಹಳ ಇಂಟೆನ್ಸ್‌ ಇರುವ ಪಾತ್ರ.

ನಾಯಕ ನಟ ಅಭಿಷೇಕ್‌ ಅವರಷ್ಟೇ ಸಮಾನ ಸ್ಕ್ರೀನ್‌ ಸ್ಪೇಸ್‌ ನಾಯಕಿಗೂ ಇದೆ. ಮೈಸೂರು ಭಾಗದಲ್ಲಿ ಸೆಟಲ್‌ ಆಗಿರುವ ತಮಿಳು ಹುಡುಗಿಯ ಪಾತ್ರವದು. ಕೆಲವೇ ದಿನಗಳಲ್ಲಿ ಅವರ ಲುಕ್‌ ಟೆಸ್ಟ್‌ ಮತ್ತು ಫೋಟೊಶೂಟ್‌ ಮಾಡಿಸಿ ಅಧಿಕೃತ ಪೋಸ್ಟರ್‌ ಲಾಂಚ್‌ ಮಾಡುತ್ತೇವೆ ಎಂದಿದ್ದಾರೆ. ಕಾಳಿ ಸಿನಿಮಾದ ಮುಹೂರ್ತ ನವೆಂಬರ್‌ 28 ರಂದು ನಡೆಯದಿದ್ದು ಈ ಸಿನಿಮಾಗೆ ಚರಣ್‌ರಾಜ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಈ ನಡುವೆ ಸಪ್ತಮಿ ಗೌಡ ಮಾಡಿರುವ ಡ್ಯಾನ್ಸ್ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

 

View this post on Instagram

 

A post shared by Sapthami Gowda 🧿 (@sapthami_gowda)