ಸದ್ಯ ಇದೇ ವರುಷಬಮಾರ್ಚ್ 25 ರಂದು ವಿಶ್ವಾದ್ಯಂತ ಬಿಡುಗಡೆ ಆಫ ತೆಲುಗಿನ RRR ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಕೇಳಿ ಬಂದಿದ್ದು ಜನ ಸಾಮಾನ್ಯರು ಮತ್ತು ಸಿನಿವಿಮರ್ಶಕರೂ ಈ ಸಿನಿಮಾವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೆ ಕೆಲವರು ಈ ಸಿನಿಮಾವನ್ನು ಅತಿ ಕೆಟ್ಟ ಸಿನಿಮಾ ಎಂದಿದ್ದು ಅದರಲ್ಲಿ ಕೆಆರ್ ಖಾನ್ ಕೂಡ ಒಬ್ಬರು. ನಟ ವಿಮರ್ಶಕ ಕೆ.ಆರ್.ಖಾನ್ RRR ಸಿನಿಮಾವನ್ನು ಮೊದಲ ದಿನವೇ ನೋಡಿ ವಿಮರ್ಶೆ ಮಾಡಿದ್ದು ಇಂಥಹಾ ಕೆಟ್ಟ ಸಿನಿಮಾವನ್ನು ನನ್ನ ಜೀವನಮಾನದಲ್ಲಿ ನೋಡಿಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದರು.
ಸಿನಿಮಾದ ಚಿತ್ರಕತೆ ಬಹಳಾನೇ ಕೆಟ್ಟದಾಗಿದ್ದು ಇಡೀ ಸಿನಿಮಾದಲ್ಲಿ ಒಂದೇ ಒಂದು ದೃಶ್ಯ ಸಹ ನೋಡುವ ರೀತಿ ಇಲ್ಲ. ಇದು ಅತ್ಯಂತ ಕೆಟ್ಟ ಚಿತ್ರಕತೆಯನ್ನು ರಾಜಮೌಳಿ ಬರೆದಿದ್ದು ಈ ಸಿನಿಮಾದ ಚಿತ್ರಕತೆಯನ್ನು ನಾನು ಚಿತ್ರಕತೆ ಅಲ್ಲ ಬದಲಿಗೆ ಕಾಮಿಡಿ ಎಂದು ಕರೆಯುತ್ತೇನೆ ಎಂದಿದ್ದರು. ಹೌದು ಕೆ.ಆರ್.ಖಾನ್. ಸಿನಿಮಾದ ಆರಂಭದಲ್ಲಿ ಒಂದು ದೃಶ್ಯವಿದೆ.
ಅದರಲ್ಲಿ ಒಂದೆರಡು ಲಕ್ಷ ಜನ ಬ್ರಿಟೀಶರ ವಿರುದ್ಧ ಪ್ರತಿಭಟನೆ ಮಾಡುತ್ತಿರುತ್ತಾರೆ. ಇನ್ನು ಅದರಲ್ಲಿ ಒಬ್ಬನನ್ನು ಬಂಧಿಸುವಂತೆ ಬ್ರಿಟೀಷ್ ಅಧಿಕಾರಿ ಹೇಳುತ್ತಲೇ ರಾಮ್ ಚರಣ್ ಆ ದೊಡ್ಡ ಗುಂಪಿನ ಮೇಲೆ ಬಿದ್ದು ಫೈಟ್ ಮಾಡಿ ಒಬ್ಬನನ್ನು ಅರೆಸ್ಟ್ ಮಾಡುತ್ತಾನೆ. ವಿಶ್ವದ ಅತಿ ದೊಡ್ಡ ವೀರ ಸಿಖಂದರ್ ಆಗಿದ್ದ ಎನ್ನಲಾಗುತ್ತದೆ. ಹೌದು ಆದರೆ ಆತ ಕೂಡ ಈ ರೀತಿಯ ಹುಚ್ಚು ಸಾಹಸ ಖಂಡಿತ ಮಾಡಲಾರ. ಆದರೆ ರಾಜಮೌಳಿ ಸಿನಿಮಾದಲ್ಲಿ ಇದೆಲ್ಲ ಸಾಧ್ಯವಾಗಿಬಿಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ ಕೆ.ಆರ್.ಖಾನ್ ರವರು.
ಅಷ್ಟು ಮಾತ್ರವಲ್ಲದ ಸಿನಿಮಾದ ಮತ್ತೊಬ್ಬ ಹೀರೋ ಜೂ ಎನ್ಟಿಆರ್ ಹುಲಿ ಜೊತೆ ಫೈಟ್ ಮಾಡುತ್ತಾರೆ. ಜೂ ಎನ್ಟಿಆರ್ ಘರ್ಜನೆ ಕೇಳಿ ಆ ಹುಲಿಯೂ ಹೆದರಿಬಿಡುತ್ತದೆ. ಹೌದು ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲ ಆದರೆ ರಾಜಮೌಳಿ ಸಿನಿಮಾದಲ್ಲಿ ಸಾಧ್ಯ. ಈ ಸಿನಿಮಾದಲ್ಲಿ ಹಲವು ದೃಶ್ಯಗಳಲ್ಲಿ ನಾಯಕ ನಟರನ್ನು ಹೊಡೆದು ಬಿಸಾಡಲಾಗಿರುತ್ತದೆ. ನಿಜ ನೀಜವನದಲ್ಲಿ ಮುರಿದ ಮೂಳೆ ಸರಿ ಹೋಗಲು ಒಂದೆರಡು ವರ್ಷ ಬೇಕಾಗುತ್ತದೆ. ಆದರೆ ಮಾತ್ರ ರಾಜಮೌಳಿ ಸಿನಿಮಾಗಳಲ್ಲಿ ಹತ್ತು ನಿಮಿಷಕ್ಕೆ ಎಲ್ಲವೂ ಸರಿ ಹೋಗಿ ಕೈ ಕಾಲು ಮುರಿದುಕೊಂಡವರು ನೆಕ್ಸ್ಟ್ ದೃಶ್ಯದಲ್ಲಿಯೇ ಫೈಟ್ ಮಾಡುತ್ತಿರುತ್ತಾರೆ.
ಇಂಥಹಾ ನಂಬಲಸಾಧ್ಯ ದೃಶ್ಯಗಳು ರಾಜಮೌಳಿ ಸಿನಿಮಾದಲ್ಲಿ ಮಾತ್ರ ಇರಲು ಸಾಧ್ಯ ಎಂದು ಕೆಆರ್ಕೆ ಹೇಳಿದ್ದು ಸಿನಿಮಾದ ಡೈಲಾಗ್ಗಳಂತೂ ಬಹಳ ಕೆಟ್ಟದಾಗಿದೆ ಬ್ರಿಟೀಷರ ಕಾಲದ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ಬಹಳಷ್ಟು ಜನ ಬ್ರಿಟೀಷರಿದ್ದಾರೆ ಹಾಗಾಗಿ ಬಹುತೇಕ ಸಂಭಾಷಣೆ ಇಂಗ್ಲೀಷ್ನಲ್ಲಿದೆ.
ಸಿನಿಮಾದ ಒಟ್ಟು ಸಂಭಾಷಣೆಯ 40% ಇಂಗ್ಲೀಷ್ನಲ್ಲಿಯೇ ಇದ್ದು ಸಿನಿಮಾ ಇಬ್ಬರು ನಾಯಕ ನಟರಿಗೆ ಹಿಂದಿ ಬರೊಲ್ಲ ಆದರೂ ಅವರೇ ಹಿಂದಿಯಲ್ಲಿ ಡಬ್ ಮಾಡಿದ್ದಾರೆ. ಹಾಗಾಗಿ ಅವರ ಡೈಲಾಗ್ ಬಹಳ ಕೆಟ್ಟದಾಗಿ ಕೇಳುತ್ತದೆ. ಇನ್ನು ಸಂಗೀತ ಕೂಡ ತೆಲುಗು ಸಂಗೀತ ಇದ್ದಹಾಗೆ ಇದ್ದು ಇದು ಬಾಲಿವುಡ್ ಮಂದಿಗೆ ಬಹಳ ಕೆಟ್ಟ ಸಂಗೀತ ಎನಿಸುತ್ತದೆ. ಚಿತ್ರದ ಡೈರೆಕ್ಷನ್ ಅಂತೂ ಬಹಳ ಕೆಟ್ಟದಾಗಿದೆ ಎಂದಿದ್ದಾರೆ.
ಇನ್ನು ಈ ಸಿನಿಮಾ ಒಂದು ಆಕ್ಷನ್ ಸಿನಿಮಾವಾಗಿದ್ದು ಆದರೆ ಸಿನಿಮಾದ ಆಕ್ಷನ್ ದೃಶ್ಯಗಳನ್ನು ನೋಡಿದರೆ ನಗು ಬರುತ್ತದೆ. ತೆರೆಯ ಮೇಲೆ ಆಕ್ಷನ್ ನಡೆಯುತ್ತಿರುತ್ತದೆ ಅದನ್ನು ನೋಡುತ್ತಿರುವ ಪ್ರೇಕ್ಷಕರು ಕುರ್ಚಿ ಮೇಲೆ ಕುಳಿತು ನಗುತ್ತಿರುತ್ತಾರೆ. ಅಂಥಹಾ ಆಕ್ಷನ್ ಈ ಸಿನಿಮಾದಲ್ಲಿದೆ. ರಾಜಮೌಳಿ ಮಾಡಿರುವುದು ನಿರ್ದೇಶಕನವೇ ಅಲ್ಲ. ಒಬ್ಬ ಸ್ಪಾಟ್ಬಾಯ್ ಮಾಡಬಹುದಾದ ಸಿನಿಮಾ ಮಾಡಿದ್ದು ರಾಜಮೌಳಿ ತನ್ನನ್ನು ತಾನು ಡೈರೆಕ್ಟರ್ ಎನ್ನುತ್ತಾರೆ.
ಆದರೆ ಮಾತ್ರ ಇಂಥಹಾ ಕೆಟ್ಟ ಸಿನಿಮಾ ಮಾಡಿದ್ದು ಹಾಗಾಗಿ ನಾನು ರಾಜಮೌಳಿಯನ್ನು ರಾಜಮೌಳಿ ಎನ್ನುವ ಬದಲಾಗಿ ರಾಜಮೂಲಿ ಎಂದು ಕರೆಯಲು ಇಷ್ಟಪಡುತ್ತೇನೆ. 600 ಕೋಟಿ ರುಪಾಯಿ ಖರ್ಚು ಮಾಡಿ ಇಷ್ಟು ಕೆಟ್ಟ ಸಿನಿಮಾ ಮಾಡಿರುವುದು ಡೈರೆಕ್ಷನ್ ಅಲ್ಲ ಬದಲಿಗೆ ಇದು ಅಪರಾಧ.
ಇಂಥಹಾ ಕೆಟ್ಟ ಸಿನಿಮಾ ಮಾಡಿದ್ದಕ್ಕೆ ರಾಜಮೌಳಿಗೆ ಕನಿಷ್ಟ ಆರು ವರ್ಷ ಕಾರಾಗೃಹ ಶಿಕ್ಷೆ ಆಗಲೇಬೇಕು ಎಂದಿದ್ದಾರೆ ಕೆ.ಆರ್.ಕೆ. ಇನ್ನು ಯಾರು ಏನೇ ಅಂದರೂ ಕೂಡ ಈ ಸಿನಿಮಾ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಮಾಲ್ ಮಾಡಿದ್ದು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೀಮ್ ಹುಲಿಯ ಮೇಲೆ ಅಟ್ಯಾಕ್ ಮಾಡಿರುವ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದ್ದು ಈ ದೃಶ್ಯವನ್ನು ಹೇಗೆ ಮಾಡಿದ್ದಾರೆ ನೀವೆ ನೋಡಿ.