ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜಾನಪದ ಹಾಡಿಗೆ ಶಾಲಾ ಶಿಕ್ಷಕಿಯ ಡ್ಯಾನ್ಸ್ ನೋಡಿ…ಚಿಂದಿ ವಿಡಿಯೋ

23,088

ಸಾಮಾನ್ಯವಾಗಿ ಮಕ್ಕಳು ಬಾಲ್ಯದಲ್ಲಿ ಹೆಚ್ಚಾಗಿ ಒಳ್ಳೆಯ ವಿಷಯಗಳನ್ನು ಕಲಿಯುವುದೇ ಅಪ್ಪ ಅಮ್ಮನಿಂದ ಮತ್ತು ಅವರನ್ನು ಹೊರತು ಪಡಿಸಿದರೆ ಅವರ ಶಾಲೆಯಲ್ಲಿ ಅವರಿಗೆ ಅಕ್ಷರ ಕಲಿಸುವ ಶಿಕ್ಷಕರಿಂದ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗುವುದಿಲ್ಲ. ಶಾಲೆಯಲ್ಲಿ ಪಾಠ ಹೇಳಿ ಕೊಡುವುದರ ಜೊತೆಗೆ ಶಿಸ್ತನ್ನು ಸಹ ಹೇಳಿಕೊಡುವ ಶಿಕ್ಷಕ ಮತ್ತು ಶಿಕ್ಷಕಿಯರನ್ನು ನಾವು ನೋಡಬಹುದು.

ಹಾಗೆಯೇ ಮಕ್ಕಳ ಜೊತೆ ಬೆರೆತು ನಗು ನಗುತಾ ಪಾಠ ಹೇಳಿಕೊಡುತ್ತಾ ತಮ್ಮ ವಿದ್ಯಾರ್ಥಿಗಳ ಜೊತೆಯಲ್ಲಿ ಅವರು ಮಕ್ಕಳಂತೆ ಆಟವಾಡುವ ಕೆಲವು ಶಿಕ್ಷಕರನ್ನು ಕೂಡ ನಾವು ನೋಡುತ್ತವೆ. ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ನಮ್ಮ ಶಿಕ್ಷಕರೊಂದಿಗೆ ಇದ್ದಂತಹ ಒಡನಾಟ ಸಲುಗೆ ಎಲ್ಲವೂ ಭವಿಷ್ಯದಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ತುಂಬಾನೇ ಸಹಾಯಕವಾಗುತ್ತವೆ ಎಂದು ಹೇಳಬಹುದು.

ಇನ್ನು ಶಿಕ್ಷಕರು ಮಕ್ಕಳ ಜೀವನದ ಮೇಲೆ ಅಗಾಧವಾದ ಪ್ರಭಾವವನ್ನು ಬೀರುತ್ತಾರೆ ಹಾಗೂ ಇಂದಿನ ಮಕ್ಕಳು ಭವಿಷ್ಯದಲ್ಲಿ ಯಾವ ರೀತಿಯ ಪ್ರಜೆಯಾಗಬೇಕು ಎಂಬುದನ್ನು ಸಹ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನಾವು ನಮ್ಮ ಶಾಲಾ ದಿನಗಳಲ್ಲಿ ನಮ್ಮ ನೆಚ್ಚಿನ ಶಿಕ್ಷಕರ ಜೊತೆಗೆ ಕಳೆದ ಆ ಸಮಯ ನಮಗೆ ಯಾವಾಗಲೂ ನೆನಪಿನಲ್ಲಿರುತ್ತದೆ. ಇಲ್ಲಿಯೂ ಸಹ ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿನಿಯರ ಜೊತೆ ಹೆಜ್ಜೆ ಹಾಕಿರುವ ಒಂದು ಮುದ್ದಾದ ವಿಡಿಯೋ ಒಳ್ಳೆಯ ಕಾರಣಕ್ಕೆ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್‌ನಲ್ಲಿ ತುಂಬಾನೇ ವೈರಲ್ ಆಗಿದೆ ನೋಡಿ.

ಅನೇಕ ಬಾರಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಅನೇಕ ಬಾರಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೇಗ ಅರ್ಥವಾಗುವಂತೆ ಪಾಠ ಮಾಡುವುದನ್ನು ಕಾಣಬಹುದು. ಆದರೆ ಈ ವೇಳೆ ಮಹಿಳಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರ ಜೊತೆ ತುಳು ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಹೌದು ಇಲ್ಲಿ ಶಿಕ್ಷಕಿ ಜೊತೆ ಮಕ್ಕಳೂ ಕೂಡ ಡ್ಯಾನ್ಸ್‌ ಮಾಡಿದ್ದಾರೆ.

ಅನೇಕ ಬಳಕೆದಾರರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೀರೆ ಧರಿಸಿದ ಶಿಕ್ಷಕಿಯೊಬ್ಬರು ತುಳು ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಕೆದಾರರೊಬ್ಬರು ಇದನ್ನು ಟ್ವೀಟ್ ಮಾಡಿದ್ದಾರೆ. ನಮ್ಮ ಬಾಲ್ಯದಲ್ಲಿ ನಮಗೆ ಇಂತಹ ಶಿಕ್ಷಕ ಏಕೆ ಸಿಗಲಿಲ್ಲ ಎಂದು ಈ ವಿಡಿಯೋಗೆ ಶೀರ್ಷಿಕೆ ಬರೆದಿದ್ದಾರೆ. ಒಮ್ಮೆ ನೀವು ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.