ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಗಳಿಗೆ ಪಾಠ ಹೇಳಿಕೊಡುತ್ತಿರುವ ಯಶ್ ಹೇಗಿತ್ತು ನೋಡಿ…ಚಿಂದಿ ವಿಡಿಯೋ

6,687

ಈ ಸ್ಟಾರ್ ಕಿಡ್ಸ್ ಎನ್ನುವಂತಹ ಕಾನ್ಸೆಪ್ಟ್ ಬಾಲಿವುಡ್‌ನಲ್ಲಿ ಹೆಚ್ಚಾಗಿ ಇದ್ದು ಅಂದರೆ ಸಿನಿಮಾ ತಾರೆಯರ ಮಕ್ಕಳ ಚಲನ ವಲನಗಳ ಬಗ್ಗೆ ಹೆಚ್ಚಾಗಿ ಬಾಲಿವುಡ್‌ನಲ್ಲಿ ಸುದ್ದಿಯಾಗುತ್ತದೆ. ಕೆಲವು ಸ್ಟಾರ್‌ ಮಕ್ಕಳು ಮನೆಯಿಂದ ಹೊರಗೆ ಬಂದರೆ ಸಾಕು ಫೊಟೋ ಕ್ಲಿಕ್ಕಿಸಿ ಬಿಡುತ್ತರೆ. ಹೌದು ಸ್ಟಾರ್ ನಟ ನಟಿಯರ ಮಕ್ಕಳು ಹೇಗೆ ಇದ್ದಾರೆ? ಅವರು ಹೇಗೆ ಡ್ರೆಸ್ ಮಾಡಿಕೊಳ್ಳುತ್ತಾರೆ? ಅವರು ಹೇಗೆ ಎಲ್ಲೆಲ್ಲಿ ಸುತ್ತಾಡುತ್ತಾರೆ ಎಂಬ ಹಲವು ವಿಚಾರಗಳ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇರುತ್ತದೆ.

ಸದ್ಯ ಇಂಥಹದ್ದೆ ಕುತೂಹಲಗಳು ಈ ಸ್ಯಾಂಡಲ್‌ವುಡ್‌ನಲ್ಲೂ ಹುಟ್ಟಿ ಕೊಂಡಿವೆ. ಹೌದು ನಮ್ಮ ಕನ್ನಡ ಚಿತ್ರರಂಗ ಅಂತ ಬಂದಾಗ ಅತಿ ಹೆಚ್ಚಾಗಿ ಇತ್ತೀಚಿಗೆ ಸದ್ದು ಮಾಡುತ್ತಾ ಇರುವ ಸ್ಟಾರ್ ಕಿಡ್ಸ್ ಅಂದರೆ ಅದು ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು. ರಾಧಿಕಾ ಮತ್ತು ಯಶ್ ಮಕ್ಕಳಾದ ಐರಾ ಹಾಗೂ ಯಥರ್ವ್ ಸದಾ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮುದ್ದು ಮಕ್ಕಳಿಗೆ ಅಭಿಮಾನಿ ಬಳಗವೇ ಇದ್ದು ಈಗ ಯಶ್‌ ಹಾಗೂ ರಾಧಿಕಾ ಮಕ್ಕಳ ಬಗ್ಗೆ ಮಾತನಾಡುವುದಕ್ಕೆ ಕಾರಣ ಅವರ ಹೊಸ ವೀಡಿಯೋ. ಹೌದು ಅ ಐರಾ ಮತ್ತು ಯಥರ್ವ್ ಇರುವ ಸುಂದರ ವಿಡಿಯೋ ಹರಿದಾಡುತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾನ್ಯವಾಗಿ ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.ಇತ್ತೀಚೆಗಷ್ಟೇ ಐರಸ ತನ್ನ ತಮ್ಮ ಯಥರ್ವ್‌ಗೆ ಪ್ರೀತಿಯಿಂದ ತಿನ್ನಿಸುತ್ತಿದ್ದಾಳೆ. ಆದರೆ ಅಮ್ಮ ಬಿಟ್ಟಿಲ್ಲ. ಈ ಕ್ಯೂಟ್ ವಿಡಿಯೋ ಹಂಚಿಕೊಂಡಿದ್ದ ನಟಿ ರಾಧಿಕಾ ಪಂಡಿತ್ ನನ್ನ ಸಹೋದರನಿಗೆ ತಿನ್ನಿಸಲು ಬಿಡಿ ಎನ್ನುವ ಕ್ಯಾಪ್ಷನ್ ಕೊಟ್ಟಿದ್ದತು ಈ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್‌ ಆಗದ್ದು ಸಾಕಷ್ಟು ಮೆಚ್ಚುಗೆ ಪಡೆದು ಕೊಂಡಿತ್ತು.

ಇನ್ನು ಈ ಮುದ್ದು ಮಕ್ಕಳಿಗೆ ಪ್ರತ್ಯೇಕವಾದ ಅಭಿಮಾನಿ ಬಳಗವೇ ಇದೆ. ಅಂದರೆ ಅವರನ್ನು ಫಾಲೋ ಮಾಡುವ ಅವರ ಫೋಟೋ ಮತ್ತು ವೀಡಿಯೋಗಳಿಗಾಗಿ ಕಾಯುವ ಸಾಕಷ್ಟು ಜನರಿದ್ದು ಹಾಗಾಗಿ ರಾಧಿಕಾ ಮಕ್ಕಳ ಕುರಿತಾಗಿ ಯಾವುದಾದರೂ ಪೋಸ್ಟ್ ಹಾಕಿದರೆ ಸಾಕು ಪೋಸ್ಟ್ ಕೆಲವೇ ಸಮಯದಲ್ಲಿ ವೈರಲ್ ಆಗಿಬಿಡುತ್ತದೆ. ಅಂಥಹ ಅದ್ಬುತ ಕ್ಷಣಗಳು ಲೇಖನಿಯ ಕೆಳಗಿರುವ ವಿಡಿಯೋದಲ್ಲಿದೆ ನೋಡಿ.

ಇನ್ನು ಪುಟ್ಟ ಪೋರ ಯಥರ್ವ್ ಮ್ಯೂಜಿಕ್‌ ಹಾಕಿ ಡಾನ್ಸ್ ಮಾಡಿದ ವಿಡಿಯೋ ಕೂಡ ಈ ಹಿಂದೆ ರಾಧಿಕಾ ಪಂಡಿತ್‌ ಹಂಚಿಕೊಂಡಿದ್ದು ಗೂಗಲ್‌ಗೆ ಮ್ಯೂಜಿಕ್‌ ಪ್ಲೇ ಮಾಡಲು ಹೇಳಿ ಯಥರ್ವ್ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಡಾನ್ಸ್‌ ಮಾಡಿದ್ದ. ಯಥರ್ವ್ ಜೊತೆಗೆ ಐರಾ ಕೂಡ ಡಾನ್ಸ್‌ ಮಾಡಿದ್ದಳು. ಇನ್ನು ರಾಧಿಕಾ ಯಶ್ ಮೊದಲ ಪುತ್ರಿ ಆಯ್ರಾ ಬಿಸಿಲು ನೋಡುವುದು ಹೇಗೆ ಎನ್ನುವ ಪಾಠ ಮಾಡಿದ್ದಳು. ಬಿಸಿಲು ನೋಡುವುದು ಹೇಗೆ ಎಂದು ಕೇಳಿದರೆ ತಲೆ ಮೇಲೆ ಎತ್ತಿ ಬಿಸಿಲಿನಲ್ಲಿ ಕಣ್ಣು ಮುಚ್ಚಿ ಕುಳಿತು ಬಿಡುತ್ತಿದ್ದಳು.

ಇದು ಮೊದಲ ಬಾರಿಗೆ ಹಂಚಿಕೊಂಡ ಐರಾಳ ವೀಡಿಯೊ.ಈ ಇಬ್ಬರು ಮಕ್ಕಳ ತುಂಟಾಟದ ವಿಡಿಯೋಗಳನ್ನ ನೋಡುವುದೇ ಚೆಂದ. ಅಷ್ಟೆ ಮುದ್ದಾಗಿ ಐರಾ ಮತ್ತು ಯಥರ್ವ್ ಕಾಣಿಸಿಕೊಳ್ಳುತ್ತಾರೆ. ಇನ್ನು ರಾಧಿಕಾ ಪಂಡಿತ್‌ ಅವರು ಮಕ್ಕಳ ಮುದ್ದು ವಿಡಿಯೋಗಳನ್ನ ಆಗಾಗ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮಕ್ಕಳನ್ನು ಫಾಲೋ ಮಾಡುವ ಅಭಿಮಾನಿಗಳು ಇದ್ದು ಹಾಗಾಗಿ ಅವರ ಫೊಟೋ ಮತ್ತು ವಿಡಿಯೋಗಳನ್ನು ರಾಧಿಕಾ ಅವರು ಹಂಚಿಕೊಳ್ಳುತ್ತಾರೆ.