ವಾರ್ತಾ ಮಂಜರಿ
Trending Stories, Viral News, Gossips & Everything in Kannada

ತೆಲುಗು ಶೋನಲ್ಲಿ ಕಾಂತಾರ ಕ್ಲೈಮಾಕ್ಸ್ ಡಾನ್ಸ್ ನೋಡಿ…ವಿಡಿಯೋ ಮೈನವಿರೇಳಿಸುತ್ತೆ

383,402

ಸದ್ಯ ತಿಂಗಳುಗಳು ಕಳೆದರೂ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಹವಾ ಕಮ್ಮಿ ಆಗಿಲ್ಲ. ಹೌದು ವಿಶ್ವದಾದ್ಯಂತ ಸಿನಿಮಾ ಗೆಲುವಿನ ಓಟ ಮುಂದುವರೆಸಿದ್ದು ಸಾಕಷ್ಟು ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇನ್ನು ಇತ್ತೀಚೆಗೆ ತೆಲುಗು ನಟ ಜ್ಯೂ. ಎನ್‌ಟಿಆರ್ ನೋಡಿ ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿಗೆ ಫೋನ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಾಂತಾರ ಸಿನಿಮಾ 8 ನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ರಿಷಬ್ ಶೆಟ್ಟಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶಾದ್ಯಂತ ಸುತ್ತಾಡಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಜೊತೆಗೆ ಸಿನಿಮಾ ಪ್ರಚಾರ ಮುಂದುವರೆಸಿದ್ದಾರೆ. ಈಗಾಗಲೇ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದ್ದು ಶೀಘ್ರದಲ್ಲೇ 250 ರೂ. ಕ್ಲಬ್ ಸೇರುವ ಸುಳಿವು ಸಿಗುತ್ತಿದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಸಿನಿಮಾ ಇನ್ನು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸಾಕಷ್ಟು ಜನ ಸ್ಟಾರ್ ಕಲಾವಿದರು ತಂತ್ರಜ್ಞರು ಕಾಂತಾರ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ.

ಸದ್ಯ ಕಾಂತಾರ ವಿಜಯಯಾತ್ರೆಯಲ್ಲಿ ರಿಷಬ್ ಶೆಟ್ಟಿ ತೊಡಗಿಸಿಕೊಂಡಿದ್ದು ದೆಹಲಿಯಲ್ಲೂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಸದ್ಯಕ್ಕೆ ಎರಡು ತಿಂಗಳು ವಿರಾಮ ತೆಗೆದುಕೊಳ್ಳುತ್ತೇನೆ. ಆ ನಂತರ ತನ್ನ ಮುಂದಿನ ಚಿತ್ರಗಳ ಬಗ್ಗೆ ಯೋಚಿಸುತ್ತೇನೆ. ಇನ್ನು ಕಾಂತಾರ 2 ಚಿತ್ರದ ಬಗ್ಗೆ ಈಗ ಯಾವ ಆಲೋಚನೆಯೂ ಇಲ್ಲ. ಸಿನಿಮಾ ಬಿಡುಗಡೆ ಆಗಿ 45 ದಿನ ಕಳೆದಿದ್ದು ಇನ್ನೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದೆ.

ನಾನು ಇನ್ನು ಸಿನಿಮಾ ಪ್ರಚಾರ ಮಾಡುತ್ತಿದ್ದೇನೆ. ಹಾಗಾಗಿ ಈಗ ಬರೀ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ ಇನ್ನು ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವುದು ಖುಷಿಯ ಸಂಗತಿಯಾಗಿದ್ದು ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸಿಗೆ ಕಾರಣವಾದದ್ದು ಕೊನೆಗೆ 20 ನಿಮಿಷದ ದೃಶ್ಯಗಳು ಅದ್ಭುತವಾಗಿ ತೆರೆ ಮೇಲೆ ತರಲಾಗಿದೆ. ಆದರೆ ಇತ್ತೀಚೆಗಷ್ಟೇ ಜಬರ್ದಸ್ತ್ ಹಾಸ್ಯ ನಟ ನೂಕರಾಜು ಆ ಸಾಹಸ ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ.

ಹೌದು ಮಲ್ಲೆಮಾಲ ಪ್ರೋಡಕ್ಷನ್‌ ಅವರ ಶ್ರೀದೇವಿ ಡ್ರಾಮಾ ಕಂಪನಿ ಪ್ರೋಮೋ ಇದೀಗ ವೈರಲ್ ಆಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಈ ಪ್ರೋಮೊದಲ್ಲಿ ಸ್ಪರ್ಧಿ ನೂಕರಾಜು ರಿಷಬ್ ಶೆಟ್ಟಿಯವರಂತೆ ನಟಿಸಿದ್ದು ಇನ್ನು ಈ ವಿಡಿಯೋ ನೋಡಿದ ಎಲ್ಲರೂ ವಾವ್ ರಿಷಬ್ ಶೆಟ್ಟಿಯಂತೆ ಅದ್ಭುತವಾಗಿ ನಟಿಸಿದ್ದೀರ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.ಇನ್ನು ಈ ದೃಶ್ಯವು ದೈವದ್ದು ಆದ ಕಾರಣ ಸಿನಿಮಾದಲ್ಲಿ ಕೂಡ ತನ್ನದೇ ಆದ ಮೌಲ್ಯವನ್ನು ಹೊಂದಿದ್ದು ಹೀಗಾಗಿ ಈ ವಿಚಾರವಾಗಿ ರಿಷಬ್ ಶೆಟ್ಟಿಯವರು ಏನು ಹೇಳುತ್ತಾರೆಂದು ನೋಡಬೇಕು.

ಸದ್ಯಕ್ಕಂತು ಕಾಂತಾರ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಹೊಸ ದಾಖಲೆಯನ್ನೇ ಬರೆದಿದ್ದು ಕರ್ನಾಟಕ ರಾಜ್ಯ ಒಂದರಲ್ಲೇ ಕಾಂತಾರ ಚಿತ್ರದ ಒಂದು ಕೋಟಿ ಟಿಕೆಟ್ ಸೇಲ್ ಆಗಿರುವುದು ವಿಶೇಷ. ಕಾಂತಾರ ಸಿನಿಮಾದ ಒಂದು ಕೋಟಿ ಟಿಕೆಟ್ ಮಾರಾಟವಾಗಿರುವ ಬಗ್ಗೆ ಹೊಂಬಾಳೆ ಫಿಲ್ಡ್ ಅಧಿಕೃತವಾಗಿ ಹೇಳಿಕೊಂಡದ್ದು ಅಷ್ಟೇ ಅಲ್ಲದೆ ವರ್ಲ್ಡ್ ವೈಡ್ ಒಟ್ಟು ಕಾಂತಾರ 350 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಹೀಗಾಗಿ ಕಾಂತಾರ ಸಿನಿಮಾವು 400 ಕೋಟಿಯಷ್ಟು ಹೆಜ್ಜೆ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.