ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮನೆಯಲ್ಲಿ ಬೆಕ್ಕಿನ ಹಾಗೆ ಹುಲಿ ಸಾಕಿರುವ ಕುಟುಂಬ ನೋಡಿ …ಚಿಂದಿ ವಿಡಿಯೋ

45,073

ಮೊದಲಿಂದಲೂ ಮನುಷ್ಯ ಜೀವಿ ಸಾಕು ಪ್ರಾಣಿಗಳ ಮೇಲೆ ವಿಶೇಷ ಒಲವು ಹಾಗೂ ಬಾಂಧವ್ಯವನ್ನು ಹೊಂದಿದ್ದಾನೆ. ಸಾಮಾನ್ಯವಾಗಿ ಹೆಚ್ಚಾಗಿ ಎಲ್ಲರು ಸಾಕುವ ಪ್ರಾಣಿಗಳೆಂದರೆ ನಾಯಿ ಹಾಗೂ ಬೆಕ್ಕುಗಳು. ಹಾಗೆಯೇ ಹಳ್ಳಿಗಳ ಕಡೆ ಮುಖ ಮಾಡಿದರೆ ಅಲ್ಲಿನ ಜನತೆ ಜಾನುವಾರುಗಳಾದ ಹಸು, ಎಮ್ಮ, ಕುರಿ, ಆಡು, ಹಂದಿ, ಕೋಳಿಗಳನ್ನು ಸಾಕುತ್ತಾರೆ. ಕೇವಲ ಅವುಗಳಿಂದ ಉಪಯೋಗವಾಗುತ್ತದೆ ಎಂದು ಸಾಕದೆ, ಅವುಗಳ ಜೊತೆ ವಿಶೇಷವಾದ ಬಾಂಧವ್ಯವನ್ನು ಕೂಡ ಹೊಂದಿದ್ದಾರೆ. ಇನ್ನು ಪೇಟೆಗಳಂತು ನಾಯಿ ಹಾಗೂ ಬೆಕ್ಕುಗಳನ್ನು ಸಾಕಯವವರ ಸಂಖ್ಯೆ ಜಾಸ್ತಿಯೇ ಇದೆ ಎಂದೇ ಹೇಳಬಹುದು.

ಅದರಲ್ಲೂ ಈ ಮನುಷ್ಯ ಜೀವಿ ಶ್ವಾನಗಳ ಮೇಲೆ ವಿಶೇಷವಾದ ಭಾವನಾತ್ಮಕ ಸಂಭಂದವನ್ನು ಹೊಂದಿದ್ದಾನೆ. ವಿವಿಧ ಜಾತಿಯ ಶ್ವಾನಗಳನ್ನು ಸಾವಿರಾರೂ ಕೊಟ್ಟು ಖರೀದಿಸಿ ಪ್ರೀತಿಯ ಮಕ್ಕಳಂತೆ ಸಾಕುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಶ್ವಾನಕ್ಕೆ ನಾಮಕರಣ ಶಾಸ್ತ್ರ ಹಾಗೂ ಹುಟ್ಟಿದಹಬ್ಬವನ್ನು ಮಾಡುವುದನ್ನು ಕೂಡ ನಾವು ನೋಡಿರಬಹುದು. ಅದನ್ನು ಪ್ರಾಣಿ ಎಂದು ನೋಡದೆ ತಮ್ಮ ಜೊತೆಯೆ ಹುಟ್ಟಿದ ಮಗುವಂತೆ ಲಾಲನೆ ಪೋಷಣೆ ಮಾಡುತ್ತಾ ಬೆಳೆಸುತ್ತಿರುತ್ತಾರೆ.

ಇನ್ನೂ ಮನೆಯಲ್ಲಿ ಈ ರೀತಿಯಾಗಿ ಸಾಕು ಪ್ರಾಣಿಗಳನ್ನು ಸಾಕುವುದು ಸರ್ವೆ ಸಾಮಾನ್ಯ. ಆದರೆ ಎಂದಾದರು ಮನೆಯಲ್ಲಿ ಕಾಡು ಪ್ರಾಣಿಗಳಾದ ಕಾಡಿನ ರಾಜ ಸಿಂಹ, ಕಾಡಿನ ವ್ಯಾಘ್ರ ಹುಲಿರಾಯನನ್ನು ಸಾಕುವುದನ್ನು ಕೇಳಿದ್ದೀರಾ ನೋಡಿ ಆ ವಿಡಿಯೋ.