ಯಾರೇ ಬರಲಿ ಎಲ್ಲರಿಗೂ ಪ್ರೀತಿ ಹಂಚುವ ಯಜಮಾನ ದಾಸ ಎಂದರೆ ಅಭಿಮಾನಿಗಳ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು. ಇನ್ನು ನಟ ದರ್ಶನ್ ಪ್ರಾಣಿ ಪ್ರೀತಿ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಹೌದು ಸಂಕ್ರಾಂತಿ ಸಂದರ್ಭದಲ್ಲಿ ಫಾರ್ಮ್ ಹೌಸ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದ ರೀತಿಯೇ ಅದಕ್ಕೆ ಸಾಕ್ಷಿ ಎನ್ನಬಹುದು. ಕುದುರೆ ಹಸುಗಳೊಂದಿಗೆ ದಚ್ಚು ಸಂಕ್ರಾಂತಿ ಸಂಭ್ರಮದಲ್ಲಿ ಕಂಡುಬಂದಿದ್ದು ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ತಮ್ಮ ಫಾರ್ಮ್ ಹೌಸ್ನಲ್ಲಿ ಆಸರೆ ನೀಡಿರೋ ದಚ್ಚು ಅವುಗಳನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ. ಕುದುರೆ ಹಸು ಮಾತ್ರವಲ್ಲದೆ ನಾಯಿ ಕುರಿ ಪಕ್ಷಿಗಳು ಕೂಡ ಅವರ ಫಾರ್ಮ್ ಹೌಸ್ನಲ್ಲಿದೆ.
ಇನ್ನು ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಅಷ್ಟೇ ಅಲ್ಲ. ಜೊತೆಗೆ ಸ್ನೇಹಜೀವಿ ಕೂಡ ಹೌದು. ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಚಾಲೆಂಜಿಂಗ್ ಸ್ಟಾರ್ ಹುಟ್ಟುಗುಣ. ಇನ್ನು ಅವಕಾಶಗಳಿಲ್ಲದೆ ಕುಗ್ಗಿ ಹೋಗಿದ್ದ ತಮ್ಮ ತಂದೆಯ ಕಾಲದ ಖಳನಟರ ಮಕ್ಕಳಿಗೆ ನವಗ್ರಹ ಸಿನಿಮಾ ಮೂಲಕ ಮತ್ತೆ ಅವಕಾಶ ಕೊಟ್ಟ ನಟ ದಚ್ಚು.
ಹೌದು ವಿನೋದ್ ಪ್ರಭಾಕರ್ ಪ್ರಜ್ವಲ್ ದೇವರಾಜ್ ತರುಣ್ ಸುಧೀರ್ ಹೀಗೆ ಅನೇಕರು ದಾಸನ ಪ್ರಾಣ ಸ್ನೇಹಿತರಾಗಿದ್ದು ಅವರೆಲ್ಲರಿಗೂ ಸಾರಥಿ ಅಂದ್ರೆ ಸಂಭ್ರಮ ಎನ್ನಬಹುದು. ಇನ್ನು ಮನುಷ್ಯ ಅಂದಮೇಲೆ ಉತ್ತಮ ಗುಣಗಳ ಜೊತೆಗೆ ಒಂದೆರಡು ಋಣಾತ್ಮಕ ಗುಣಗಳೂ ಇದ್ದೇ ಇರುತ್ತದೆ. ಹೌದು ಅಂಥಾ ಗುಣ ದರ್ಶನ್ ಅವರಲ್ಲೂ ಇದ್ದು ಡಿಬಾಸ್ ಸಿಕ್ಕಾಪಟ್ಟೆ ಮುಂಗೋಪಿ. ಆದರೆ ಅಷ್ಟೇ ಸ್ವಾಭಿಮಾನಿಯೂ ಹೌದು
ದರ್ಶನ್ ಬರೀ ನಟನೆ ಮಾಡಿ ಅಭಿಮಾನಿಗಳ ಆರಾಧ್ಯದೈವ ಆದವರಲ್ಲ. ಹೌದು ಅಗತ್ಯ ಉಂಟಾದಾಗ ಪರೋಪಕಾರ ಮಾಡುವುದರಲ್ಲೂ ಯಜಮಾನ ಸದಾ ಮುಂದೆ. ತನ್ನನ್ನು ಅರಸಿ ಬಂದ ಅಭಿಮಾನಿಗಳ ಕೈ ಬಿಡುವುದಿಲ್ಲ ಚಾಲೆಂಜಿಂಗ್ ಸ್ಟಾರ್. ಹೌದು ದರ್ಶನ್ ಅನೇಕರಿಗೆ ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸಿದ್ದು ಅದರಲ್ಲೂ ಕೂಡ ಹಾಸ್ಯ ನಟ ಬುಲೆಟ್ ಪ್ರಕಾಶ್ ಕೊನೆದಿನಗಳಲ್ಲಿ ಅವರ ಆಸ್ಪತ್ರೆ ವೆಚ್ಚ ಮಗಳ ಮದುವೆ ಖರ್ಚು ನೋಡಿಕೊಂಡಿದ್ದಾರೆ.
ಇನ್ನು ವಾರಾಂತ್ಯ ಬಂತು ಅಂದರೆ ಮೈಸೂರಿನ ಫಾರ್ಮ್ ಹೌಸ್ನತ್ತ ಮುಖ ಮಾಡುತ್ತಾರೆ ದರ್ಶನ್. ಹೌದು ಬೆಳಗ್ಗೇನೆ ಸಾಮಾನ್ಯ ರೈತನಂತೆ ಫಾರ್ಮ್ ಹೌಸ್ನಲ್ಲಿರುವ ಹಸುಗಳ ಹಾಲು ಕರೀತಾರೆ. ಹುಲ್ಲು ಕುಯ್ದು ಜಾನುವಾರುಗಳಿಗೆ ಮೇವು ಹಾಕುತ್ತಾರೆ. ರೈತರಿಗೆ ಕಷ್ಟ ಬಂದಾಗ ಸ್ಪಂದಿಸುವ ಮೊದಲ ವ್ಯಕ್ತಿ ದರ್ಶನ್. ಸದ್ಯ ಇಂತಹ ಗುಣಗಳುಳ್ಳ ನಟನ ಅಪರೂಪದ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಲೇಖನಿಯ ಕೆಳಗೆ ಆ ವಿಡಿಯೋ ನೋಡಬಹುದು.