ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅರೇಬಿಕ್ ಸ್ಟೈಲ್ ನಲ್ಲಿ ಬೆಲ್ಲಿ ಡಾನ್ಸ್ ಮಾಡಿದ ವೈಷ್ಣವಿ ಗೌಡ…ಹೊಸ ವಿಡಿಯೋ ಚಿಂದಿ

5,282

ಈ ರೀಲ್ಸ್ ಎಂಬುದು ಬಂದ ಮೇಲೆ ಸಾಮಾನ್ಯ ಜನರಿಗೆ ಮಾತ್ರವಲ್ಲದೇ ಸಿನಿಮಾ ಸ್ಟಾರ್ ಗಳು ಕೂಡ ಅದಕ್ಕೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಹೌದು ಯಾವುದಾದರೊಂದು ಹಾಡಿಗೆ ಡ್ಯಾನ್ಸ್ ಮಾಡಿ ಅಥವಾ ಸಿನಿಮಾ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ಸಿನಿಮಾ ನಟಿಯರು ಸಹ ಭಿನ್ನ ಭಿನ್ನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡುತ್ತಾರೆ. ಅದರಲ್ಲೂ ಕೂಡ ನಮ್ಮ‌ ಕನ್ನಡಿಗರ ಮನೆಮಗಳು ಎನಿಸಿಕೊಂಡಿರುವ ವೈಷ್ಣವಿ ಗೌಡ ಅಪ್ಲೋಡ್ ಮಾಡುವ ವಿಡಿಯೋ ಗಳು ತುಂಬಾನೇ ಸ್ಪೆಷಲ್ ಆಗಿರುತ್ತದೆ.

ಯಾಕಂದರೆ ಅವರು ಯಾವಾಗಲೂ ಡ್ಯಾನ್ಸ್ ವಿಡಿಯೋ ಗಳನ್ನೇ ಹಾಕುತ್ತಿರುತ್ತಾರೆ. ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಅಗ್ನಿ ಸಾಕ್ಷಿ ಎಂಬ ಧಾರವಾಹಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ಜನ‌ಮನ್ನಣೆ ಗಳಿಸಿದ್ದ ವೈಷ್ಣವಿ ಗೌಡ ಗುಳಿ ಕೆನ್ನೆ ಸುಂದರಿಯೂ ಹೌದು. ಇವರು ಬಣ್ಣದ ಲೋಕಕ್ಕೆ ಬಂದಿದ್ದು ಆಕಸ್ಮಿಕವಾಗಿ.‌ ಒಂದು‌‌ ಬಾರಿ‌ ತನ್ನ ತಾಯಿ ಜೊತೆ ಮನೆ ಹತ್ತಿರದ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಸಹಾಯಕ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದು ಅವರು ಈ ಹಿಂದೆ ಪ್ರಸಾರ ಆಗುತ್ತಿದ್ದ ದೇವಿ ಧಾರವಾಹಿಯ ನಿರ್ದೇಶಕರಾಗಿದ್ದರು.‌ ಹೌದು ವೈಷ್ಣವಿ ಅವರನ್ನು ನೋಡಿದ ಅವರು ತಮ್ಮ‌ ಧಾರಾವಾಹಿ ಗೆ ಅಲ್ಲಿಯೇ ಆಫರ್ ಕೊಟ್ಟಿದ್ದರು.‌

ಇನ್ನು ಆಫರ್ ಒಪ್ಪಿಕೊಂಡ ವೈಷ್ಣವಿ ಯವರು ಅಲ್ಲಿಂದ ತಮ್ಮ ಬಣ್ಣದ ಲೋಕದ ಜರ್ನಿ‌ ಆರಂಭಿಸಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಇವರು ತಮ್ಮ ನಟನೆಗಾಗಿ ಪದವಿಯನ್ನು ಅರ್ಧಕ್ಕೇ ಬಿಟ್ಟರು. ತದನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ವ್ಯಾಸಾಂಗ ಮುಗಿಸಿದ್ದು ಇನ್ನು ಇವರು ದೇವಿ ಧಾರವಾಹಿಯಲ್ಲಿ ನಟಿಸಿದ್ದರೂ ಫೇಮಸ್ ಆಗಿದ್ದು ಜನಮನ್ನಣೆ ಗಳಿಸಿದ್ದು ಮಾತ್ರ ಕಲರ್ಸ್ ಕನ್ನಡದ ಅಗ್ನಿ ಸಾಕ್ಷಿ ಧಾರವಾಹಿ ಮೂಲಕ.

ಹೌದು ಅದರಲ್ಲಿ ಸನ್ನಿಧಿ ಪಾತ್ರ ಅಭಿಮಾನಿಗಳ ಮನದಲ್ಲಿ ಸನ್ನಧಿಯಾಗಿಯೇ ಉಳಿದುಕೊಂಡಿದ್ದು ಅದಾದ ಬಳಿಕ ಇವರುಗಿರಿಗಿಟ್ಲೆ ಎಂಬ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನವನ್ನೂ ಪ್ರವೇಶಿಸಿದ್ದಾರೆ.‌ ಅಷ್ಟೇ ಅಲ್ಲ‌ ಬಿಗ್ ಬಾಸ್ ಸ್ಪರ್ಧಿಯಾಗಿ ಭಾಗವಹಿಸಿ ವೈಯುಕ್ತಿಕವಾಗಿ ತಾನು ಹೇಗೆ ಅನ್ನುವುದನ್ನು ಜನರಿಗೆ ತೋರಿಸಿದ್ದು ನೋಡಲು ಮುದ್ದು ಮುದ್ದಾಗಿರುವ ವೈಷ್ಣವಿ ಗೌಡ ಅವರ ವ್ಯಕ್ತಿತ್ವ ಕೂಡ ಅಷ್ಟೆ ಮುದ್ದಾಗಿದೆ ಅನ್ನುವುದು ಗೊತ್ತಾಗಿದ್ದೇ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ.

ಮೊದ ಮೊದಲು ಏನೂ ತಿಳಿಯದವರಂತೆ ಇದ್ದ ವೈಷ್ಣವಿ ತದನಂತರ ಟಾಸ್ಕ್ ಗಳಲ್ಲಿ ತನ್ನನ್ನು ತಾನು ನಿರೂಪಿಸಿಕೊಂಡಿದ್ದು ಅಷ್ಟೇ ಅಲ್ಲ ಅಲ್ಲಿ ಅವರ ನಡತೆ ಕಾಮೆಡಿ ಧ್ಯಾನ ಯೋಗ ಡ್ರೆಸ್ಸಿಂಗ್ ಸ್ಟೈಲ್ ಈ ಎಲ್ಲವೂ ಕೂಡ ಫೇಮಸ್ ಆಗಿ ಕೊನೆಯ ನಾಲ್ಕನೇ ಸ್ಪರ್ಧಿಯಾಗಿ ಹೊರಬಂದಿದ್ದರು.

ಇನ್ನು ಭರತನಾಟ್ಯಂ ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ ಅವರು ಕುಣಿಯೋಣ ಬಾರ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು. ಜೊತೆಗೆ ನಿರೂಪಣೆಗೂ ಸೈ ಅನ್ನುವಂತೆ ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು.ಇನ್ನು ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕತ್ ಆಕ್ಟೀವ್ ಆಗಿದ್ದಾರೆ. ಯಾವಾಗಲೂ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿರುವ ವೈಷವಿ ಅವರು ಟ್ರೆಂಡಿ ಹಾಡುಗಳಿಗೆ ಸ್ಟೆಪ್ ಹಾಕುತ್ತಿರುತ್ತಾರೆ‌.

ಇತ್ತೀಚೆಗಷ್ಟೇ ವಿಕ್ರಾಂತ್ ರೋಣಾ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಿದ ಜ್ಯಾಕ್ಲೀನ್ ಫರ್ನಾಂಡೀಸ್ ಅವರ ಹಾಡಿಗೆ ಅಂದರೆ ಎಕ್ಕ ಸಕ್ಕ ಹಾಡಿಗೆ ಕಪ್ಪು ಬಣ್ಣದ ಡ್ರೆಸ್ ತೊಟ್ಟ ವೈಷ್ಣವಿ ಗೌಡ ಕ್ಯೂಟ್ ಸ್ಟೆಪ್ ಹಾಕಿದ್ದರು. ಸದ್ಯ ಇದೀಗ ಬೆಲ್ಲಿ ಡ್ಯಾನ್ಸ್ ಮಾಡುತ್ತಾ ಸೊಂಟ ಬಳುಕಿಸಿದ್ದಾರೆ. ಈ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.