ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಊರಿಗೆಲ್ಲಾ ಕಾಟ ಕೊಡುತ್ತಿದ್ದ ಕೋತಿ ಹಿಡಿಯಲು ಈತ ಮಾಡಿದ ಪ್ಲಾನ್ ನೋಡಿ…ವಿಡಿಯೋ

1,913

ಈ ಕೋತಿಗಳ ಚೇಷ್ಟೆ ಒಂದೆರಡಲ್ಲ. ಹೌದು ಕೋತಿಗಳ ಕಾಟದಿಂದ ಬೇಸತ್ತ ಜನರು ಅವುಗಳಿಂದ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ಕೂಡ ಮಾಡಿ ಯಾವುದೂ ಪ್ರಯೋಜನವಾಗದ ಕಾರಣ ಊರನ್ನೇ ಬಿಡುವ ನಿರ್ಧಾರಕ್ಕೆ ಬಂದಿರುವ ಘಟನೆ ಹಲವೆಡೆ ನಡೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಪಲವಲದೊಡ್ಡಿ ಎಂಬ ಗ್ರಾಮದಲ್ಲಿ ಜನರಿಗಿಂತ ಕೋತಿಗಳ ಸಂಖ್ಯೆಯೇ ಅಧಿಕವಾಗಿದ್ದು ಈ ಕೋತಿಗಳು ಗ್ರಾಮದಲ್ಲಿರುವ ನಿವಾಸಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿದೆ.

ಇನ್ನು ಈ ಕೋತಿಗಳು ತೆಂಗು ಬಾಳೆ ಮೊದಲಾದ ತೋಟಗಳಿಗೆ ಹಾನಿ ಮಾಡುತ್ತಿರುವುದಲ್ಲದೇ ನಾನಾ ಹಣ್ಣು ತರಕಾರಿಗಳ ಗಿಡಗಳನ್ನು ನಾಶ ಮಾಡುತ್ತಿದೆ. ಹಾಗೆಯೇ ಕೆಲವೆಡೆ ವಿದ್ಯುತ್‌ ಟಿವಿ ಕೇಬಲ್‌ ವಯರ್‌ಗಳನ್ನು ಕಚ್ಚಿ ತುಂಡರಿಸಿದ್ದು ಆದರೆ ಈ ಕೋತಿಗಳ ಕಾಟ ಇಷ್ಟಕ್ಕೆ ನಿಂತಿಲ್ಲ. ಇಷ್ಟು ಮಾತ್ರವಲ್ಲದೇ ಮಕ್ಕಳ ಮೈಗಳನ್ನು ಈ ಕೋತಿಗಳು ಪರಚುವ ಯತ್ನ ಮಾಡುತ್ತಿದೆ. ಹೌದು ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಈ ಸಮಸ್ಯೆಯ ಬಗ್ಗೆ ಪಲವಲದೊಡ್ಡಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು ಆದರೆ ಇದರಿಂದಾಗಿ ತಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಹಾಗೆಯೇ ಮನೆಗೆ ಇಷ್ಟು ಎಂದು ಪಟ್ಟಿ ಮಾಡಿ ಹಣ ನೀಡುತ್ತೇವೆ ಎಂದರು ಕೂಡ ಕೋತಿಯನ್ನು ಹಿಡಿದುಕೊಂಡು ಹೋಗಿ ಎಂದರೂ ಯಾರೂ ಮುಂದೆ ಬರುತ್ತಿಲ್ಲ. ಈ ಕೋತಿಗಳು ಈಗ ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಈ ಕೋತಿಗಳ ಕಾಟಾದಿಂದ ಬೇಸತ್ತ ಗ್ರಾಮದ ಜನರು ಸಾಮೂಹಿಕವಾಗಿ ಊರು ತೊರೆಯುವ ನಿರ್ಧಾರ ಕೂಡ ಮಾಡಿದ್ದಾರೆ.

ಕೋತಿ ಮನೆಗೆ ಬಂದು ಮನೆಯೊಳಗೆ ಇರುವ ಎಲ್ಲಾ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದು ಮಕ್ಕಳ ಕೈಯಲ್ಲಿದ್ದ ತಿಂಡಿ ವಸ್ತುಗಳನ್ನು ಎಳೆದು ಕೊಂಡೊಯ್ಯುತ್ತದೆ. ಟಿವಿ ವಿದ್ಯುತ್‌ ವಯರ್‌ಗಳನ್ನು ತುಂಡರಿಸುತ್ತದೆ. ಯಾವುದೂ ಸಾಮಾಗ್ರಿಗಳು ಉಳಿಯುವುದಿಲ್ಲ. ಎಲ್ಲಿಗೂ ನಾವು ಹೋಗುವಂತಿಲ್ಲ. ಮನೆಯಲ್ಲಿ ಯಾರದರೂ ಒಬ್ಬರು ಕಾದು ಕೂರಲೇ ಬೇಕಾಗುತ್ತದೆ. ನಮ್ಮ ಪರಿಸ್ಥಿತಿ ಈ ರೀತಿ ಆಗಿಬಿಟ್ಟಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.ಈ ಸಮಸ್ಯೆಗೆ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ಕೋತಿಗಳ ಕಾಟವನ್ನು ತಪ್ಪಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಹೀಗೆ ನಮ್ಮ ರಾಜ್ಯದಲ್ಲಿ ಈ ರೀತಿ ಗ್ರಾಮಸ್ಥರು ಕೋತಿಗಳಿಂದ ಆಗಿರುವ ಸಮಸ್ಯೆ ಹೇಳಿಕೊಂಡರೆ ಇಲ್ಲೊಬ್ಬ ವ್ಯಕ್ತಿ ತನ್ನ ತೋಟಕ್ಕೆ ಕೋತಿ ಕಾಟ ಕೊಡುತ್ತಿದ್ದ ಕಾರಣ ಅವನೇ ತನ್ನ ಬುದ್ದಿವಂತಿಕೆಯಿಂದ ಪೈಪ್ ಹಾಗೂ ಎಣ್ಣೆ ಬಾಟಲಿ ಗಳನ್ನು ಬಳಸಿ ಕೋತಿಯನ್ನು ಹಿಡಿದಿದ್ದಾನೆ. ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೀವು ಒಮ್ಮೆ ಕೋತಿಯನ್ನು ಹಿಡಿಯುವ ಸುಲಭ ಟ್ರಿಕ್ಸ್ ನೋಡಬಹುದು.