ತಮ್ಮ ಲುಕ್ ನಿಂದ ಚಿತ್ರರಂಗದಲ್ಲಿ ತುಪ್ಪದ ಬೆಡಗಿ ಎಂಬ ಹೆಸರು ಗಳಿಸಿ ಯುವ ಪೀಳಿಗೆಗಳ ನಿದ್ದೆ ಕದ್ದ ಪೋರಿ ಎಂದರೆ ನಟಿ ರಾಗಿಣಿ ದ್ವಿವೇದಿ Ragini ಅವರು. ಹೌದು ಮೂಲತಃ ಪಂಜಾಬಿ ಕುಟುಂಬದವರಾದ ರಾಗಿಣಿ ಬೆಂಗಳೂರಿನಲ್ಲಿ ಜನಿಸುತ್ತಾರೆ. ರಾಗಿಣಿ ಅವರ ತಾಯಿ ಗೃಹಿಣಿಯಾದರೆ ತಂದೆ ರಾಕೇಶ್ ಕುಮಾರ್ ದ್ವಿವೇದಿ ಅವರು ಭಾರತೀಯ ಸೇನೆಯಲ್ಲಿ ಆರ್ಮಿ ಜನರಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರಂತೆ.
ಬಾಲ್ಯದಿಂದಲೂಬ ಕೂಡ ಕಲೆಯ ಮೇಲೆ ಅಪಾರ ಆಕರ್ಷಣೆ ಹೊಂದಿದ್ದ ರಾಗಿಣಿ ಅವರು 2008 ರಲ್ಲಿ ಫ್ಯಾಷನ್ ಡಿಸೈನರ್ ಪ್ರಸಾದ್ ಎನ್ನುವರು ಈಕೆಯನ್ನು ಮಾಡೆಲಿಂಗ್ಗೆ ಪರಿಚಯಿಸುತ್ತಾರೆ. ಹೌದು ಡಿಸೆಂಬರ್ 2008 ರಲ್ಲಿ ಹೈದರಾಬಾದ್ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಗಿಣಿ ಯವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮುತ್ತಾರೆ.
ಆದರೆ ಮುಂಬೈನಲ್ಲಿ ನಡೆದ 2009 ರ ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಇಂಡಿಯಾಗೆ ನೇರ ಪ್ರವೇಶವನ್ನು ಪಡೆದ ನಟಿ ಇಲ್ಲಿ ರಿಚ್ಫೀಲ್ ಮಿಸ್ ಬ್ಯೂಟಿಫುಲ್ ಹೇರ್ ಎಂಬ ಶೀರ್ಷಿಕೆಯನ್ನು ಮುಡಿಗೇರಿಸಿಕೊಳ್ಳುತ್ತಾರೆ.ಇದಾದ ನಂತರ ಚಿತ್ರರಂಗಕ್ಕೆ ಪ್ರವೇಶ ಮಾಡಿದ ರಾಗಿಣಿಯವರು 2009 ರಲ್ಲಿ ಕಿಚ್ಚ ಸುದೀಪ್ ಅವರು ಅಭಿನಯಿಸಿ ನಿರ್ದೇಶಿಸಿದಂತಹ ಸಿನಿಮಾ ವೀರ ಮದಕರಿ ಮೂಲಕವಾಗಿ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ್ದು ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಚೊಚ್ಚಲ ಸುವರ್ಣ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದು ಕೊಂಡರು.
ನಂತರ ಕೆಂಪೇಗೌಡ ಬಂಗಾರಿ,ಲ ಶಿವ ರಾಗಿಣಿ ಐಪಿಎಸ್ ಕಳ್ಳ ಮಳ್ಳ ಸುಳ್ಳ ಆರಕ್ಷಕ ಅಧ್ಯಕ್ಷ ಇನ್ ಅಮೇರಿಕ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಪ್ರಮುಖ ನಟಿಯಾಗಿ ಅಭಿನಯಿಸುತ್ತಾ ಕನ್ನಡ ಚಿತ್ರರಂಗದ ಉತ್ತಮ ನಟಿಯಾಗಿದ್ದು ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಮೆರೆಯುತ್ತಿದ್ದ ಸಮಯದಲ್ಲೇ ಕಳೆದ ವರುಷ ಒಂದು ಆರೋಪದ ಮೇಲೆ ಸುದ್ದಿಯಲ್ಲಿದ್ದ ನಟಿ ಚಿತ್ರರಂಗದ ಕೆಂಗಣ್ಣಿಗೆ ತುತ್ತಾಗಿದ್ದರು.
ಹೌದು ಕಳೆದ ವರುಷ ಒಂದು ಪ್ರಕರಣದ ಮೇಲೆ ಕೃಷ್ಣನ ಜನ್ಮಸ್ಥಳಕ್ಕೆ ಹೋಗಿದ್ದ ನಟಿ ರಾಗಿಣಿ, ಈ ವರ್ಷ ಜನವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದಾರೆ. ವಿವಾದದ ಸುಳಿಯಲ್ಲಿ ಬಿದ್ದಿದ್ದ ರಾಗಿಣಿಯವರಿಗೆ ಇದೀಗ ಅದೃಷ್ಟ ಖುಲಾಯಿಸಿದ್ದು ಸಾಲು ಸಾಲು ಸಿನಿಮಾಗಳು ಅವರ ತೆಕ್ಕೆಗೆ ಬಂದು ಬಿದ್ದಿದೆ. ಹೌದ ಈಗಾಗಲೇ ಕರ್ವ 3 ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಒಪ್ಪಿಕೊಂಡಿರುವ ರಾಗಿಣಿ ಜಾನಿ ವಾಕರ್ ಎಂಬುವ ಸಿನಿಮಾಕ್ಕೂ ಸಹ ಸಹಿ ಮಾಡಿದ್ದಾರೆ. ವೇದಿಕ್ ಎಂಬ ನಿರ್ದೇಶಕ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ರಾಗಿಣಿ ಅವರು ಚಿತ್ರದಲ್ಲಿ ಪೊಲೀಸ್ ತನಿಖೆ ದಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಈ ವಿಚಾರದ ಕುರಿತು ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿರುವ ಈ ತುಪ್ಪದ ಬೆಡಗಿ ಜಾನಿ ವಾಕರ್ ಸಿನಿಮಾದಲ್ಲಿ ನನ್ನ ಪಾತ್ರ ಸಿಕ್ಕಾಪಟ್ಟೆ ಖಡಕ್ ಆಗಿದ್ದು ಬಹಳ ವಿಭಿನ್ನವಾಗಿರುವ ಈ ಪಾತ್ರದ ಸುತ್ತ ಮುತ್ತಲಲ್ಲಿ ಕಥೆ ಸಾಗುತ್ತದೆ.ಇನ್ನು ಈ ಚಿತ್ರದಲ್ಲಿ ಅಭಿನಯಿಸಲು ನಾನೂ ಕಾತರದಿಂದ ಕಾಯುತ್ತಿದ್ದು ಈ ಅವಕಾಶ ಸಿಕ್ಕಿರುವುದೇ ನನಗೆ ಪುಣ್ಯಎಂದು ತಿಳಿಸಿದ್ದಾರೆ.
ಇನ್ನು ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ಭಾರತೀಯ ಹಾಗೂ ಪಾಶ್ವಿಮಾತ್ಯ 2ಹುರುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಇದರ ಬೆನ್ನಲ್ಲೇ ಕಳೆದ ವಾರ ಕರ್ವ 3 ಸಿನಿಮಾಕ್ಕೆ ಸಹಿ ಹಾಕಿರುವುದಾಗಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದರು.ಈ ಮಧ್ಯೆ ಗಾಂಧಿಗಿರಿ ಎಂಬ ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದು ಸದ್ಯ ರಾಗಿಣಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ.
ಸದ್ಯ ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ವೈರಲ್ ಲಾಗುತ್ತಿತ್ತು ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ರಾಗಿಣಿ ಬಹಳ ಹಾಟ್ ಆಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ರಾಗಿಣಿ ನಟನೆಯ ಜತೆಗೆ ಉತ್ತಮ ಡ್ಯಾನ್ಸರ್ ಎಂಬುದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ರಾಗಿಣಿ ಅವರ ಈ ಸ್ಪೆಷಲ್ ಪರ್ಫಾಮೆನ್ಸ್ ನೋಡುವ ಕುತೂಹಲ ನಿಮಗಿದ್ದರೆ ಕೆಳಗಿನ ವಿಡಿಯೋ ನೋಡಿ.