ವಾರ್ತಾ ಮಂಜರಿ
Trending Stories, Viral News, Gossips & Everything in Kannada

Kantara: ಕಾಂತಾರ ಚಿತ್ರದಲ್ಲಿ ತೋರಿಸಿದ ಭೂತ ಕೋಲದ ಒರಿಜಿನಲ್ ವಿಡಿಯೋ ನೋಡಿ….

3,806

Kantara: ಸದ್ಯ ರಿಷಬ್ ಶೆಟ್ಟಿ ಯವರ ಕಾಂತಾರ ಸಿನಿಮಾ ಕನ್ನಡದಲ್ಲಿ ಈಗಾಗಲೇ ಮೋಡಿ ಮಾಡಿ ಬೇರೆ ಭಾಷೆಗಳಲ್ಲಿ ಮಿಂಚು ಹರಿಸಲು ತಯಾರಾಗಿದೆ. ಈಗಾಗಲೇ ಬಹುತೇಕ ಪಾಸಿಟಿವ್ ಪ್ರತಿಕ್ರಿಯೆ ಪಡೆದಿರುವ ಕಾಂತಾರ ಈಗಾಗಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದು IMDBಯಲ್ಲಿ ಕಾಂತಾರ ಅತಿ ಹೆಚ್ಚು ರೇಟ್ ಪಡೆದಿದೆ. ಅಕ್ಟೋಬರ್ 14 ರಂದು ಹಿಂದಿಯಲ್ಲಿ ಕಾಂತಾರ ರಿಲೀಸ್ ಆಗಿದ್ದು ಇದಕ್ಕೆ 9.6 ಪಾಯಿಂಟ್ಸ್ ಕೊಟ್ಟು ರೇಟಿಂಗ್ಸ್ ನೀಡಲಾಗಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ 2 ಚಿತ್ರಕ್ಕೆ 8.4 ಪಾಯಿಂಟ್ಸ್ ರೇಟಿಂಗ್ ನೀಡಲಾಗಿತ್ತು. ಎಸ್ ಎಸ್ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾಕ್ಕೆ 8 ಪಾಯಿಂಟ್ಸ್ ರೇಟಿಂಗ್ ನೀಡಲಾಗಿತ್ತು. ಇನ್ನು ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2500ಕ್ಕೂ ಅಧಿಕ ಸ್ಕೀನ್‌ಗಳಲ್ಲಿ ಕಾಂತಾರ ಚಿತ್ರದ ಹಿಂದಿ ವರ್ಷನ್ ಪ್ರದರ್ಶನವಾಗಲಿದೆ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಹೌಸ್ ಫುಲ್ ಆಗಿ ಪ್ರದರ್ಶನ ಆಗುವುದು ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗುವುದು ಕನಸಿನ ಮಾತಾಗಿರುತ್ತದೆ. ಆದರೆ ಕಾಂತಾರ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನ ಕಂಡಿದ್ದು ಜನರು ಟಿಕೆಟ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣ ಆಗಿರುವುದು ಸಂತೋಷದ ವಿಚಾರ. ಹೌದು ಕಾಂತಾರ ಸಿನಿಮಾ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯಿಂದ ಕೂಡಿದ್ದು ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ನಾವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಲಾಗಿದೆ. ಇನ್ನು ಈ ಕುರಿತು ಮಾತನಾಡಿದ ನಟ ನಿರ್ದೇಶಕ ಒಟ್ಟಿನಲ್ಲಿ ನಾವು ಈ ಸಿನಿಮಾ ಮಾಡಿದ್ದೇವೆ ಅನ್ನುವುದಕ್ಕಿಂತ ಆ ದೈವವೇ ನಮ್ಮಿಂದ ಈ ಸಿನಿಮಾ ಮಾಡಿಸಿದೆ ಎನ್ನುವುದೇ ಸೂಕ್ತ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ದೈವಾರಾಧನೆಯ ಕಥೆಯುಳ್ಳ ಸಿನಿಮಾ ನಾಟಕ ಇತ್ಯಾದಿ ಮಾಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಹೌದು ಸ್ವಲ್ಪ ದಾರಿ ತಪ್ಪಿದ್ದರೂ ಕೂಡ ಇಡೀ ಸಿನಿಮಾ ತಂಡ ಭಾರೀ ಟೀಕೆಗೆ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ‌. ಇನ್ನು ಕಾಂತಾರ ಸಿನಿಮಾವೂ ಕಾಡು ಪ್ರಕೃತಿ-ಮನುಷ್ಯ ಸಂಬಂಧ ಕರಾವಳಿಯ ದೈವಾರಾಧನೆಯ ಹಿನ್ನೆಲೆ ಇರುವ ಸಿನಿಮಾ ಆಗಿದ್ದು ದೈವಾರಾಧನೆಯ ವಿಚಾರದಲ್ಲಿ ಸಿನಿಮಾ ತಂಡಕ್ಕೆ ಸಲಹೆ ಸಹಕಾರ ನೀಡಿರುವ ದೈವ ನರ್ತಕ ಮುಖೇಶ್ ರವರು ಸಿನಿಮಾ ತಂಡದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

ಕಾಂತಾರ ಆತ್ಮಕ್ಕೆ ಮುಟ್ಟುವ ಕಥೆ ಆಗಿದ್ದು ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧಾ ಭಕ್ತಿಯಿಂದ ಮಾಡಿದೆ‌. ಹೌದು ಮದ್ಯ-ಮಾಂಸವನ್ನು ತ್ಯಜಿಸಿ ಈ ಸಿನಿಮಾ ಮಾಡಲಾಗಿದ್ದು ಅಲ್ಲದೆ ಕೋಲದ ಶೂಟಿಂಗ್ ನಡೆಯುವ ಸ್ಥಳದಲ್ಲಿ ಚಪ್ಪಲಿಯನ್ನು ಹಾಕದೆ ಎಲ್ಲರೂ ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಕಾಂತಾರ ಸಿನಿಮಾ ನಮ್ಮ ಸಂಸ್ಕೃತಿಯ ಸಿನಿಮಾ ಎಂದೇ ಹೇಳಲಾಗುತ್ತಿದ್ದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ದೇಶ ವಿದೇಶದಲ್ಲಿಯೂ ಕೂಡ ಸೆನ್ಸೇಷನ್ ಮೂಡಿಸುತ್ತಿದೆ.

ಇನ್ನು ಕಾಂತರ ಸಿನಿಮಾ ನೋಡಿದ ಬಳಿಕ ಅನೇಕರಿಗೆ ಕೋಲ ಹೇಗೆ ನಡೆಯುತ್ತದೆ ಎಂಬ ಕುತೂಹಲ ಮನೆ ಮಾಡಿರುತ್ತದೆ. ಸದ್ಯ ಇದೀಗ ತುಳುನಾಡಿನಲ್ಲಿ ನಡೆಯುವಂತಹ ದೈವಾರಾಧನೆಯ ಅಸಲಿ ವಿಡಿಯೋ ಒಂದು ವೈರಲ್ ಆಗಿದ್ದು ನಿಜವಾಗಿಯೂ ದೈವಾರಾಧನೆ ಅಥವಾ ಕೋಲ ಎಂಬುದು ಹೇಗೆ ನಡೆಯುತ್ತದೆ ಎಂಬ ಕುತೂಹಲ ನಿಮಗಿದ್ದರೆ ಕೆಳಗಿನ ವಿಡಿಯೋ ನೋಡಿ ಹಾಗೂ ಈ ವಿಡಿಯೋ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.