ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವೈಷ್ಣವಿ ಗೌಡ ಬೆಲ್ಲಿ ಡ್ಯಾನ್ಸ್ ವೈರಲ್ …ಚಿಂದಿ ವಿಡಿಯೋ ನೋಡಿ

512
ಸಾಮಾಜಿಕ ಜಾಲತಾಣದಲ್ಲಿ ಈ  ರೀಲ್ಸ್  ಎಂಬುದು ಬಂದ ನಂತರ ಸಾಮಾನ್ಯ ಜನರಿಗೆ ಮಾತ್ರ ಅಲ್ಲ ಸಿನಿಮಾ ಸ್ಟಾರ್ ಗಳು ಸಹ  ಅದಕ್ಕೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ.  ಯಾವುದಾದರೊಂದು ಹಾಡಿಗೆ ಡ್ಯಾನ್ಸ್ ಮಾಡಿ ಅಥವಾ ಸಿನಿಮಾ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ.  ಇನ್ನು ಸಿನಿಮಾ ನಟಿಯರು ಕೂಡ ಭಿನ್ನ ಭಿನ್ನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡುತ್ತಿದ್ದು ಅದರಲ್ಲೂ ನಮ್ಮ‌ ವೈಷ್ಣವಿ ಗೌಡ ಅಪ್ಲೋಡ್ ಮಾಡುವ ವಿಡಿಯೋ ಗಳು ತುಂಬಾನೇ ಸ್ಪೆಷಲ್ ಆಗಿರುತ್ತದೆ. ಹೌದು ಯಾಕಂದರೆ ಅವರು ಯಾವಾಗಲೂ ಡ್ಯಾನ್ಸ್ ವಿಡಿಯೋ ಗಳನ್ನೇ ಹಾಕುತ್ತಿರುತ್ತಾರೆ.
ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ಜನ‌ಮನ್ನಣೆ ಗಳಿಸಿದ್ದ ವೈಷ್ಣವಿ ಗೌಡ ಗುಳಿ ಕೆನ್ನೆ ಸುಂದರಿ. ಇವರು ಬಣ್ಣದ ಲೋಕಕ್ಕೆ ಬಂದಿದ್ದು ಆಕಸ್ಮಿಕವಾಗಿದ್ದು ಒಂದು‌‌ ಬಾರಿ‌ ತನ್ನ ತಾಯಿ ಜೊತೆ ಮನೆ ಹತ್ತಿರದ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಸಹಾಯಕ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದರು.‌ ಹೌದು ಅವರು ಈ ಹಿಂದೆ ಪ್ರಸಾರ ಆಗುತ್ತಿದ್ದ ದೇವಿ ಧಾರವಾಹಿಯ ನಿರ್ದೇಶಕರಾಗಿದ್ದು ವೈಷ್ಣವಿ ಅವರನ್ನು ನೋಡಿದ ಅವರು ತಮ್ಮ‌ ಸೀರಿಯಲ್ ಗೆ ಅಲ್ಲಿಯೇ ಆಫರ್ ಕೊಟ್ಟಿದ್ದರು.
ಅವರು ನೀಡಿದ ಆಫರ್ ಒಪ್ಪಿಕೊಂಡ ವೈಷ್ಣವಿ ಯವರು ಅಲ್ಲಿಂದ ತಮ್ಮ ಬಣ್ಣದ ಲೋಕದ ಜರ್ನಿ‌ ಆರಂಭಿಸಿದ್ದು  ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಇವರು ತಮ್ಮ ನಟನೆಗಾಗಿ ಪದವಿಯನ್ನು ಅರ್ಧಕ್ಕೇ ಬಿಟ್ಟಿದ್ದು ತದನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ವ್ಯಾಸಾಂಗ ಮುಗಿಸಿದ್ದು  ಇನ್ನು ಇವರು ದೇವಿ ಧಾರವಾಹಿಯಲ್ಲಿ ನಟಿಸಿದ್ದರೂ ಕೂಡ ಫೇಮಸ್ ಆಗಿದ್ದು ಜನಮನ್ನಣೆ ಗಳಿಸಿದ್ದು ಮಾತ್ರ ಕಲರ್ಸ್ ಕನ್ನಡದ ಅಗ್ನಿ ಸಾಕ್ಷಿ ಧಾರವಾಹಿ ಮೂಲಕ.
ಹೌದು ಅದರಲ್ಲಿ ಸನ್ನಿಧಿ ಪಾತ್ರ ಅಭಿಮಾನಿಗಳ ಮನದಲ್ಲಿ ಸನ್ನಧಿಯಾಗಿಯೇ ಉಳಿದುಕೊಂಡಿದ್ದು ಅದಾದ ನಂತರ ಇವರುಗಿರಿಗಿಟ್ಲೆ ಮೂಲಕ ನಾಯಕಿಯಾಗಿ ಚಂದನವನವನ್ನೂ ಪ್ರವೇಶಿಸಿದ್ದಾರೆ.‌ ಹೌದು ಅಷ್ಟೇ ಅಲ್ಲ‌ ಬಿಗ್ ಬಾಸ್ ಸ್ಪರ್ಧಿಯಾಗಿ ಭಾಗವಹಿಸಿ ವೈಯುಕ್ತಿಕವಾಗಿ ತಾನು ಹೇಗೆ ಅನ್ನುವುದನ್ನು ಜನರಿಗೆ ತೋರಿಸಿದ್ದು ನೋಡಲು ಮುದ್ದು ಮುದ್ದಾಗಿರುವ ವೈಷ್ಣವಿ ಗೌಡ ಅವರ ವ್ಯಕ್ತಿತ್ವ ಕೂಡ ಅಷ್ಟೆ ಮುದ್ದಾಗಿದೆ ಅನ್ನುವುದು ಗೊತ್ತಾಗಿದ್ದೇ ಬಿಗ್ ಬಾಸ್ ನಿಂದಾಗಿ.
ಮೊದಮೊದಲು ಏನೂ ತಿಳಿಯದವರಂತೆ ಇದ್ದ ವೈಷ್ಣವಿ ನಂತರ ಟಾಸ್ಕ್ ಗಳಲ್ಲಿ ತನ್ನನ್ನು ತಾನು ನಿರೂಪಿಸಿಕೊಂಡಿದ್ದು ಅಷ್ಟೇ ಅಲ್ಲದೇ ಅಲ್ಲಿ ಅವರ ನಡತೆ ಕಾಮೆಡಿ ಧ್ಯಾನ ಯೋಗ ಡ್ರೆಸ್ಸಿಂಗ್ ಸ್ಟೈಲ್ ಈ ಎಲ್ಲವೂ ಫೇಮಸ್ ಆಗಿ ಕೊನೆಯ ನಾಲ್ಕನೇ ಸ್ಪರ್ಧಿಯಾಗಿ ಹೊರಬಂದಿದ್ದು ಇನ್ನು ಭರತನಾಟ್ಯಂ ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ . ಕುಣಿಯೋಣ ಬಾರ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು. ಹೌದು ಜೊತೆಗೆ ನಿರೂಪಣೆಗೂ ಸೈ ಅನ್ನುವಂತೆ ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದು ಇನ್ನು ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕತ್ ಆಕ್ಟೀವ್ ಆಗಿದ್ದಾರೆ.
ಹೌದು ಯಾವಾಗಲೂ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿರುವ ವೈಷವಿ ಅವರು ಟ್ರೆಂಡಿ ಹಾಡುಗಳಿಗೆ ಸ್ಟೆಪ್ ಹಾಕುತ್ತಿರುತ್ತಾರೆ‌. ಹೌದು ಈ ಬಾರಿ ವಿಕ್ರಾಂತ್ ರೋಣಾ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಿದ ಜ್ಯಾಕ್ಲೀನ್ ಫರ್ನಾಂಡೀಸ್ ಅವರ ಹಾಡಿಗೆ ಅಂದರೆ ಎಕ್ಕ ಸಕ್ಕ ಹಾಡಿಗೆ ಕಪ್ಪು ಬಣ್ಣದ ಡ್ರೆಸ್ ತೊಟ್ಟ ವೈಷ್ಣವಿ ಗೌಡ ಕ್ಯೂಟ್ ಸ್ಟೆಪ್ ಹಾಕಿದ್ದರು  ಈ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ಇದೀಗ ಮತ್ತೊಂದು ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಡ್ಡಿಪುಡಿ ಸಿನಿಮಾದ ಸೌಂದರ್ಯ ಸಮರ ಎಂಬ ರೊಮ್ಯಾಂಟಿಕ್ ಹಾಡಿಗೆ ವೈಷ್ಣವಿ ಗೌಡ ಯಾವ ರೀತಿ  ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ ನೀವೆ ನೋಡಿ.