ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಥಾರ್ ಗೆ ಸೆಡ್ಡು ಹೊಡೆಯಲು ಬರುತ್ತಿದೆ ಮಾರುತಿ ಸುಝುಕಿಯ ಹೊಸ ಕಾರು

257

ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಸುಜುಕಿ ಜಿಮ್ನಿ ಮಿನಿ-ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಆಫ್-ರೋಡರ್ ಮಿನಿ-ಎಸ್‍ಯುವಿಯು 2018ರಲ್ಲಿ ಬಿಡುಗಡೆಗೊಳಿಸಿದ್ದರು.

ಭಾರತದಲ್ಲಿ ಜಿಮ್ನಿ ಎಸ್‌ಯುವಿ ಬಿಡುಗಡೆಗೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ.ಇಂಡೋ-ಜಪಾನೀಸ್ ವಾಹನ ತಯಾರಕರಾದ ಮಾರುತಿ ಸುಜುಕಿ ಬೆಲೆ, ಎಸ್‍ಯುವಿಯ ನಿರ್ದಿಷ್ಟತೆ ಮತ್ತು ಬಿಡುಗಡೆ ದಿನಾಂಕದಂತಹ ನಿರ್ಣಾಯಕ ಅಂಶಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ.ಸುಜುಕಿ ಜಿಮ್ನಿ ಕಾಂಪ್ಯಾಕ್ಟ್ ಎಸ್‍ಯುವಿ ಆಗಿದ್ದರು ಸುಜುಕಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯಾಗಿದ್ದು, ಇದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇತರ ಕಾಂಪ್ಯಾಕ್ಟ್ ಎಸ್‍ಯುವಿಗಳಿಗಿಂತ ಸ್ವಲ್ಪ ಕಡಿಮೆ ಪ್ರಾಯೋಗಿಕ ಮತ್ತು ಹೆಚ್ಚು ಉದ್ದೇಶಿತವಾಗಿದೆ.

5 ಡೋರಿನ ಮಾರುತಿ ಜಿಮ್ನಿ ಅದರ 3-ಡೋರಿನ ಆವೃತ್ತಿಗಿಂತ 300 ಎಂಎಂ ಉದ್ದವಾಗಿರುತ್ತದೆ. ಇದರ ವ್ಹೀಲ್‌ಬೇಸ್ ಕೂಡ 300 ಎಂಎಂ ವಿಸ್ತರಿಸಲಿದೆ. ಆಫ್-ರೋಡ್ ಎಸ್‍ಯುವಿ 3850 ಎಂಎಂ ಉದ್ದ, 1645 ಎಂಎಂ ಅಗಲ ಮತ್ತು 1730 ಎಂಎಂ ಎತ್ತರವನ್ನು 2550mm ವ್ಹೀಲ್‌ಬೇಸ್‌ನೊಂದಿಗೆ ಹೊಂದಿದೆ.ಈ ಜಿಮ್ನಿ ಮಾದರಿಯು ಈ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಪಡೆಯಬಹುದು; ಆದೆರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ 3-ಡೋರಿನ ಅಥವಾ 5-ಡೋರ್ ಜಿಮ್ನಿಯನ್ನು ಬಿಡುಗಡೆಗೊಳಿಸಬಹುದು..

ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ನೊಂದಿಗೆ ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ. ಈ ಸುಜುಕಿ ಜಿಮ್ನಿ ಎಸ್‍ಯುವಿಯು ಯುರೋಪಿಯನ್ ದೇಶಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ, ಅಲ್ಲದೇ ಸುಜುಕಿ ಜಿಮ್ನಿ ತವರು ಜಪಾನ್ ನಲ್ಲಿಯು ಬೇಡಿಕೆ ಹೆಚ್ಚಾಗಿದೆ. ಸುಜುಕಿ ಕಂಪನಿಯ ಜಪಾನ್ ನಲ್ಲಿರುವ ಕೊಸೈನ ಘಟಕದಲ್ಲಿ ಉತ್ಪಾದನೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿದೆ.ಆದರೂ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಐಕಾನಿಕ್ ಆಪ್-ರೋಡರ್ ಜಿಮ್ನಿ ಬೇಡಿಕೆಯು ಅಷ್ಟರ ಪ್ರಮಾಣಕ್ಕೆ ಇದೆ.

ಭಾರತದಲ್ಲಿ ಆಫ್-ರೋಡ್ ವಾಹನ ಎಂದು ಹೇಳಿದಾಗ ಮೊದಲು ಯೋಚನೆಗೆ ಬರುವುದು ಮಹೀಂದ್ರಾ ಥಾರ್ ಎಂದು ಹೇಳಬಹುದು. ಆದರೆ ಅದೇ ರೀತಿ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಭಾರತದಲ್ಲಿ ಒಂದು ವೇಳೆ ಬಿಡುಗಡೆಗೊಂಡರೆ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿಯಾಗಲಿದೆ. ಇನ್ನು ಈ ಬಹುನಿರೀಕ್ಷಿತ ಸುಜುಕಿ 5-ಡೋರ್ ಜಿಮ್ನಿ ಮಿನಿ ಎಸ್‍‍ಯುವಿಯು 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಬಹುದು.