ಇತ್ತೀಚೆಗಷ್ಟೇ ಡಾ. ರಾಜ್ ಅವರ ಒಂಭತ್ತು ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು ಹಾಡು ಕಿರುತೆರೆಯಲ್ಲಿ ಸಾಕಷ್ಟು ಸುದ್ದಿಮಾಡುತ್ತಿದೆ. ಯಾಕೆಂದರೆ ಬಿಗ್ ಬಾಸ್ ಸೀಸನ್ 9 ಒಂಭತ್ತಕ್ಕೆ ಈ ಹಾಡು ಬರ್ಜರಿ ಹಿಟ್ ಪಡೆದಿದೆ. ಕಲರ್ಸ್ ಕನ್ನಡ ವಾಹಿನಿ ಯಾವಾಗಲೂ ಜನರಿಗೆ ಮನರಂಜನೆ ನೀಡುವಲ್ಲಿ ಮುಂದಿರುತ್ತೆ. ಅದು ಧಾರಾವಾಹಿ ಇರಬಹುದು, ರಿಯಾಲಿಟಿ ಶೋ ಇರಬಹುದು. ಈಗ ಬಿಗ್ ಬಾಸ್ ಸೀಸನ್ 9 ಬರ್ತಿದೆ. ಬಿಗ್ ಬಾಸ್ ಕನ್ನಡ ಶೋಗೆ ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ.
ಈ ಬಾರಿ ಓಟಿಟಿಯಲ್ಲಿ ಬಿಗ್ ಬಾಸ್ ಬರ್ತಿದೆ. ಆದ್ರೂ ಜನ ಟಿವಿಯಲ್ಲಿ ನೋಡಲು ಕಾಯ್ತಾ ಇದ್ದಾರೆ. ಆ ದಿನಗಳ ಬಂದೇ ಬಿಟ್ಟಿವೆ. ಟಿವಿಯಲ್ಲಿ ಶುರುವಾಗ್ತಿದೆ ಬಿಗ್ ಬಾಸ್ ಸೀಸನ್ 9.ದಿನದ 24 ಗಂಟೆ ಈ ಶೋ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಈಗ ಬಿಗ್ ಬಾಸ್ ಟಿವಿ ಸೀಸನ್ ಆರಂಭ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ ಯಾವಾಗ ಎಂಬ ಬಗ್ಗೆ ಘೋಷಣೆ ಆಗಿದೆ. ಇದರ ಜತೆಗೆ ಒಟಿಟಿ ಮಂದಿಗೆ ಸರ್ಪ್ರೈಸ್ ಒಂದು ಸಿಕ್ಕಿದೆ. ಪ್ರೋಮೋದಲ್ಲಿ ಈ ವಿಚಾರ ಸ್ಪಷ್ಟವಾಗಿದೆ.
ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕೆಲ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಅವರು ಆಮೇಲೆ ಟಿವಿ ಶೋಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿ ಪರದೆಯಲ್ಲಿ ಬರಲು ಈಗಾಗಲೇ ದಿನಗಣನೆ ಶುರುವಾಗಿದೆ. ಹೊಸಬರ ಜೊತೆ ಹಳಬರು ಬರಲಿದ್ದಾರಂತೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪ್ರೋಮೊ ಒಂದನ್ನು ಬಿಡಲಾಗಿದ್ದು ಅದರಲ್ಲಿ ಅನುಪಮಾ, ದೀಪಿಕಾ ಹಾಗೂ ಪ್ರಶಾಂತ್ ಸಂಬರ್ಗಿ ಕಾಣಿಸಿಕೊಂಡಿದ್ದಾರೆ. ಅನುಪಮ ಮೆಲ್ಲ ಧ್ವನಿಯಲ್ಲಿ ಮಾತನಾಡಿದಾಗ ಬಿಗ್ ಬಾಸ್ ಧ್ವನಿ ಬಂದು ಅವರಿಗೆ ಪಿಸುಧ್ವನಿಯಲ್ಲಿ ಮಾತನಾಡದಂತೆ ಎಚ್ಚರಿಕೆ ನೀಡಿದರು.
ಅನುಪಮಾ ಗೌಡ ಸಹ ಬಿಗ್ ಬಾಸ್ ಸೀಸನ್ 9 ಗೆ ಬರಬಹುದು. ನಾಗಿಣಿ ಸೀರಿಯಲ್ ಖ್ಯಾತಿಯ ದೀಪಿಕಾ ದಾಸ್ ಅಡುಗೆ ಮಾಡುವಾಗ ನೀವು ಮೈಕ್ ಧರಿಸಿಲ್ಲ ಎಂದು ಬಿಗ್ ಬಾಸ್ ಧ್ವನಿ ಬಂದಿದೆ. ಅವರು ಸಹ ಈ ಬಾರಿಯ ಬಿಗ್ ಬಾಸ್ ಸೀಸನ್ 9 ಗೆ ಬರಬಹುದು.ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅವರು ಆಫೀಸ್ ಕೆಲಸ ಮಾಡುವಾಗ ಮಲಗುತ್ತಾರೆ ಆಗ ಎದ್ದೇಳು ಮಂಜುನಾಥ ಹಾಡು ಕೇಳ ಸಿಗುತ್ತದೆ.
ಇವರು ಕಳೆದ ಸೀಸನ್ನಲ್ಲಿ ಇದ್ರು. ಅವರು ಸಹ ಈ ಬಾರಿಯ ಬಿಗ್ ಬಾಸ್ ಸೀಸನ್ 9 ಗೆ ಬರಬಹುದು. ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಸಹ ಕಳೆದ ಸೀಸನ್ನಲ್ಲಿ ಇದ್ರು. ಅವರು ಸಹ ಈ ಬಾರಿಯ ಬಿಗ್ ಬಾಸ್ ಸೀಸನ್ 9 ಗೆ ಬರಬಹುದು.ವಾಹಿನಿಯ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಖಡಕ್ ಆಗಿ ಕಾಣುತ್ತಿದ್ದಾರೆ.ಸೆಪ್ಟೆಂಬರ್ 24ಕ್ಕೆ ಬಿಸ್ ಬಾಸ್ 9 ಗ್ರ್ಯಾಂಡ್ ಪ್ರೀಮಿಯರ್ ಇದೆ. ಖಡಕ್ ಲುಕ್ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಶೋ ದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.