ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶ್ರೀ ಲೀಲಾ ತಾಯಿಯ ಮೇಲೆ ಕೇಸು ದಾಖಲು …ನಿಜಕ್ಕೂ ಆಗಿದ್ದೆ ಬೇರೆ ನೋಡಿ ಅಸಲಿ ಮುಖ

97

ಬೆಂಗಳೂರಿನ ಆನೇಕಲ್ ನಲ್ಲಿರುವ ಅಲಯನ್ಸ್ ಯೂನಿವರ್ಸಿಟಿ ವಿಚಾರದ ಕುರಿತಾಗಿ ನಟಿ ಶ್ರೀಲೀಲಾ ತಾಯಿ ಇದೀಗ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿದ್ದಾರೆ. ವೃತ್ತಿಯಲ್ಲಿ ಸ್ತ್ರೀರೋಗ ತಜ್ಞೆಯಾಗಿರುವ ಶ್ರೀಲೀಲಾ ತಾಯಿ ಸ್ವರ್ಣಲತಾ ಬೌನ್ಸರ್ಸ್ ಹಾಗೂ ಮಾರಕಾಸ್ತ್ರಗಳೊಂದಿಗೆ ಅಲಯನ್ಸ್ ವಿಶ್ವವಿದ್ಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಸ್ಯಾಂಡಲ್​ವುಡ್ ಖ್ಯಾತ ನಟಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಎಫ್​ಐಆರ್ ದಾಖಲಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವಿವಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದ್ದು ವಿವಿಗೆ ನುಗ್ಗಿ ಗಲಾಟೆ, ರಂಪಾಟ ಮಾಡಿದ್ದಾರೆ. ಗಲಾಟೆಗೆ ತಂದಿದ್ದ ಮಾ  ರ   ಕಾಸ್ತ್ರಗಳೂ ಪತ್ತೆಯಾಗಿವೆ. ಅಲಯನ್ಸ್ ಯೂನಿವರ್ಸಿಟಿ ಬಳಿ ಮತ್ತೆ ಹೈಡ್ರಾಮ ನಡೆದಿದ್ದು ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಯೂನಿವರ್ಸಿಟಿ ಬಳಿ ಈ ಬೆಳವಣಿಗೆಗಳು ನಡೆದಿವೆ. ‌

ಶ್ರೀಲೀಲಾ ತಾಯಿ ಸ್ವರ್ಣಲತಾ ಮಧುಕರ್ ಅಂಗೂರ್ ಎಂಬುವವರ ಜತೆ ವಿಶ್ವವಿದ್ಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಸಿಬ್ಬಂದಿಗೆ ಈ ಕಾಲೇಜಿನ ಮುಂದಿನ ಚಾನ್ಸಲರ್ ನಾವೇ ಎಂದು ಗದರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಸ್ವರ್ಣಲತಾ ಕಾಲೇಜಿನ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿರುವ ವಿಡಿಯೋ ಲಭ್ಯವಾಗಿದೆ. ತನ್ನ ಸುತ್ತ ಅನೇಕ ಮಂದಿ ಮೊಬೈಲ್ ಮತ್ತು ಕ್ಯಾಮೆರಾ ಮೂಲಕ ವಿಡಿಯೋ ಸೆರೆ ಹಿಡಿಯುತ್ತಿದ್ದರು ಸಹ ಲೆಕ್ಕಿಸದ ಸ್ವರ್ಣಲತಾ ರಾಜಾರೋಷವಾಗಿ ಕಾಲೇಜು ಆವರಣದೊಳಗೆ ಓಡಾಡಿದ್ದಾರೆ. ಸ್ವರ್ಣಲತಾ, ವಿವಿ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಸಮೀಪದಲ್ಲೇ ಇದ್ದವರು ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಸ್ವರ್ಣಲತಾ, ಅವರ ನಡವಳಿಕೆ ನೋಡಿ ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಶ್ರೀಲೀಲಾ ತಾಯಿ ಸ್ವರ್ಣಲತಾ ಕಾಲೇಜಿನ ಆವರಣದಲ್ಲಿ ಯಾರದ್ದೋ ಜೊತೆ ಫೋನಿನಲ್ಲಿ ಸಂಭಾಷಣೆ ನಡೆಸುತ್ತಾ ಬರುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ಸಂದರ್ಭದಲ್ಲಿ ಸಿಬ್ಬಂದಿಯೋರ್ವರು ಸ್ವರ್ಣಲತಾ ಅವರ ಮೊಬೈಲ್ ಕಸಿದುಕೊಳ್ಳುವ ಯತ್ನ ಮಾಡಿದ್ದಾರೆ. ಇದೇ ವೇಳೆಯಲ್ಲಿ ಸಿಟ್ಟಿಗೆದ್ದ ಸ್ವರ್ಣಲತಾ ಆ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಹಾಗೂ ಆಕೆ ನನ್ನ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದಳು ಎಂದು ಕರೆ ಮಾಡಿದ್ದ ವ್ಯಕ್ತಿ ಜತೆ ಸ್ವರ್ಣಲತಾ ಹೇಳಿರುವ ಆಡಿಯೋ ಕೂಡ ಇಲ್ಲಿ ರೆಕಾರ್ಡ್ ಆಗಿದೆ.

ಕಾಲೇಜಿನ ಸಿಬ್ಬಂದಿಯೊಬ್ಬರು ಸ್ವರ್ಣಲತಾ, ಮಧು ಅಂಗೂರ್ ಸೇರಿದಂತೆ ಇನ್ನೂ 7 ಮಂದಿ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಶೋಧ ಕಾರ್ಯದಲ್ಲಿದ್ದಾರೆ. ಬೆಂಗಳೂರಿನ ಆನೇಕಲ್ನ ಅಲಯನ್ಸ್ ವಿಶ್ವವಿದ್ಯಾಲಯದ ಒಡೆತನಕ್ಕೆ ಸಂಬಂಧಿಸಿದಂತೆ ಕಾಲೇಜಿಗೆ ಅತಿಕ್ರಮಣ ಪ್ರವೇಶ ಮಾಡಿದ್ದೂ ಅಲ್ಲದೆ, ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಶ್ರೀಲೀಲಾ ತಾಯಿ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಸ್ವರ್ಣಲತಾ, ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಸ್ವರ್ಣಲತಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿದ್ದಾರೆ. ವಿವಿ ಒಡೆತನಕ್ಕೆ ಸಂಬಂಧಿಸಿದಂತೆ ಕಲಹ ಮುಂದುವರಿದಿದೆ. ಸದ್ಯ ಕೇವಲ ಅತಿಕ್ರಮ ಪ್ರವೇಶ ಮಾಡಿರುವುದಲ್ಲದೇ ಅಲ್ಲಿನ ಸಿಬ್ಬಂದಿ ಮೇಲೆ ಕೈ ಮಾಡಿರುವ ಸ್ವರ್ಣಲತಾ ಸ್ಥಿತಿ ಮುಂದೇನಾಗಲಿದೆಯೋ ಕಾದು ನೋಡಬೇಕಿದೆ.