ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಿಷಬ್ ಬಳಿ ಬಂದ ದೈವ ಮಾಡಿದ್ದೆ ಬೇರೆ…ನೋಡಿ ವಿಡಿಯೋ

2,658
Join WhatsApp
Google News
Join Telegram
Join Instagram

ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ(Kantara) ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ (Rishab Shetty) ಮತ್ತು ಇಡೀ ತಂಡ (Team) ದೈವಗೆ ಹರಕೆ ತೀರಿಸಿದೆ. ಹೌದು ಕಾಂತಾರ ತಂಡ ಹರಕೆ ತೀರಿಸಿದ ಸಂಪೂರ್ಣ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಇನ್ನು ಕಾಂತಾರ ರಿಷಬ್ ಶೆಟ್ಟಿಗೆ ದೊಡ್ಡ ಸಕ್ಸಸ್ ತಂದುಕೊಟ್ಟ ಸಿನಿಮಾವಾಗಿದ್ದು ದೈವ ಭೂತಕೋಲ ಕರಾವಳಿ (Karavali) ಭಾಗದ ಆಚಾರ ಹಾಗೂ ವಿಚಾರಗಳ ಬಗ್ಗೆ ಜಗತ್ತಿಗೆ ಸಾರಿದ ಸಿನಿಮಾವಾಗಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್(Success) ಆಗಿದ್ದು ಇನ್ನು ಈ ಸಕ್ಸಸ್‌ಗೆ ಕಾರಣ ದೈವ ಎನ್ನುವುದು ಸಿನಿಮಾ ತಂಡದ ಸಂಪೂರ್ಣ ನಂಬಿಕೆಯಾಗಿದೆ.ಇನ್ನು ಕಾಂತಾರ ಸೂಪರ್ ಸಕ್ಸಸ್ ಬಳಿಕ ಚಿತ್ರತಂಡ ಹರಕೆ ತೀರಿಸಿದ್ದು ಹರಿಕೆ ಸಂಧರ್ಭದಲ್ಲಿ ಇಡೀ ಕಾಂತಾರ ತಂಡ ಭಾಗಿಯಾಗಿತ್ತು. ಮಂಗಳೂರಿನಲ್ಲಿ (Manglore) ನಡೆದ ಭೂತಕೋಲದಲ್ಲಿ ಚಿತ್ರತಂಡ ಭಾಗಿಯಾಗಿ ವಿಶೇಷ ಹರಕೆ ತೀರಿಸಿದೆ.

ಹೌದು ಕೋಲದಲ್ಲೀ ಇಡೀ ಕಾಂತಾರ ಸಿನಿಮಾ ತಂಡದವರಾದ ನಿರ್ಮಾಪಕ ವಿಜಯ್ ಕಿರಂಗದೂರು(Vijay Kirangadur) ಕಾರ್ತಿಕ್ ಗೌಡ (Karthik Gowda) ರಿಷಬ್ ಶೆಟ್ಟಿ(Rishab Shetty)ಪ್ರಗತಿ ಶೆಟ್ಟಿ (Pragari Shetty) ಸಪ್ತಮಿ ಗೌಡ(Saptami Gowda) ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು. ಇನ್ನು ದೈವ ನರ್ತಕ ಇಡೀ ತಂಡವನ್ನು ಅಪ್ಪಿಕೊಂಡ ದೃಶ್ಯ ರೋಮಾಂಚನಕಾರಿಯಾಗಿದೆ ಎಂದು ಅಭಿಮಾನಿಗಳು(Fans) ಹೇಳುತ್ತಿದ್ದಾರೆ.

ಇನ್ನು ಕಾಂತಾರ ಸಿನಿಮಾದಲ್ಲಿ ದೈವ ನರ್ತಕನಾಗಿ ರಿಷಬ್ ಶೆಟ್ಟಿ ಪೊಲೀಸ್ ಅಧಿಕಾರಿ (Police Officers) ಮತ್ತು ಊರಿನವರನ್ನು ಅಪ್ಪಿಕೊಂಡ ಹಾಗೆ ಹರಕೆ ತೀರಿಸುವ ವೇಳೆಯೂ ದೈವ ನರ್ತಕ ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡಿದೆ. ನಂತರ ಇಡೀ ತಂಡದವರನ್ನು ಅಪ್ಪಿಕೊಂಡಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.ಇನ್ನು ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ (Box Office) ಕೋಟಿ ಕೋಟಿ ಬಾಚಿಕೊಂಡಿದ್ದು ಸ್ಯಾಂಡಲ್ ವುಡ್(Sandalwood) ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಪರಭಾಷೆಯಲ್ಲೂ ಕೋಟಿ ಕೋಟಿ ಬಳಿಕೆ ಮಾಡಿದೆ.

ಇನ್ನು ಕಾಂತಾರ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡ ಸಿನಿಮಾವಾಗಿದ್ದು ಈ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದರು. ಹೌದು ಕಾಂತಾರ ಸಿನಿಮಾಗೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಕೂಡ ಹಾಡಿಹೊಗಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajanikantj) ಪ್ರಭಾಸ್ (Prabhas) ಕಮಲ್ ಹಾಸನ(Kamal Hassan) ಧನುಷ್ (Dhanush) ಕಾರ್ತಿ( Karthi) ಅನುಷ್ಕಾ ಶೆಟ್ಟಿ(Anushka Shetty) ಸೇರಿದಂತೆ ಬಹುತೇಕ ಕಲಾವಿದರು ಹಾಡಿಹೊಗಳಿದ್ದರು.

ಇನ್ನು ದಕ್ಷಿಣ ಭಾರತಸ ಸಿನಿಮಾರಂಗದ ಕಲಾವಿದರು ಮಾತ್ರವಲ್ಲದೇ ಬಾಲಿವುಡ್ ಮಂದಿ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕಂಗನಾ ರಣಾವತ್ವ(Kangana) ಹೃತಿಕ್ ರೋಷನ್(Hrithik Roshan) ಶಿಲ್ಪಾ ಶೆಟ್ಟಿ(Shilpa Shetty) ಸುನಿಲ್ ಶೆಟ್ಟಿ(Sunil Shetty) ಸೇರಿದಂತೆ ಅನೇಕರು ಕಾಂತಾರ ಸಿನಿಮಾಗೆ ಫಿದಾ ಆಗಿದ್ದರು. ಇನ್ನು ರಿಷಬ್ ಹರಿಕೆ ತೀರಿಸಿದ ಕ್ಷಣಗಳನ್ನ ಲೇಖನಿ ಕೆಳಗಿನ ವಿಡಿಯೋದಲ್ಲಿ ನೋಡಬಹುದು.