ಸದ್ಯ ಈ ಬೀದಿ ನಾಯಿಗಳಿಂದಾಗಿ (Street Dogs) ಅಪಘಾತದ (Accident) ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು ಇತ್ತೀಚೆಗೆ ಖಾಸಗಿ ಆಸ್ಪತ್ರೆ (Private Hospitals) ಮೂಲಗಳ ಪ್ರಕಾರ ಬೈಕ್ (Bike) ಸ್ಕೂಟರ್‌ಗೆ (Scooter) ನಾಯಿಗಳು ಅಡ್ಡ ಬಂದು ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ಹೌದು ಇದರಿಂದ ಕೈ ಕಾಲು (Hand & Legs) ಮುರಿದುಕೊಂಡು ಆಸ್ಪತ್ರೆ ಸೇರುವರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದ್ದು ಅದರಲ್ಲೂ ಮಣಿಪಾಲ(Manipal) ಉಡುಪಿ(Udupi) ನಗರದ ಸುತ್ತಮುತ್ತ ಈ ನಾಯಿಗಳ ಹಾವಳ ಜಾಸ್ತಿಯಾಗಿದೆ.
ಹೌದು ಮಣಿಪಾಲ ಆರ್‌ಎಸ್‌ಬಿ ಭವನ(RSB Bhavan) ಅಂಚೆ ಕಚೇರಿ (Post Office) ಕೆನರಾ ಬ್ಯಾಂಕ್ (Canara Bank) ವೃತ್ತ ಕಚೇರಿ ಪೊಲೀಸ್ ಠಾಣೆ (Police Station) ಪರ್ಕಳ ಪೇಟೆ (Parkala Pete) ಉಡುಪಿ ಸಿಟಿ (Udupi City) ಬಸ್ ನಿಲ್ದಾಣ (Bus Stand) ಬನ್ನಂಜೆ ಅಜ್ಜರಕಾಡು ಪಾರ್ಕ್ ಚಿಟಾಡಿ ಜಂಕ್ಷನ್ (Chutadi Junction) ಮಲ್ಪೆ ಜಂಕ್ಷನ್ ಬೀಚ್ (Malphe Junction Beech) ಸಮೀಪ ಬಂದರು ಕೂಡ ಬಳಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಇನ್ನು ನಗರ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಪ್ರತೀವರ್ಷ ಸಂತಾನಹರಣ ಚಿಕಿತ್ಸೆ ಹೆಸರಲ್ಲಿ ನಗರಸಭೆ ಲಕ್ಷಾಂತರ ರೂ ವ್ಯಯಿಸಲಾಗುತ್ತಿದ್ದರೂ ಬೀದಿನಾಯಿಗಳ ವಿಷಯದಲ್ಲಿ ಫಲಿತಾಂಶ ಉತ್ತಮವಾಗಿಲ್ಲ. ಹೌದು ನಗರ ಭಾಗದಲ್ಲಿ ಹೊಟೇಲ್ ಸಭಾಂಗಣಗಳ ಬಳಿ ಸಿಗುವ ಆಹಾರ ತ್ಯಾಜ್ಯವು ಬೀದಿನಾಯಿಗಳು ಗ್ರಾಮಾಂತರ ಭಾಗದಿಂದ ವಲಸೆ ಬರಲು ಕಾರಣ ಎನ್ನಲಾಗುತ್ತಿದೆ.ಬೈಕ್ ಸ್ಕೂಟರ್ ಚಾಲನೆ ಸಂದರ್ಭ ನಿಧಾನಗತಿಯ ವೇಗದಲ್ಲಿದ್ದರೂ ತಿರುವು ನೇರ ರಸ್ತೆಗಳಲ್ಲಿ ಒಮ್ಮೆಲೆ ಎರಗುವ ಬೀದಿ ನಾಯಿಗಳಿಂದ ತಬ್ಬಿಬ್ಟಾಗುವ ಸವಾರರು ಸ್ಕಿಡ್ ಆಗಿ ಬೀಳುತ್ತಾರೆ. ಬಹುತೇಕರಿಗೆ ಕೈ ಕಾಲು ಬೆನ್ನು ಭುಜಕ್ಕೆ ಹೆಚ್ಚಿನ ಪೆಟ್ಟುಗಳು ಸಂಭವಿಸುತ್ತಿವೆ.
ಇನ್ನು ಇತ್ತೀಚೆಗೆ ಖಾಸಗಿ ಆಸ್ಪತ್ರೆ ಗಳಲ್ಲಿ 35ರಿಂದ 50 ವರ್ಷದವರೆಗಿನ ವಯೋಮಾನದವರು ಇದರಿಂದ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡವರ ಸಂಖ್ಯೆ ಹೆಚ್ಚಿದೆ ಎಂದು ಕೆಲವು ಆಸ್ಪತ್ರೆ ಮೂಲಗಳು ತಿಳಿಸಿದ್ದು ಹೆಲ್ಮೆಟ್ ಧರಿಸದಿದ್ದಲ್ಲಿ ಗಂಭೀರ ಪರಿಣಾಮದ ಗಾಯಗಳೂ ಉಂಟಾಗಿವೆ. ಬೀದಿನಾಯಿಗಳು ಹೆಚ್ಚಿದ್ದು ಇದರಿಂದ ನಾಗರಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ.
ಹೌದು ನಗರದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ವ್ಯವಸ್ಥಿತವಾಗಿ ನಡೆಸಲು ಕ್ರಮ ತೆಗೆದುಕೊಂಡಿದ್ದೆವು. ಕೆಲವು ದಿನಗಳ ಹಿಂದೆ ಟೆಂಡರ್ ಪಡೆದವರು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಈಗ ಮತ್ತೂಮ್ಮೆ ಹೊಸ ಟೆಂಡರ್ ಕರೆಯಲಾಗಿದೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೀದಿನಾಯಿಂದ ಆದ ಲೈವ್ ಆಕ್ಸಿಡೆಂಟ್ ವಿಡಿಯೋ ಹರಿದಾಡುತ್ತಿದ್ದು ಬೈಕ್ ಸವಾರನ ಕಥೆ ಏನಾಗಿದೆ ನೀವೆ ನೋಡಿ.