ಸದ್ಯ ಅಂತರರಾಷ್ಟ್ರೀಯ ನಟನಾಗಿ (national star) ಮಿಂಚುತ್ತಿರುವ ಯಶ್ (Yash) ಹಾಸನದಲ್ಲಿರುವ (Hassan) ತಮ್ಮ ಮನೆಯಲ್ಲಿ ಅಪ್ಪ ಅಮ್ಮ ಮಡದಿ ಮಕ್ಕಳೊಂದಿಗೆ ಸಂಕ್ರಾಂತಿ(Sankranti) ಹಬ್ಬವನ್ನು ಆಚರಿಸಿದ್ದಾರೆ. ಅಲ್ಲದೇ ಕುಟುಂಬದೊಂದಿಗೆ ಕಳೆದ ಸಂತಸ ಕ್ಷಣಗಳನ್ನು ರಾಕಿ ಬಾಯ್ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.\
ಸ್ಯಾಂಡಲ್ವುಡ್ (Sandalwood) ನಟ ರಾಕಿಂಗ್ ಸ್ಟಾರ್ ಯಶ್ (Rocking star Yash) ತಮ್ಮ ಕುಟುಂಬದೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು ಕೆಜಿಎಫ್ (KGF) ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟ ಅಲಂಕರಿಸಿರುವ ಯಶ್ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಆಚಾರ ವಿಚಾರಗಳನ್ನು ಪಾಲಿಸಿಕೊಂಡೇ ಸಾಗುತ್ತಿದ್ದಾರೆ.ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಹಾಸನದಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬದ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಅಲ್ಲದೇ ಸಂತಸ ಕ್ಷಣಗಳನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಫೋಟೋದಲ್ಲಿ ಯಶ್ ತಮ್ಮ ತಂದೆ ತಾಯಿ ಪತ್ನಿ ರಾಧಿಕಾ (Radhika) ಮತ್ತು ಇಬ್ಬರು ಮಕ್ಕಳ ಜೊತೆಗೆ ಟ್ರಾಕ್ಟರ್ನಲ್ಲಿ ಪ್ರಯಾಣಿಸಿದ್ದಾರೆ. ವಿಶೇಷವೆಂದರೆ ಈ ಟ್ರಾಕ್ಟರ್ ಅನ್ನು ಯಶ್ ತಂದೆ ಚಲಾಯಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಮತ್ತೊಂದು ಫೋಟೋದಲ್ಲಿ ಯಶ್ ಅವರ ಪ್ರೀತಿಯ ಮಗಳು ಐರಾ(Ayra) ತನ್ನ ತಾತನಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು ಬೆಲ್ಲ ಹಂಚುತ್ತಿರುವುದನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಹೆಣ್ಣು ಮಕ್ಕಳು ಎಳ್ಳು ಬೀರುವುದು ವಿಶೇಷ. ಹೌದು ಸದ್ಯ ವರ್ಷದ ಮೊದಲ ಹಬ್ಬದಂದೇ ಐರಾ ಯಶ್ ರಾಧಿಕಾಗೆ ಎಳ್ಳು ಬೆಲ್ಲ ನೀಡುವ ಮೂಲಕ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಿದ್ದಾರೆ ಎಂದೇ ಹೇಳಬಹುದು.
ಇನ್ನೊಂದು ಪೋಟೋದಲ್ಲಿ ಐರಾ ಮತ್ತು ಯಥರ್ವ್ (Ayra & Yatharv) ಯಶ್ ತಾಯಿಯೊಂದಿಗೆ ಹಿಟ್ಟಿನಲ್ಲಿ ಆಟವಾಡುತ್ತಾ ಸಮಯ ಕಳೆಯುತ್ತಿರುವುದನ್ನು ಕಾಣಬಹುದು ಮತ್ತು ನಾಲ್ಕನೇ ಫೋಟೋದಲ್ಲಿ ಯಶ್ ತಂದೆ ತಾಯಿ ರಾಧಿಕಾ ಮತ್ತು ಯಶ್ ತಟ್ಟೆ ಹಿಡಿದು ಆರತಿ ಮಾಡಿದ್ದಾರೆ.ಇನ್ನು ಈ ಎಲ್ಲಾ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಈ ಸುಗ್ಗಿ ಹಬ್ಬವು ನಿಮಗೆ ಆರೋಗ್ಯ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಎಲ್ಲರಿಗೂ ಮಕರ ಸಂಕ್ರಾಂತಿ, ಪೊಂಗಲ್ ಉತ್ತರಾಯಣ ಮಾಘ ಬಿಹು ಹಬ್ಬದ ಶುಭಾಶಯಗಳು ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳುವ ಮೂಲಕ ಯಶ್ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
ಹೌದು ಎಷ್ಟೇ ದೊಡ್ಡ ಸ್ಟಾರ್ ಆದರೂ ಯಶ್ ತಾವೊಬ್ಬರು ಸರಳ ವ್ಯಕ್ತಿ ಎಂಬುವುದನ್ನು ಪದೇ ಪದೇ ಸಾಬೀತು ಪಡಿಸುತ್ತಿದ್ದು ಇದಕ್ಕೆ ಸಾಕ್ಷಿ ಹಳ್ಳಿಯಲ್ಲಿಂದು ಯಶ್ ಬಹಳ ಸರಳವಾಗಿ ಫ್ಯಾಮಿಲಿಯೊಂದಿಗೆ ಸುಗ್ಗಿ ಹಬ್ಬ ಆಚರಿಸಿದ್ದಾರೆ. ಇನ್ನು ಭಾರತಾದ್ಯಂತ ದೊಡ್ಡ ನಟರಾಗಿ ಯಶ್ ಮಿಂಚುತ್ತಿದ್ದರೂ ಕನ್ನಡ ಭಾಷೆ ಸಂಸ್ಕೃತಿ ಪರಂಪರೆ ಬಗ್ಗೆ ವಿಶೇಷ ಅಭಿಮಾನ ಹೊಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದ್ದು
ಇಷ್ಟಲ್ಲದೇ ಯಶ್ ಎಂದಿಗೂ ತಮ್ಮ ಫ್ಯಾಮಿಲಿಗೆ ಟೈಂ ಕೊಡುವುದನ್ನು ಮಿಸ್ ಮಾಡಿಲ್ಲ. ಹೌದು ತಮ್ಮ ಬ್ಯುಸಿ ಶೆಡ್ಯೂಲ್ಗಳ ನಡುವೆ ಫ್ಯಾಮಿಲಿಯೊಂದಿಗೆ ಡಿನ್ನರ್ ಔಟಿಂಗ್ ಟ್ರಿಪ್ ಹೀಗೆ ಹೊರಗೆ ಹೋಗುವ ಮೂಲಕ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ ಅಂತನೇ ಹೇಳಬಹುದು. ಕೆಳಗಿನ ವಿಡಿಯೋದಲ್ಲಿ ಯಶ್ ಕುಟುಂಬದ ಸಂಕ್ರಾಂತಿ ಹಬ್ಬದ ವಿಡಿಯೋ ನೋಡಬಹುದು.