ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹೆಂಡತಿಯನ್ನು ಹೊಗಳುತ್ತಿರುವ ಯಶ್….ನೋಡಿ ಕ್ಯೂಟ್ ವಿಡಿಯೋ

206

ಸ್ನೇಹದಿಂದ ಪ್ರೇಮಕ್ಕೆ ಹಾಗೂ ಪ್ರೇಮದಿಂದ ವಿವಾಹಕ್ಕೆ ಬದಲಾದ ಬಹುತೇಕ ಸಿನಿಮಾ ಜೋಡಿಗಳಲ್ಲಿ ಯಶ್ ಹಾಗೂ ರಾಧಿಕಾ ಕೂಡಾ ಇದ್ದಾರೆ. ಹೌದು ಮಂಡ್ಯದ ರಾಜಾಹುಲಿಯನ್ನು ತನ್ನ ಮೊಗ್ಗಿನ ಮನಸ್ಸಿನೊಳಗೆ ಬೀಳಿಸಿಕೊಂಡ ಚಂದನವನದ ಚೆಲುವೆ ರಾಧಿಕಾ.

ಇನ್ನು ಇಬ್ಬರೂ ಸಹ ಹೇಳಿ ಮಾಡಿಸಿದ ಜೋಡಿ ಎಂದು ಇಡೀ ಗಾಂಧಿನಗರ ಹಾರೈಸಿದೆ ಎನ್ನಬಹುದು. ಅಷ್ಟೇ ಏಕೆ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗ ಕೂಡ ಈ ಜೋಡಿಗೆ ಅಭಿಮಾನದ ಆಶೀರ್ವಾದ ಮಾಡಿದ್ದು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಇಬ್ಬರೂ ಕೂಡ ವಿವಾಹ ಬಂಧನಕ್ಕೆ ಒಳಗಾದರು. ಆದರೆ ವಿವಾಹಕ್ಕೂ ಮುಂಚಿನ ಇವರ ಲವ್ ಸ್ಟೋರಿ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ.

ಅದು 2004ರಲ್ಲಿ ನಡೆದ ಒಂದು ಸಂದರ್ಭ. ನಂದಗೋಕುಲ ಎಂಬ ಧಾರಾವಾಹಿ ಶೂಟಿಂಗ್ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ಯಶ್ ಹಾಗೂ ರಾಧಿಕಾ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಹೌದು ಇಬ್ಬರು ಸಹ ಒಂದೇ ಕ್ಯಾಬ್ ನಲ್ಲಿ ಪ್ರಯಾಣಿಸಬೇಕಾದ ಪ್ರಸಂಗ ಒದಗಿಬಂದಿದ್ದು ಆದರೆ ರಾಧಿಕಾ ಆ ಸಂದರ್ಭದಲ್ಲಿ ಯಶ್ ಜೊತೆ ಮಾತೇ ಆಡಿರಲಿಲ್ಲ. ಹೌದು ಇಬ್ಬರಿಗೂ ಸಹ ಯಾವುದೇ ಗೆಳೆತನ ಅಥವಾ ಸ್ನೇಹ ಈ ಸಂದರ್ಭದಲ್ಲಿ ಇರಲೂ ಇಲ್ಲ ಬಿಡಿ.

ಮೊದಮೊದಲು ನಂದಗೋಕುಲ ಧಾರವಾಹಿಯಲ್ಲಿ ಬೇರೊಬ್ಬ ವ್ಯಕ್ತಿ ಮತ್ತು ರಾಧಿಕಾ ಒಟ್ಟಾಗಿ ನಟಿಸುತ್ತಿದ್ದು ಆನಂತರದಲ್ಲಿ ಆ ವ್ಯಕ್ತಿಯ ಬದಲಿಗೆ ಯಶ್ ಪಾತ್ರವನ್ನು ನಿರ್ವಹಿಸಲು ಪ್ರಾರಂಭ ಮಾಡಿದರು. ಹೌದು ಇದೇ ರೀತಿ ಮೊಗ್ಗಿನ ಮನಸ್ಸು ಸಿನಿಮಾದಲ್ಲೂ ನಡೆಯಿತು ಎಂದು ಸ್ವತಃ ಯಶ್ ಅವರೇ ಮೆಲುಕು ಹಾಕುತ್ತಾರೆ. ಇನ್ನು ಕೆಲವು ವರ್ಷಗಳ ನಂತರ ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾ ಸಿನಿಮಾದಲ್ಲೂ ಸಹ ಬೇರೊಬ್ಬ ನಾಯಕಿಯ ಬದಲಿಗೆ ರಾಧಿಕಾರವರಿಗೆ ಚಾನ್ಸ್ ಸಿಕ್ಕಿತ್ತು. ಹೌದು ಹೀಗಾಗಿ ಇಬ್ಬರೂ ಪದೇ ಪದೇ ಭೇಟಿಯಾಗುವ ಸಂದರ್ಭಗಳನ್ನು ದೇವರೇ ಸೃಷ್ಟಿ ಮಾಡುತ್ತಿದ್ದ ಎನಿಸುತ್ತದೆ.

ಇನ್ನು ಹಲವು ವರ್ಷಗಳು ಇದೇ ರೀತಿ ನಡೆದುಕೊಂಡು ಬಂದಿತು. ಈ ಸಂದರ್ಭದಲ್ಲಿ ಇಬ್ಬರೂ ಸಹ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡರು. ಹೌದು
ಅರ್ಥ ಮಾಡಿಕೊಳ್ಳುವ ಹಾಗೆ ರಾಧಿಕಾ ಮಾಡಿದರು ಎಂದು ಯಶ್ ಹೇಳುತ್ತಾರೆ. ಸಿನಿಮಾ ಚಿತ್ರೋದ್ಯಮದಲ್ಲಿ ಯಶ್ ಅವರಿಗಿಂತ ಒಳ್ಳೆಯ ಸ್ನೇಹಿತರಿಲ್ಲ ಎಂಬ ಭಾವನೆ ರಾಧಿಕಾ ಅವರಲ್ಲೂ ಕೂಡ ಬರಲು ಪ್ರಾರಂಭವಾಯಿತು.

ಅದೇ ರೀತಿ ಕೆಲವು ವರ್ಷಗಳು ಕಳೆದ ನಂತರದಲ್ಲಿ 2000 ಇಸವಿಯ ಪ್ರೇಮಿಗಳ ದಿನಾಚರಣೆಯಂದು ಯಶ್ ರವರು ರಾಧಿಕಾ ಅವರಿಗೆ ಇಷ್ಟವಾದ ವಸ್ತುಗಳನ್ನು ಒಂದು ಬ್ಯಾಸ್ಕೆಟ್ ನಲ್ಲಿ ಹಾಕಿ ಪ್ಯಾಕ್ ಮಾಡಿ ಅದನ್ನು ಅವರ ಕಾರಿನ ಒಳಗಡೆ ಇಟ್ಟರು. ಹೌದು ಇದರ ಮೂಲಕವಾಗಿ ತಮ್ಮ ಪ್ರೀತಿಯ ನಿವೇದನೆಯನ್ನು ಯಶ್ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಫೋನ್ ಮೂಲಕ ಬಹಳಷ್ಟು ಬಾರಿ ಪ್ರೀತಿಯ ಬೇಡಿಕೆಯಿಟ್ಟಿದ್ದರೂ ಕೂಡ ರಾಧಿಕಾ ರವರು ಒಪ್ಪಿಕೊಳ್ಳಲು ಸುಮಾರು 6 ತಿಂಗಳುಗಳ ಕಾಲ ಸಮಯವಕಾಶ ತೆಗೆದುಕೊಂಡರಂತೆ.

ಇನ್ನು ಯಶ್ ಮತ್ತು ರಾಧಿಕಾ ಅತ್ಯುತ್ತಮ ಗೆಳೆಯರು ಎಂಬುದು ಎರಡು ಕುಟುಂಬದವರಿಗೆ ಚೆನ್ನಾಗಿ ಗೊತ್ತಿತ್ತು. ಇವರಿಬ್ಬರಿಗೂ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂದು ತಿಳಿದಿದ್ದರೂ ಸಹ ಇವರು ಪ್ರೀತಿ ಮಾಡುತ್ತಿದ್ದಾರೆ ಎಂಬ ವಿಷಯ ಮಾತ್ರ ಗೊತ್ತಿರಲಿಲ್ಲ.

ವರಮಹಾಲಕ್ಷ್ಮಿ ಹಬ್ಬದಂದು ಯಶ್ ರವರು ರಾಧಿಕಾರನ್ನು ತಮ್ಮ ಕುಟುಂಬಸ್ಥರಿಗೆ ಪರಿಚಯ ಮಾಡಿಕೊಡಲು ಮನೆಗೆ ಕರೆದುಕೊಂಡು ಹೋದರು ಹಾಗೂ ಆ ಸಂದರ್ಭದಲ್ಲಿ ತಾವು ರಾಧಿಕಾರನ್ನು ಇಷ್ಟಪಡುತ್ತಿರುವುದಾಗಿ ತಿಳಿಸಿದರು. ಡಿಸೆಂಬರ್ 9 2016 ಇಸವಿಯಲ್ಲಿ ಇವರಿಬ್ಬರ ಮದುವೆ ಆಯಿತು. ಸದ್ಯ ಇದೀಗ ಯಶ್ ರಾಧಿಕಾ ಬಗ್ಗೆ ಏನು ಹೇಳುತ್ತಾರೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.