ವಾರ್ತಾ ಮಂಜರಿ
Trending Stories, Viral News, Gossips & Everything in Kannada

ತಮಿಳು ವೇದಿಕೆ ಮೇಲೆ ಕನ್ನಡ ಮಾತಾಡಿದ ನಟ ವಿಶಾಲ್…ಚಿಂದಿ ವಿಡಿಯೋ

12,950

ತಮಿಳು ನಟ ವಿಶಾಲ್ ರವರು  ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು  ಅದರ ಭಾಗವಾಗಿ  ಇತ್ತೀಚೆಗೆ 11 ಜೋಡಿಗಳ  ವಿವಾಹವನ್ನು ತಿರುವಳ್ಳೂರಿನಲ್ಲಿ ನಡೆಸಿಕೊಟ್ಟಿದ್ದರು. ಹೌದು  ನಟನು ಸಂಪೂರ್ಣ ಸಮಾರಂಭವನ್ನು ನೋಡಿಕೊಂಡಿದ್ದು ಅವರ ಸ್ನೇಹಿತರೂ ಅವರಿಗೆ ಈ ಕಾರ್ಯದಲ್ಲಿ ನೆರವಾಗಿದ್ದಾರೆ.

ವಧು ಹಾಗೂ ವರನ  ಮದುವೆಯ ಉಡುಪುಗಳನ್ನು ಖರೀದಿಸುವುದರಿಂದ ಹಿಡಿದು ಅವರ ಹೊಸ ಜೀವನವನ್ನು ಪ್ರಾರಂಭಿಸಲು ಎಲ್ಲಾ ಸೌಲಭ್ಯಗಳನ್ನು ಕೂಡ  ನಟ ಒದಗಿಸಿಕೊಟ್ಟಿರುವುದು ವಿಶೇಷ. ಸಮಾರಂಭದಲ್ಲಿ ಮಾತನಾಡಿದ ವಿಶಾಲ್ ನನಗೆ ರೇಷ್ಮೆ ವೇಷಭೂಷಣ ಮತ್ತು ಶರ್ಟ್ ಧರಿಸುವುದು ತುಂಬಾ ಇಷ್ಟ. ಆದರೆ ಆಗಾಗ ಧರಿಸುವ ಅವಕಾಶ ಸಿಗುತ್ತಿಲ್ಲ. ಇನ್ನು ಕಾರ್ಯಕ್ರಮವನ್ನು ಇಷ್ಟು ಸುಸೂತ್ರವಾಗಿ ಆಯೋಜಿಸಲು ಕಾರಣಕರ್ತರಾದ ಕಣ್ಣನ್ ಹಾಗೂ ಹರಿ ಹಾಗೂ ಇತರರಿಗೆ ನನ್ನ ಧನ್ಯವಾದ  ಎಂದಿದ್ದಾರೆ.

 

ಒಂದು ದಿನ  ಕಣ್ಣನ್ ಜೋಡಿಗಳ ವಿವಾಹ ಸಮಾರಂಭಗಳನ್ನು ಪ್ರಾಯೋಜಿಸಲು ನನಗೆ ಐಡಿಯಾ ನೀಡಿದ್ದು ಆದರೆ ಆ ಸಮಯದಲ್ಲಿ ನನ್ನ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದೆ. ಹೌದು ನಾವು ಅಂತಿಮವಾಗಿ ಈ ದಿನಾಂಕವನ್ನು ಫೈನಲ್ ಮಾಡಿದೆವು. ಇಂದು ನನ್ನ ಕುಟುಂಬವು ದೊಡ್ಡದಾಗಿದ್ದು  ನನಗೆ 11 ಸಹೋದರಿಯರಿದ್ದಾರೆ ಎಂದಿದ್ದಾರೆ.

ಇನ್ನು ಈ ಸಹೋದರಿಯರು ನನ್ನ ಸ್ವಂತದವರಂತೆ. ಅವರ ಯೋಗಕ್ಷೇಮವೇ ನನ್ನ ಆದ್ಯತೆಯಾಗಿದ್ದು  ನಾನು ಕೇವಲ ಈ ಸಮಾರಂಭಗಳಲ್ಲಿ ಭಾಗವಹಿಸುವವನಲ್ಲ. ನಾನು ಯಾವಾಗಲೂ ನನ್ನ ಸಹೋದರಿಯರನ್ನು ನೋಡಿಕೊಳ್ಳುತ್ತೇನೆ. ಅವರ ಸಂತೋಷಕ್ಕೆ ನನ್ನ ಭಾವಂದಿರನ್ನು ಜವಾಬ್ದಾರಿಯಾಗಿಸುತ್ತೇನೆ. ಇನ್ನು ಅವರು ನನ್ನ ಸಹೋದರಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದ್ದು  ನಮ್ಮ ಫೌಂಡೇಶನ್ ಅವರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ನೋಡಿಕೊಳ್ಳುತ್ತದೆ ಎಂದಿದ್ದಾರೆ.

ಇನ್ನು ವಿಶಾಲ್ ಅವರು ನಟ ಪುನೀತ್ ಅವರ ದೊಡ್ಡ ಅಭಿಮಾನಿ. ಅವರ ಅಗಲಿದ  ಸಂದರ್ಭ ವಿಶಾಲ್ ಚೆನ್ನೈನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಗೌರವ ಸಲ್ಲಿಸಿದ್ದರು. ಆ ನಂತರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಮಾತನಾಡಿದ್ದು ಪುನೀತ್ ಅವರ ಸಮಾಜಿಕ ಕಾರ್ಯಕ್ರಗಳಿಂದಲೂ ಇವರು ಬಹಳಷ್ಟು ಪ್ರಭಾವಿತರಾಗಿದ್ದಾರೆ. ಶಕ್ತಿಧಾಮದಕ್ಕೂ ಬೇಟಿಕೊಟ್ಟಿದ್ದ ನಟ ವಿಶಾಲ್ ಭೇಟಿ ಬಳಿಕ ಮಾತನಾಡಿ ನಾನು ಯಾವಾಗಲು ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ.

ಅದಕ್ಕೆ ರಾಜ್ ಕುಟುಂಬದವರು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.ಇನ್ನು ಇದೇ ಸಂದರ್ಭದಲ್ಲಿ  ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತ್ತು. ದೇವಸ್ಥಾನಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಒಂದೊಂದು ಮಕ್ಕಳಲ್ಲೂ ದೇವರನ್ನು ನೋಡಿದ್ದು ಮಕ್ಕಳು ತುಂಬಾ ಲವ ಲವಿಕೆಯಿಂದ ಇದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ಇದೀಗ ವಿಶಾಲ್ ಕಾರ್ಯಕ್ರಮವೊಂದರಲ್ಲಿ ಕನ್ನಡ ಪ್ರೇಮ ಮೆರೆದಿರುವ ವಿಡಿಯೋ ವೈರಲ್ ಆಗಿದ್ದು ವಿಶಾಲ್ ಕನ್ನಡ ಪ್ರೇಮ ಹೇಗಿದೆ ನೀವೆ ನೋಡಿ.