Rashmika mandanna speaks cute kannada n telugu in mumbai: ಒಂದು ಕಾಲದ ಕರ್ನಾಟಕದ ಕ್ರಶ್ ಆಗಿದ್ಫ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಹೌದು ಆದರೆ ಈಗ ಇದೇ ರಶ್ಮಿಕಾ ಒಂದಿಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾನೇ ಇದ್ದಾರೆ. ಇನ್ನು ಈ ಹಿಂದಿನ ಟ್ರೋಲ್ ಗಳಲ್ಲಿ ರಶ್ಮಿಕಾರನ್ನ ಕಾಲೆಳೆದಿದ್ದೇ ಹೆಚ್ಚು. ಅಂತಹ ಟ್ರೋಲ್ಗಳಿಗೆ ಬಲಿಯಾದ ರಶ್ಮಿಕಾ ಮಂದಣ್ಣ ತಮ್ಮದೇ ಹಳೆಯದೊಂದು ಸಂದರ್ಶನದಿಂದ ಮತ್ತೊಮ್ಮೆ ಟ್ರೋಲ್ ಆಗಿದ್ದು ಆದರೆ ಇದೇ ಟ್ರೋಲ್ ಕ್ವೀನ್ ರಶ್ಮಿಕಾ ಮಂದಣ್ಣ ಈಗೊಂದು ಒಳ್ಳೆ ಕೆಲಸ ಮಾಡಿದ್ದಾರೆ. ಇದರಿಂದ ಮೆಚ್ಚುಗೆಯ ಮಾತುಗಳೇ ಹರಿದು ಬರ್ತಿವೆ. ಟ್ರೋಲ್ ಮಾಡೋರು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.
ಕರ್ನಾಟಕದ ಕ್ರಶ್ ನಟಿ ರಶ್ಮಿಕಾ ಮಂದಣ್ಣ ರವರು ಬೆಳೆಯಬೇಕು ಅಂತಲೇ ಕನ್ನಡ ಇಂಡಸ್ಟ್ರಿಗೆ ಬಂದಿದ್ದರು. ಹೌದು ಅದೇ ಹಿನ್ನೆಲೆಯಲ್ಲಿಯೇ ಅತಿ ವೇಗದಲ್ಲಿಯೇ ರಶ್ಮಿಕಾ ರವರು ನ್ಯಾಷನಲ್ ಕ್ರಶ್ ಆಗಿಯೇ ಬಿಟ್ಟಿದ್ದು ನ್ಯಾಷನಲ್ ಕ್ರಶ್ ಆಗಿರೋ ರಶ್ಮಿಕಾ ಮಂದಣ್ಣ ಟ್ರೋಲ್ಗಳಿಗೆ ಅತಿ ಹೆಚ್ಚು ಗುರಿಯಾಗಿದ್ದರು. ಇನ್ನು ರಶ್ಮಿಕಾ ಮಂದಣ್ಣರನ್ನ ಈಗಲೂ ಕಾಲೆಳೆಯೋರಿದ್ದು ಟ್ರೋಲ್ ಮೇಲೆ ಟ್ರೋಲ್ ಮಾಡಿ ಕಿಚಾಯಿಸೋರೂ ಇದ್ದಾರೆ. ಹೌದು ಇದರ ಮಧ್ಯ ನೆಟ್ಟಿಗರು ಈ ಬೆಡಗಿಯ ಮೇಲೆ ಕೆಂಗಣ್ಣು ಬೀರಿ ಅಕ್ಷರ ರೂಪದಲ್ಲಿ ಕೆಂಡಕಾರೋದು ಕೂಡ ಇದೆ.
ಇನ್ನು ರಶ್ಮಿಕಾ ಮಂದಣ್ಣರನ್ನ ಕನ್ನಡದಲ್ಲಿ ಬ್ಯಾನ್ ಮಾಡಬೇಕು ಅನ್ನುವ ಕೂಗು ಕೇಳಿ ಬರ್ತಿದೆ. ರಶ್ಮಿಕಾ ಮಂದಣ್ಣ ತಮ್ಮ ವರ್ತನೆಯಿಂದಲೇ ಈ ಒಂದು ಬ್ಯಾನ್ಗೆ ಗುರಿ ಆಗಿದ್ದಾರೆ ಅನ್ನೋದು ಗೊತ್ತಿರೋ ಸತ್ಯವೇ ಆಗಿದೆ. ಹೌದು ಆದರೆ ಬ್ಯಾನ್ ಮಾಡಲು ಸಾಧ್ಯವೇ? ಇಲ್ಲ ಬಿಡಿ ಯಾರೂ ಯಾರನ್ನೂ ಯಾವ ಸಿನಿರಂಗದಿಂದಲೂ ಕೂಡ ಬ್ಯಾನ್ ಮಾಡೋಕೆ ಆಗೋದಿಲ್ಲ. ಅದಕ್ಕೆ ಎಲ್ಲೂ ಅವಕಾಶವೂ ಇಲ್ಲ. ಬ್ಯಾನ್ ಅನ್ನೋ ಪದವೇ ಕನ್ನಡ ಇಂಡಸ್ಟ್ರೀಯಲ್ಲಿ ಬ್ಯಾನ್ ಆಗಿ ಹೋಗಿದೆ.
ನಟಿ ರಶ್ಮಿಕಾ ಮಂದಣ್ಣ ಸದಾ ಟ್ರೋಲ್ಗೆ ಗುರಿ ಆಗುತ್ತಿದ್ದು ನೆಟ್ಟಿಗರ ಸಿಟ್ಟನ್ನೂ ಎದುರಿಸಬೇಕಿತ್ತು. ಆದರೆ ಈಗ ರಶ್ಮಿಕಾರನ್ನ ಹೊಗಳುತ್ತಿದ್ದಾರೆ. ಇದಕ್ಕೆ ಕಾರಣ ರಶ್ಮಿಕಾ ತೆಗೆದುಕೊಂಡ ಆ ಒಂದು ನಿರ್ಧಾರವೇ ಆಗಿದೆ. ಹೌದು ರಶ್ಮಿಕಾ ಮಂದಣ್ಣರ ಇನ್ಸ್ಟಾಗ್ರಾಮ್ ಖಾತೆ ನೋಡಿದರೆ ಒಮ್ಮೆ ನಿಮಗೆ ಶಾಕ್ ಆಗುತ್ತದೆ. ಇದನ್ನ ಕಂಡರೆ ಏನ್ ಇದು ರಶ್ಮಿಕಾ ಹೆಸರು ಉಲ್ಟಾ ಆಗಿದೆ ಅಲ್ವೇ? ಹಿಂಗ್ಯಾಕೆ? ಅನ್ನೋ ಪ್ರಶ್ನೆ ಕೂಡ ನಿಮ್ಮಲ್ಲಿ ಹುಟ್ಟುತ್ತದೆ. ಇದಕ್ಕೆ ಕಾರಣವೂ ಇದೆ. ಅದು ಒಳ್ಳೆ ಕಾರಣ ಅನ್ನೋದೇ ತುಂಬಾ ವಿಶೇಷವಾಗಿದೆ.
ಇನ್ನು ರಶ್ಮಿಕಾ ಮಂದಣ್ಣ ಇಲ್ಲಿವರೆಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದು ಆದರೆ ಈಗ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಬೇಕು. ಅವರಿಗೂ ಅದರ ಹಕ್ಕು ಇದೆ ಅಂತಲೇ ಜಾಗೃತಿ ಮೂಡಿಸುತ್ತಿದ್ದಾರೆ. ಹೌದು ಈ ಹಿನ್ನೆಲೆಯಲ್ಲಿಯೇ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ತಮ್ಮ ಹೆಸರನ್ನ ಉಲ್ಟಾ ಬರೆದಿದ್ದಾರೆ.
ಇದರ ಅರ್ಥ ಇಷ್ಟೇ.
ಶಿಕ್ಷಣ ಕಲಿಯದೇ ಇರೋ ಹೆಣ್ಣುಮಕ್ಕಳಿಗೆ ಅಕ್ಷರಗಳು ಹೀಗೆ ಕಾಣುತ್ತವೆ. ಅದಕ್ಕೇನೆ ಅದರ ಬಗ್ಗೆ ಜಾಗೃತಿ ಮೂಡಿಸಲು ಹೆಸರನ್ನ ಉಲ್ಟಾ ಬರೆದಿರೋದಾಗಿಯೆ ರಶ್ಮಿಕಾ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ರಶ್ಮಿಕಾರ ಈ ಒಂದು ನಡೆಗೆ ನೆಟ್ಟಿಗರು ಸಿಟ್ಟಾಗಿಲ್ಲ. ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಈ ನಡುವೆ ರಶ್ಮಿಕಾ ಮುಂಬೈನಲ್ಲಿ ಕನ್ನಡ ಮಾತನಾಡುವ ಅಪರೂಪದ ವಿಡಿಯೋ ವೈರಲ್ ಆಗಿದ್ದು ಯಾವ ಸಂದರ್ಭ ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ.