ವಾರ್ತಾ ಮಂಜರಿ
Trending Stories, Viral News, Gossips & Everything in Kannada

Yajamana: ಯಜಮಾನ ಚಿತ್ರದಲ್ಲಿ ನಟಿಸಿದ್ದ ನಟಿ ಅರ್ಚನಾ ಸ್ಥಿತಿ ಏನಾಯ್ತು ಗೊತ್ತಾ…..

13,554

Yajamana: ಚೆಂದನವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ ಅರ್ಚನಾ ರವರು ಮೂಲತಃ ಮರಾಠಿ ಜನಾಂಗದವರು ಕೂಡ ಹುಟ್ಟಿದ್ದು ಕರ್ನಾಟಕದಲ್ಲಿ. ಹೌದು ನಮ್ಮ ಕನ್ನಡವನ್ನು ಸುಲಲಿತವಾಗಿ ಮಾತನಾಡಿ ಕನ್ನಡಿಗರ ಜನರ ಮನದಲ್ಲಿ ಅಚ್ಚಳೆಯದೆ ಉಳಿದಿದ್ದು 2016 ರಲ್ಲಿ ಸಿಬಿಐ ಸತ್ಯ ಎಂಬ ಸಿನಿಮಾ ಅವರ ಕೊನೆ ಸಿನಿಮಾ ಆಗಿದ್ದು ಬಳಿಕ ಅರ್ಚನಾ ಅವರು ಯಾವ ಸಿನಿಮಾ ಅಲ್ಲಿ ಕಾಣಿಸಿಕೊಂಡಿಲ್ಲ.

ಇದುಕ್ಕೆ ನಿಜವಾದ ಕಾರಣ ಏನು ಗೊತ್ತಾ? 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತ ಮುದ್ದು ಮುದ್ದಾಗಿ ಕಾಣುತ್ತಿದ್ದ ಅರ್ಚನಾ ಅವರಿಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಒದಗಿ ಬಂದಿತ್ತು ಎಂದು ಸಂದರ್ಶನ ಒಂದರಲ್ಲಿ ಸ್ವತಃ ಅವರೇ ಹೇಳಿದ್ದಾರೆ. 1996 ರಲ್ಲಿ ಶಿವರಾಜಕುಮಾರ್ ಅವರ ಜೊತೆ ನಾಯಕಿಯಾಗಿ ಆದಿತ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಇದು ಅಷ್ಟೊಂದು ಹಿಟ್ ಆಗದೇ ಇದ್ದರೂ ಕೂಧಸ ಅರ್ಚನ ಅವರಿಗೆ ತಕ್ಕ ಮಟ್ಟಿಗೆ ಹೆಸರು ತಂದು ಕೊಟ್ಟಿತ್ತು.

ಸಾಲ ಸಾಲಾಗಿ ಅವಕಾಶಗಳು ಬರಲು ಪ್ರಾರಂಭವಾಗಿ ಈ ಹೃದಯ ನಿನಗಾಗಿ ಸಿನಿಮಾ ಮಾಡುತ್ತಾರೆ. ತದ ನಂತರ ಮೇಘ ಬಂತು ಮೇಘ ಸಿನಿಮಾ ಹಿಟ್ ಆಗಿದ್ದು ಬಳಿಕ ಬಾಲಿವುಡ್ ಅಲ್ಲಿ ಫೂಲ್ ಔರ್ ಆಗ್ ಚಿತ್ರದಲ್ಲಿ ಮಿಥುನ್ ಚಕ್ರವರ್ತಿಯವರ ಜೊತೆ ನಟಿಯಾಗಿ ಅಭಿನಯ ಮಾಡುತ್ತಾರೆ. ಮುಂದೆ ತೆಲುಗು ತಮಿಳು ಮಲಯಾಳಂ ಹೀಗೆ ಹಲವಾರು ಪರಭಾಷೆಯಲ್ಲಿ ನಟಿಸಿ ಕೊನೆಗೆ ಕನ್ನಡ ಚಿತ್ರರಂಗಕ್ಕೆ ಹಿಂದಿರುಗುತ್ತಾರೆ ಅರ್ಚನಾ.

ಕನ್ನಡದಲ್ಲಿ ಉಪೇಂದ್ರ ರವರ A ಸಿನಿಮಾ ಮಾರಿ ಕಣ್ಣು ಹೋರಿ ಮ್ಯಾಗೆ ನೀಲಂಬರಿ ತಮಾಷೆಗಾಗಿ ಹಾಗೂ ಸಿಬಿಐ ಸತ್ಯ ಸಿನಿಮಾಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದು ಯಜಮಾನ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ಓ ಮೈನ ಓ ಮೈನ ಏನಿದು ಮಾಯೆ ಎಂಬ ಹಾಡು ಇಂದಿಗೂ ಮರೆಯಲು ಸಾಧ್ಯವಿಲ್ಲ. ಈ ಚಿತ್ರದಿಂದ ಅರ್ಚನಾ ಅವರಿಗೆ ಇನ್ನಷ್ಟು ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಒದಗಿ ಬಂದಿದ್ದು ಮಾವ ಮಾವ ಮದುವೆ ಮಾಡು ಯಾರಿಗೆ ಬೇಡ ದುಡ್ಡು ಎಂಬ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಕೊನೆಗೆ ಅಭಿಜಿತ್ ಅವರ ಜೊತೆ 2016 ರಲ್ಲಿ ಸಿಬಿಐ ಸತ್ಯ ಕೊನೆಯ ಸಿನಿಮಾವಾಗಿದ್ದು ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ.

Archana Hot Song

ಹೌದು ಕೊನೆಗೂ ಅರ್ಚನಾ ಅವರ ಬಗ್ಗೆ ಕೆಲ ಮಾಹಿತಿ ಕಲೆ ಹಾಕಿದಾಗ ತಿಳಿದುಬಂದ ವಿಷಯವೆಂದರೆ ಅವರು ನಟಿಸಿರುವ ಎಲ್ಲ ಸಿನಿಮಾ ನೋಡಿದರೆ ಎಲ್ಲೂ ಕೂಡ ಈ ನಟಿ ಅಸಬ್ಯವಾಗಿ ಬಟ್ಟೆ ಹಾಕಿಲ್ಲ. ದೇಹ ಮುಚ್ಚುವಂತೆ ಬಟ್ಟೆ ಹಾಕಿಕೊಂಡು ತಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ತುಂಡು ಉಡುಗೆ ಬಟ್ಟೆಯ ಸಿನಿಮಾವನ್ನು ಜಾಸ್ತಿ ಇಷ್ಟ ಪಡುತ್ತಾರೆ. ಹೌದು ಇತ್ತೀಚಿನ ದಿನಗಳಲ್ಲಿ ಜಾಸ್ತಿ ತುಂಡು ಉಡುಗೆ ತೆಳುವಾದ ಸೀರೆ ದರಿಸುವ ನಟಿಯರ ಚಿತ್ರಗಳು ಜಾಸ್ತಿ ದಿನ ಓಡುತ್ತದೆ.

ಆದರೆ ಹೀಗೆ ಅರ್ಚನಾ ಅವರಿಗೆ ಇಂಥಹ ಸಿನಿಮಾದಲ್ಲಿ ಅಭಿನಯ ಮಾಡಲು ಸುತರಾಂ ಇಷ್ಟ ಇಲ್ಲದೆ ಸಿನಿಮಾ ತಿರಸ್ಕರಿಸಿ ನನಗೆ ಗ್ಲಾಮರಸ್ ಹಾಗೂ ತೀರಾ ಅಸಹ್ಯ ಹುಟ್ಟಿಸುವ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾರೆ. ಹೌದು ಕ್ರಮೇಣ ಕನ್ನಡ ಚಿತ್ರ ರಂಗದಲ್ಲಿ ಅರ್ಚನಾ ಅವರಿಗೆ ಬೇಡಿಕೆ ಕಮ್ಮಿ ಆಗುತ್ತಾ ಬಂದಿದ್ದು ಕೊನೆಗೆ ಯಾವುದೇ ಚಿತ್ರವು ಸಿಗುವುದಿಲ್ಲ.

ಇನ್ನು ಇತ್ತೀಚಿನ ವರದಿ ಪ್ರಕಾರ ಮೂಲತಃ ಮರಾಠಿ ಆಗಿದ್ದ ಇವರು ಇಂದು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿರೇಖೆ ಒಂದು ನಗರದಲ್ಲಿ ತನ್ನ ಪತಿಯ ವ್ಯವಹಾರ ನೋಡಿಕೊಂಡು ಜೀವನ ನಡೆಸುತ್ತಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರ ರಂಗದಲ್ಲಿ ಜಾಸ್ತಿ ಗ್ಲಮರಸ್ ಮತ್ತು ಅಂಗ ಪ್ರದರ್ಶನ ಸಿನಿಮಾ ಬೇಡಿಕೆ ಇದ್ದು ಹೊಸ ಹೊಸ ನಟಿಯರು ಆಗಮನ ಮೂಲಕ ಹಲವಾರು ಹಳೆಯ ನಟಿಯರಿಗೆ ಅವಕಾಶ ಕಮ್ಮಿ ಆಗಿದೆ ಎನ್ನಬಹುದು.