Dhruva Sarja: ಸದ್ಯ ಈ ತಿಂಗಳು ಅಕ್ಟೋಬರ್ ೨ ರಂದು ದೇಶಾದ್ಯಂತ ಗಾಂಧಿ ಜಯಂತಿ ಹಬ್ಬದ ಸಂಭ್ರವವಿದ್ದರೆ ನಮ್ಮ ಕನ್ನಡ ಚಿತ್ರರಂಗದ ಸರ್ಜಾ ಕುಟುಂಬದಲ್ಲಿ ಮಾತ್ರ ಪುಟ್ಟ ಮಹಾಲಕ್ಷ್ಮಿ ಆಗಮನದಿಂದಾಗಿ ಸಂತೋಷ ಮುಗಿಲು ಮುಟ್ಟಿತ್ತು. ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ರವರ ಪ್ರೀತಿಯ ಪತ್ನಿ ಪ್ರೇರಣಾ ಅಕ್ಟೋಬರ್ 2 ಬೆಳಗ್ಗೆ 8.30 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನುಮ ನೀಡಿದ್ದು ಈ ಹಿಂದೆ ಧ್ರುವ ಸರ್ಜಾ ಅವರು ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡುವಾಗ ಮನೆಗೆ ಈಗಾಗಲೇ ಒಬ್ಬ ಗಂಡು ಮಗನಿದ್ದು ಈಗ ಮಗಳು ಹುಟ್ಟಿದರೆ ಸಂತೋಷ ಎಂದು ಹೇಳಿದ್ದರು.
ಇದೀಗ ನಟನ ಆಸೆಯಂತೆಯೇ ಮುದ್ದಾದ ಹೆಣ್ಣು ಮಗುವಾಗಿದ್ದು ಸಂತೋಷದಲ್ಲಿದ್ದಾರೆ. ಆದರೆ ಇದೇ ಸಮಯದಲ್ಲಿ ಮೇಘನಾ ರಾಜ್ ಅವರೂ ಸಹ ಪ್ರತಿಕ್ರಿಯೆ ನೀಡಿದ್ದು ಮಗುವನ್ನು ಮುದ್ದಾಡಿತ್ತಿರುವ ಪೋಟೋ ಕೂಡ ವೈರಲ್ ಆಗುತ್ತಿದೆ. ಇನ್ನು ಮೇಘನಾ ಎಂತಹ ಉಡುಗೊರೆ ಕೊಟ್ಟಿದ್ದಾರೆ ಗೊತ್ತಾ?ಸದ್ಯ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಮುದ್ದಾದ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ.
ಚಿರು ಸರ್ಜಾ ಅಗಲಿಕೆಯ ಬಳಿಕ ಧ್ರುವ ಅವರ ಅಜ್ಜಿ ಸಹ ಕೊನೆಯುಸಿರೆಳೆದಿದ್ದರು. ಇನ್ನು ಈ ದುಃಖದಲ್ಲಿರುವ ಕುಟುಂಬಕ್ಕೆ ಈಗ ಮುದ್ದು ಮಗಳ ಆಗಮನ ಬಹಳಾನೇ ಸಂತಸ ನೀಡಿದ್ದು ಸದ್ಯ ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ನಟ ಧ್ರುವ ಸರ್ಜಾ ನಾನು ಅಂದುಕೊಂಡ ಹಾಗೆ ಹೆಣ್ಣು ಮಗು ಆಗಿದೆ ವೈದ್ಯರಿಗೆ ಧನ್ಯವಾದಗಳು ಸದ್ಯ ನಾರ್ಮಲ್ ಡೆಲಿವರಿಯಾಗಿದೆ ಎಂದಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಎಲ್ಲರ ಆಶೀರ್ವಾದದಿಂದ ನಮಗೆ ಮುದ್ದಾದ ಹೆಣ್ಣು ಮಗಳು ಹುಟ್ಟಿದ್ದು ಬಹಳ ಖುಷಿಯಾಗುತ್ತಿದೆ.
ನಮ್ಮ ಇಡೀ ಕುಟುಂಬ ಬಹಳಾನೇ ಸಂತಸದಲ್ಲಿದ್ದು ಈ ಸಂದರ್ಭದಲ್ಲಿ ನಮ್ಮ ಅಣ್ಣ ಚಿರು ಮತ್ತು ಅಜ್ಜಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಅರ್ಜುನ್ ಅಂಕಲ್ ಬರುತ್ತಾರೆ. ನಾನಂತೂ ತುಂಬ ಖುಷಿಯಾಗಿದ್ದು ನಮಗೆ ಒಳ್ಳೆಯ ವೈದ್ಯರು ಸಿಕ್ಕಿದ್ದು ನಾನು ಅಂದುಕೊಂಡಂಗೆ ಹೆಣ್ಣು ಮಗು ಆಗಿದೆ ಎಂದಿದ್ದಾರೆ. ಇನ್ನು ಧೃವ ಸರ್ಜಾ ಅವರಿಗೆ ಹೆಣ್ಣು ಮಗು ಆಗಿರುವ ವಿಚಾರದ ಕುರಿತು ನಟಿ ಮೇಘನಾ ರಾಜ್ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದು ಚಿರು ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಅವರು ಈ ಬಗ್ಗೆ ಮಾತನಾಡಿ ಈಗಾಗಲೇ ಮನೆಗೊಬ್ಬ ಗಂಡು ಮಗ ಇದ್ದಾನೆ. ಈಗ ಹೆಣ್ಣು ಮಗು ಹುಟ್ಟಿರೋದು ಬಹಳ ಖುಷಿ ನೀಡಿದ್ದು ಧ್ರುವ ಏನು ಆಸೆ ಪಟ್ಟಿದ್ದ ನೋ ಅದೇ ಆಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಮಗು ಜನಿಸುವುದಕ್ಕೂ ಕೆಲ ಕ್ಷಣಗಳ ಹಿಂದಷ್ಟೇ ಮಾತನಾಡಿದ್ದ ಮೇಘನಾ ರಾಜ್ ಹೆಣ್ಣು ಮಗು ಬೇಕು ಎಂದು ಧ್ರುವ ಈಗಾಗಲೇ ಹೇಳಿದ್ದ ಹೆಣ್ಣಾಗಲಿ ಗಂಡಾಗಲಿ ಆರೋಗ್ಯವಾಗಿ ಮಗು ಜನಿಸಲಿ ಎಂದಿದ್ದರು. ಸದ್ಯ ಇದೀಗ ನಟ ಧ್ರುವ ಸರ್ಜಾ ಆಸೆ ಪಟ್ಟಂತೆ ಹೆಣ್ಣು ಮಗು ಜನಿಸಿದ್ದು ಸರ್ಜಾ ಕುಟುಂಬ ಸಂತೋಷದಲ್ಲಿದ್ದರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭಾಶಯ ತಿಳಿಸಿ ಮಗುವಿಗೆ ಹಾರೈಸಿದ್ದು ಈ ನಡುವೆ ಈಗ ರಾಯನ್ ಜೊತೆ ಧ್ರುವ ಮನೆಗೆ ಬಂದ ಮೇಘನಾ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿ ಮಗುವನ್ನು ಮುದ್ದಾಡಿದ್ದಾರೆ. ಇನ್ನು ಈ ಹಿಂದೆ ರಾಯನ್ ನಾಮಕರಣಕ್ಕೆ ಧ್ರುವ ದುಬಾರಿ ಬೆಲೆಯ ಬೆಳ್ಳಿ ತೊಟ್ಟಿಲು ನೀಡಿದ್ದರು. ಇದೀಗ ಧ್ರುವ ಮಗಳ ನಾಮಕರಣಕ್ಕೆ ಮೇಘನಾ ಕೂಡ ದುಬಾರಿ ಬೆಲೆಯ ಉಡುಗೊರೆ ನೀಡಲಿದ್ದಾರೆ ಎನ್ನಲಾಗಿದೆ.