ವಾರ್ತಾ ಮಂಜರಿ
Trending Stories, Viral News, Gossips & Everything in Kannada

Abhijith: ಅದೊಂದು ಕಾರಣಕ್ಕೆ ಆಸ್ತಿ ಹಣ ಸೈಟು ಎಲ್ಲವನ್ನು ಮಾರಿದ್ದ ನಟ ಅಭಿಜಿತ್ ಸತ್ಯ ಹೊರಕ್ಕೆ…

286

ಚೆಂದನವನಕ್ಕೆ ಖಳ ನಾಯಕ ನಟನಾಗಿ ಪಾದಾರ್ಪಣೆ ಮಾಡಿ ಕೌಟುಬಿಕ ಚಿತ್ರಗಳ ಸರದಾರನಾಗಿ ಅಭಿನಯ ಚತುರ ಎಂದೆನಿಸಿಕೊಂಡು ಸುಮಾರು 125 ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದವರು ನಟ ಅಭಿಜಿತ್  Abhijith ಅವರು. ನಟನೆಯ ಜೊತೆಗೆ ಅಭಿಜಿತ್ ಉತ್ತಮ ಗಾಯಕ ನಿರ್ಮಾಪಕ ಮತ್ತು ನಿರ್ದೇಶಕರೂ ಕೂಡ ಆಗಿದ್ದು 1980 ರ ದಶಕದ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು 1990 ರಲ್ಲಿ ಬಿಡುಗಡೆಯಾದ ಕಾಲೇಜ್ ಹೀರೋ ಸಿನಿಮಾ ಅವರನ್ನು ಕನ್ನಡ ಚಿತ್ರರಂಗದ ಯಶಸ್ವಿ ಖಳನಾಯಕನನ್ನಾಗಿ ಮಾಡಿತು.

ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಖಳ ನಾಯಕನಾಗಿ ಅಭಿನಯಿಸುತ್ತಿದ್ದ ಅಭಿಜಿತ್ ರವರು ಬಳಿಕ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಾಕಷ್ಟು ಸಿನಿಮಾಗಳಲ್ಲಿ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಫ್ಯಾಮಿಲಿ ಸಿನಿಮಾಗಳ ಸರದಾರ ಎಂದು ತಮ್ಮನ್ನು ತಾವು ನಿರ್ಮಿಸಿಕೊಂಡರು. ಅಲ್ಲದೆ ನಟಸಾರ್ವಭೌಮ ಡಾ. ರಾಜ್ಕುಮಾರ್ ರವರ ಜೀವನ ಚೈತ್ರ ಚಿತ್ರದಲ್ಲೂ ಅಭಿನಯಿಸಿ ಅಪಾರ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು.

ಪೋಷಕ ಪಾತ್ರ ಖಳನಾಯಕನ ಪಾತ್ರದ ಜೊತೆಗೆ ಸಿನಿಮಾಗಳಲ್ಲಿ ನಾಯಕ ನಟನಾಗಿ ನಿರ್ದೇಶಕನಾಗಿ ಗಾಯಕನಾಗಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಅಭಿಜಿತ್ ಅವರು ಒಂದು ಕಾಲದಲ್ಲಿ ಯಶಸ್ವಿ ನಟನಾಗಿ ಮಿಂಚಿದ್ದು ಆದರೆ ಕ್ರಮೇಣ ಕಾಲ ಕಳೆದಂತೆ ಚಿತ್ರದಲ್ಲಿ ನಟಿಸುವ ಅವಕಾಶಗಳು ಅವರಿಗೆ ಕಮ್ಮಿಯಾಗುತ್ತದೆ. ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಕ್ಷರ ಮಾಲೆ ಎಂಬ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಹೌದು 90ರ ದಶಕದಲ್ಲಿ ಹುಟ್ಟಿದವರು ಈ ಕಾರ್ಯಕ್ರಮವನ್ನು ಇಂದಿಗೂ ಮರೆತಿಲ್ಲ. ಅಕ್ಷರಮಾಲೆ ಕಾರ್ಯಕ್ರಮ ಬರುತ್ತಿದೆ ಎಂದರೆ ಮನೆ ಮಂದಿಯೆಲ್ಲ ಕುಳಿತು ಕಾತುರದಿಂದ ವೀಕ್ಷಿಸುತ್ತಿದ್ದರು. ಇನ್ನು ಈ ಕಾರ್ಯಕ್ರಮ ಸುಮಾರು 15 ವರ್ಷಗಳ ಕಾಲ ಪ್ರಸಾರವಾಗಿ ಇಂದಿಗೂ ದಾಖಲೆಯನ್ನು ಬರೆದು ಬಿಟ್ಟಿದೆ.

ಆದರೆ ಅವರಗೆ ಸಿನಿಮಾಗಳಲ್ಲಿ ಅಭಿನಯಿಸುವ ಹಂಬಲ ಮಾತ್ರ ಕಡಿಮೆಯಾಗಿಲ್ಲಾ. ಇದೀಗ ಜೀವಾಹಿನಿಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಕಿರುತೆರೆ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಸತತ ಏಳು ವರುಷದಿಂದ ಸಿನಿಮಾ ಅವಕಾಶಕ್ಕಾಗಿ ಕಾಯುತ್ತಿದ್ದ ಅವರಿಗೆ ಇದೀಗ ಒಂದೆರಡು ಸಿನಿಮಾಗಳಲ್ಲೂ ಕೂಡ ಅವಕಾಶ ಒದಗಿ ಬಂದಿದ್ದು ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದಾರೆ.ನಟ ಅಭಿಜಿತ್ ಅವರ ಹೆಂಡತಿ ಹಾಗು 3 ಮಕ್ಕಳು ಹೇಗಿದ್ದಾರೆ ನೋಡಿ💖 | Actor Abhijit Family Video | Hero Abijit Wife - YouTube

ಇನ್ನು ಇತ್ತ ಇತ್ತೀಚಿನ ದಿನಗಳಲ್ಲಿ ನಟ ಅಭಿಜಿತ್ ರಬರ ಸಾಕಷ್ಟು ಅಪರೂಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಪತ್ನಿ ಹಾಗೂ ಮಕ್ಕಳ ಜೊತೆ ಕಳೆಯುವ ಅಪರೂಪದ ಕ್ಷಣಗಳಿಂದ ಹಿಡಿದು ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿರುತ್ತವೆ. ಇದೀಗ ಅಭಿಜಿತ್ ರವರ ಕಷ್ಟದ ದಿನದಿಂದ ಹೇಗೆ ಎದ್ದು ಬಂದರು ಎಂಬುದನ್ನ ತಿಳಿಸಲಿದ್ದೇವೆ.

ನಟ ಅಭಿಜಿತ್ ಅವರ ದಾಂಪತ್ಯ ಜೀವನದ ವಿಚಾರಕ್ಕೆ ಬರುವುದಾದರೆ ಅವರ ಪತ್ನಿಯ ಹೆಸರು ರೋಹಿಣಿ ಅಭಿಜಿತ್ ಎಂಬುದಾಗಿದ್ದು ಈ ದಂಪತಿಗೆ ಮೂವರು ಮಕ್ಕಳಿದ್ದು ಕಾರ್ತಿಕೇಯ ಬಾಲಾಜಿ ಶಿಲ್ಪಾ ಎಂಬ ಮೂರು ಜನ ಮಕ್ಕಳಿದ್ದಾರೆ. ಅವರ ಮಗ ಬಾಲಾಜಿ ಉತ್ತಮ ಡ್ಯಾನ್ಸರ್ ಕೂಡ ಹೌದು.ಇನ್ನು ಶಿಲ್ಪಾ ಅವರಿಗೆ ವಿವಾಹವಾಗುದ್ದು ಮಗು ಕೂಡ ಇದೆ. ಶಿಲ್ಪಾ ಅವರು ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ನೋಡಲು ಯಾವ ನಟಿಗೂ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಅದೊಂದು ಸಮಯದಲ್ಲಿ ನಟನೆ ಮಾಡುವುದರ ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನದ ಕೂಡ ಕೈ ಹಾಕಿ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 15 ವರ್ಷಗಳ ಕಾಲ ಸಕ್ರಿಯರಾಗಿದ್ದರು. ಆದರೆ ಬಳಿಕ ವಯಸ್ಸು ಆಗಿದ್ದು ಚಿತ್ರರಂಗದಲ್ಲಿ ತುಂಬಾ ಸ್ಪರ್ಧೆ ಕೂಡ ಇದ್ದ ಕಾರಣ ಅವಕಾಶ ಕಡಿಮೆ ಯಾಗಿತ್ತಂತೆ. ಹೌದು ಜೊತೆಗೆ ಮನೆ ಸೈಟು ಮಾಡಿಕೊಂಡ ಕಾರಣ ಲೋನ್ ತುಂಬಾ ಇದ್ದು ಕೆಲಸ ಇಲ್ಲದ ನಿರುದ್ಯೋಗಿ ಯಾಗಿದ್ದರು. ಈ ಸಂದರ್ಭ ಅವರಿಗೆ ಬರುವ ಪಾತ್ರಗಳು ತೀರ ಚಿಕ್ಕದಾಗಿದ್ದು ಯಾರು ಗುರುತಿಸದ ಪಾತ್ರಗಳೆ ಅವರಿಗೆ ಸಿಕ್ಕಿತಂತೆ ಆದರೆ ಸ್ವಾಭಿಮಾನ ಬಿಡಬಾರದೆಂದು ಇಂತಹ ಪಾತ್ರ ಅವರು ನಟಿಸಲೇ ಇಲ್ಲವಂತೆ.

ಇದೇ ಸಂದರ್ಭ ಆರ್ಥಿಕ ಪರಿಸ್ಥಿತಿ ದುಸ್ಥರವಾದ ಕಾರಣ ಸೈಟ್ ಹಾಗೂ ಕೆಲವೊಂದು ಆಸ್ತಿ ಯನ್ನು ಮಾರಬೇಕಾಯಿತು. ಅವರ ಮಕ್ಕಳ ಶಿಕ್ಷಣ ಮುಗಿದ ಕಾರಣ ಮಕ್ಕಳು ಉದ್ಯೋಗ ಪಡೆದ ಬಳಿಕ ಪರಿಸ್ಥಿತಿ ಸುಧಾರಿಸಿತು ಎಂದು ಅವರ ನೋವಿನ ಕತೆಯನ್ನು ಜೋಡಿ ನಂಬರ್ ಒನ್ ರಿಯಾಲಿಟಿ ಶೋ ನಲ್ಲಿ ತಿಳಿಸಿದ್ದರು. ಒಟ್ಟಾರೆ ಓರ್ವ ಯಶಸ್ವಿ ನಾಯಕ ನಟ ಇಷ್ಟೇಲ್ಲ ಕಷ್ಟ ಪಡಬೇಕಾದ್ದು ಪ್ರಸ್ತುತ ಅಭಿಜಿತ್ ಅವರು ಕಿರುತೆರೆಯಲ್ಲಿ ಮೂಡಿಬರುತ್ತಿರುವ ಸತ್ಯ ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಅಭಿಜಿತ್ ನೆಮ್ಮದಿಯಾಗಿದ್ದಾರೆ.