ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾಜಧಾನಿ ಬೆಂಗಳೂರಲ್ಲಿ ಸ್ಕೈಬಸ್ ಯೋಜನೆಗೆ ಮುನ್ನುಡಿ ಬರೆದ ನಿತಿನ್ ಗಡ್ಕರಿ

58
ಮಾನವ ಆಧುನಿಕರಣದತ್ತ ಸಾಗಿದಂತೆ ಆತನಿಗಿರುವ ಅಭಿರುಚಿ ಆಸಕ್ತಿಯ ಅಂಶಗಳು ಬದಲಾಗುತ್ತಾ ಸಾಗಿತು ಅದರಂತೆ ಅಭಿವೃದ್ಧಿಯ ಹೆಸರಲ್ಲಿ ಗ್ರಾಮೀಣ ಭಾಗ ಕಣ್ಮರೆಯಾಗಿ ಎಲ್ಲೆಡೆ ಪಟ್ಟಣದ ಪ್ರಪಂಚ ಬೆಳೆದಿದೆ ಅದರಂತೆ ಎಲೆಕ್ಟ್ರಾನಿಕ್ ನಿಂದ ಸಾಮಾನ್ಯ ವಾಹನಗಳ ಸಂಖ್ಯೆ ಸಹ ಹೆಚ್ಚಾಗಿದೆ ಇದರಿಂದಾಗಿ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯದಂತಹ ಸಮಸ್ಯೆ ಸಹ ಎಲ್ಲೆಡೆ ಹಬ್ಬುತ್ತಿದ್ದು ರಾಜಧಾನಿ ಬೆಂಗಳೂರು ಇದಕ್ಕೆ ಹೊರತಲ್ಲ ಎನ್ನಬಹುದು.
ರಸ್ತೆಯಲ್ಲಿ ಸಾಗುವ ಬಸ್‌, ಮೆಟ್ರೊ, ರೈಲು, ಅಂಡರ್‌ಪಾಸ್‌ ರೈಲು ಇತ್ಯಾದಿ ವಿವಿಧ ಸಾರಿಗೆಗಳಿಗೆ ಹೆಸರಾದ ಬೆಂಗಳೂರಿನಲ್ಲಿ ಭವಿಷ್ಯದಲ್ಲಿ ಬಸ್‌ಗಳು ಆಕಾಶದಲ್ಲಿ ತೇಲುತ್ತ ಸಾಗಲಿದೆ. ಮೆಟ್ರೊ ರೈಲು ಹಳಿಯ ಮೇಲೆ ಹೋದರೆ ಇಂತಹದ್ದೇ ಪಿಲ್ಲರ್‌ಗಳಡಿ ಬಸ್‌ಗಳು ತೇಲುತ್ತ ಸಾಗಲಿವೆ. ಪಿಲಿಫೈನ್ಸ್‌ ಮತ್ತು ಇತರೆ ದೇಶಗಳಲ್ಲಿರುವ ಸ್ಕೈಬಸ್‌ ಮಾದರಿಯ ಸಂಚಾರ ವ್ಯವಸ್ಥೆಯನ್ನು ಬೆಂಗಳೂರಿಗೆ ಅಳವಡಿಸುವ ಕುರಿತು ನಿತಿನ್‌ ಗಡ್ಕರಿ ಪ್ರಸ್ತಾಪ ಮಾಡಿದ್ದಾರೆ.
ಸ್ಕೈಬಸ್‌ ಎನ್ನುವುದು ಕಡಿಮೆವೆಚ್ಚದ, ಪರಿಸರಸ್ನೇಹಿಯಾದ ನಗರ ಸಮೂಹ ಸಾರಿಗೆ ವ್ಯವಸ್ಥೆಯಾಗಿದೆ. ಇದು ಮೆಟ್ರೊದಂತಹ ಸಾರಿಗೆ ವ್ಯವಸ್ಥೆ. ಆದರೆ, ಮೆಟ್ರೊ ರೈಲುಗಳು ಹಳಿ ಮೇಲೆ ಚಲಿಸಿದರೆ ಸ್ಕೈಬಸ್‌ಗಳು ಕೇಬಲ್‌ ಕಾರುಗಳಂತೆ ಎತ್ತರದಲ್ಲಿ ಪಿಲ್ಲರ್‌ಗಳಡಿಯಲ್ಲಿ ನೇತಾಡುತ್ತ ಸಾಗುತ್ತವೆ. ಸ್ಕೈಬಸ್‌ಗಳು ಗಂಟೆಗೆ ನೂರು ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿವೆ. ಇದು ಎಲೆಕ್ಟ್ರಿಕ್‌ ಬಸ್‌ಗಳಾಗಿವೆ. ಮೆಟ್ರೊ ರೈಲು ಹಳಿ ನಿರ್ಮಾಣಕ್ಕಿಂತ ಇದು ಕಡಿಮೆ ವೆಚ್ಚದ ಮೂಲಸೌಕರ್ಯ ವೆಚ್ಚವನ್ನು ಹೊಂದಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಅಧ್ಯಯನ ನಡೆಸಲು ಮತ್ತು ಸ್ಕೈಬಸ್‌ ಅಥವಾ ಟ್ರಾಲಿ ಬಸ್‌ ಅನುಷ್ಠಾನಗೊಳಿಸುವ ಸಾಧ್ಯತೆಯ ಕುರಿತು ಅಧ್ಯಯನ ನಡೆಸಿ ಮೂರು ತಿಂಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸಲು ಅಂತಾರಾಷ್ಟ್ರೀಯ ಸಲಹೆಗಾರರ ಅಭಿಪ್ರಾಯ ಪಡೆಯಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ ಹೇಳಿದ್ದಾರೆ.
ಪಿಲಿಫೈನ್ಸ್‌, ಸಿಂಗಾಪುರದಂತಹ ದೇಶಗಳಲ್ಲಿ ರಸ್ತೆ ನಿರ್ಮಿಸಲು ಭೂಸ್ವಾಧೀನ ಕಷ್ಟ. ಅದಕ್ಕಾಗಿ ಅಲ್ಲಿ ಸ್ಕೈಬಸ್‌ಗಳು ಕಾರ್ಯನಿರ್ವಹಿಸುತ್ತವೆ. ಇದು ಟ್ರಾಫಿಕ್‌ ದಟ್ಟಣೆಯನ್ನೂ ಕಡಿಮೆ ಮಾಡಲು ನೆರವಾಗುತ್ತವೆ. ಬೆಂಗಳೂರಿನಂತಹ ರಸ್ತೆಗಳಲ್ಲಿ ರಸ್ತೆಯಲ್ಲಿ ಕೆಲವು ಬೈಕ್‌ಗಳು ಎದುರಾದರೆ ಟ್ರಾಫಿಕ್‌ ಜಾಮ್‌ ಆಗುವುದು ಸಾಮಾನ್ಯ. ಇಂತಹ ಸಮಸ್ಯೆಯನ್ನು ಸ್ಕೈಬಸ್‌ಗಳು ನಿವಾರಿಸುವ ನಿರೀಕ್ಷೆಯಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಂಥನ್‌ ಐಡಿಯಾ ಟು ಆಕ್ಷನ್‌ ಎಂಬ ರಾಷ್ಟ್ರೀಯ ಸಮ್ಮೇಳನದಲ್ಲಿ ನಿತಿನ್‌ ಗಡ್ಕರಿ ಅವರು ಸ್ಕೈಬಸ್‌ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಸ್ಕೈಬಸ್‌ಗಳಲ್ಲಿ ಒಂದು ಲಕ್ಷ ಜನರು ಸಂಚರಿಸಿದರೆ ಟ್ರಾಫಿಕ್‌ ದಟ್ಟಣೆ ಸಾಕಷ್ಟು ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ಕೈಬಸ್‌ಗಳು ಗಂಟೆಗೆ ನೂರು ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿವೆ. ಇದು ಎಲೆಕ್ಟ್ರಿಕ್‌ ಬಸ್‌ಗಳಾಗಿವೆ. ಮೆಟ್ರೊ ರೈಲು ಹಳಿ ನಿರ್ಮಾಣಕ್ಕಿಂತ ಇದು ಕಡಿಮೆ ವೆಚ್ಚದ ಮೂಲಸೌಕರ್ಯ ವೆಚ್ಚವನ್ನು ಹೊಂದಿದೆ. ಒಟ್ಟಾರೆಯಾಗಿ ಸ್ಕೈಬಸ್ ಯೋಜನೆ ಬೆಂಗಳೂರನ್ನು ಮತ್ತಷ್ಟು ಹೈ ಫೈ ಮಾಡುವ ಎಲ್ಲ ಸಾಧ್ಯತೆಯೂ ಇದ್ದು ಮುಂದಿನ ದಿನದಲ್ಲಿ ಶೀಘ್ರ ಈ ಯೋಜನೆ ಕಾರ್ಯರೂಪಕ್ಕೆ ಬರಲೆಂಬುದು ಬಹುತೇಕ ಸಿಲಿಕಾನ್ ಸಿಟಿ ಜನರ ಮನದಾಳದ ಬಯಕೆ ಎನ್ನಬಹುದು.