ಕಳೆದ ಶನಿವಾರ ಹಾಗೂ ಭಾನುವಾರವಷ್ಟೇ ಈ ಬಾರಿಯ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಸೈಮಾಜರುಗಿತು. ಇನ್ನು ಈ ಬಾರಿಯ ಸೈಮಾ ಅವಾರ್ಡ್ಸ್ ಬೆಂಗಳೂರಿನಲ್ಲಿ ನಡೆದದ್ದು ಖುಷಿಯ ವಿಚಾರ. ಈ ಖುಷಿಯ ವಿಷಯದ ಜತೆಗೆ ಇದೀಗ ಈ ಬಾರಿಯ ಸೈಮಾ ಕನ್ನಡ ನಟರ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ಗೆ ಎಡೆ ಮಾಡಿಕೊಟ್ಟಿದೆ ಎನ್ನುವುದನ್ನು ನೀವೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ನೋಡಿಯೇ ಇರ್ತೀರ.
ಈ ಬಾರಿ ರಾಬರ್ಟ್ ಒಟ್ಟು ಹತ್ತು ಕೆಟಗರಿಗಳಲ್ಲಿ ನಾಮಿನೇಟ್ ಆಗಿತ್ತು, ಆದರೆ ರಾಬರ್ಟ್ ಬೆಸ್ಟ್ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ ಹಾಗೂ ಅತ್ಯುತ್ತಮ ಛಾಯಾಗ್ರಾಹಕ ಹೀಗೆ ಮೂರು ಕೆಟಗರಿಗಳಲ್ಲಿ ಮಾತ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಇದು ಕೆಲ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಅದರಲ್ಲಿಯೂ ಇತರೆ ಭಾಷೆಗಳಲ್ಲಿ ಎರಡು ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿ ಕನ್ನಡದಲ್ಲಿ ಮಾತ್ರ ಒಂದೇ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ.
ಬೇರೆ ಭಾಷೆಗಳ ಹಾಗೆ ಈ ಬಾರಿ ಕನ್ನಡದಲ್ಲೇಕೆ ಅತ್ಯುತ್ತಮ ನಟ ಕ್ರಿಟಿಕ್ಸ್ ಪ್ರಶಸ್ತಿಯನ್ನು ನೀಡಲಿಲ್ಲ ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳನ್ನು ಕಾಡಿತ್ತು. ಈ ವಿಷಯವಾಗಿ ಅಪ್ಪು ಮತ್ತು ದರ್ಶನ್ ನಡುವೆ ಫ್ಯಾನ್ ವಾರ್ ಉಂಟಾಗಿ ಅದು ತಣ್ಣಗಾಗುವ ಹೊತ್ತಿಗೆ ಇದೀಗ ಅನಾಮಧ್ಯೇಯರೋರ್ವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಪೋಸ್ಟ್ನಿಂದಾಗಿ ಮತ್ತೆ ಫ್ಯಾನ್ ವಾರ್ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಸೈಮಾ ಹಣವಿರುವವರಿಗೆ ಮಾತ್ರ ಎಂಬ ಪದವನ್ನು ಬಳಸಲಾಗಿದೆ. ಹಾಗೂ ಈ ಪೋಸ್ಟ್ನಲ್ಲಿ ಪುನೀತ್ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಹಾಗೂ ಅಭಿಷೇಕ್ ಅಂಬರೀಶ್ ಚಿತ್ರಗಳನ್ನು ಬಳಸಲಾಗಿದೆ. ಈ ಮೂಲಕ ಪ್ರಶಸ್ತಿಯನ್ನು ಹಣದಿಂದ ಗೆಲ್ಲಬಹುದು ಎಂಬ ಬೆಂಕಿ ಹಚ್ಚುವ ಕೆಲಸವನ್ನು ಮಾಡಲು ಯತ್ನಿಸಿವೆ
ಇನ್ನು ಅನುಕಂಪದ ಆಧಾರದ ಮೇಲೆ ಅವಾರ್ಡ್ ನೀಡಲಾಗಿದೆ ಎಂದು ಈ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಪರೋಕ್ಷವಾಗಿ ಅಪ್ಪು ಅವರಿಗೆ ಅನುಕಂಪದ ಆಧಾರದ ಮೇಲೆ ಬೆಸ್ಟ್ ನಟ ಪ್ರಶಸ್ತಿಯನ್ನು ನೀಡಿದರು ಎಂದು ಕಿಡಿಗೇಡಿಗಳು ನಾಲಿಗೆ ಹರಿಬಿಟ್ಟಿದ್ದಾರೆ. ಅಂದಹಾಗೆ ಸೈಮಾ ಇತಿಹಾಸದಲ್ಲೇ ಅಪ್ಪು ಪಡೆದಿರುವಷ್ಟು ಸೈಮಾ ಅವಾರ್ಡ್ ಅನ್ನು ಕನ್ನಡದ ಯಾರೂ ಪಡೆದಿಲ್ಲ. ಚಿಕ್ಕ ವಯಸ್ಸಿಗೆ ನ್ಯಾಷನಲ್ ಅವಾರ್ಡ್ ಪಡೆದ ನಮ್ಮ ಹಿರೋಗೆ ಅನುಕಂಪದ ಅವಾರ್ಡ್ ಯಾಕೆ, ಅವಾರ್ಡ್ ಗೆಲುವಿನಲ್ಲೂ ನಮ್ಮ ಅಪ್ಪುನೇ ನಂಬರ್ ಒನ್ ಎಂದು ಪುನೀತ್ ಅಭಿಮಾನಿಗಳು ಈ ಪೋಸ್ಟ್ಗೆ ಟಾಂಗ್ ನೀಡಿದ್ದಾರೆ.
ವಿನಯ್, ನಿಖಿಲ್ ಮತ್ತು ಅಭಿಷೇಕ್ಗೆ ಅವಾರ್ಡ್ ಬಂದಾಗ ಇತರೆ ಉತ್ತಮ ನಟರಿದ್ದರು.ಇನ್ನು ಈ ಪೋಸ್ಟ್ನಲ್ಲಿ ವಿನಯರ್ ರಾಜ್ಕುಮಾರ್, ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಶ್ ಸೈಮಾ ಉದಯೋನ್ಮುಖ ನಟ ಪ್ರಶಸ್ತಿ ಪಡೆದಾಗ ಇವರಿಗಿಂತ ಒಳ್ಳೆಯ ಅಭಿನಯ ಮಾಡಿದರಿಗೆ ಪ್ರಶಸ್ತಿ ಸಿಗಲಿಲ್ಲ ಎಂದು ಬರೆಯಲಾಗಿದೆ. ಹೀಗೆ ಸೈಮಾ ಒಂದು ಫೇಕ್ ಅವಾರ್ಡ್ ಆಗಿದ್ದು ದುಡ್ಡು ಬೇಕಾದವರಿಗೆ ಸಿಗಲಿದೆ ಎಂದು ಸುದ್ದಿ ಹಬ್ಬಿಸಲು ಅನಾಮಧ್ಯೇಯರು ತಿಳಿಸಿದ್ದಾರೆ.
ದುಡ್ಡು ಕೊಟ್ಟರೆ ಅವಾರ್ಡ್ ಸಿಗುತ್ತೆ ಅನ್ನೋ ಹಾಗಿದ್ರೆ ತಮ್ಮ ಹೆಸರನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದಕ್ಕಾಗಿ ಬೇಕಾದವರು ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ, ಇಲ್ಲಿಯವರೆಗೂ ನಡೆದಿರುವ ಸೈಮಾದಲ್ಲಿ ಯಾವ ನಟ ಚೆನ್ನಾಗಿ ನಟಿಸಿರುತ್ತಾನೋ ಆ ನಟನಿಗೆ ಅವಾರ್ಡ್ ದೊರಕಿದೆ. ಸೈಮಾ ಅವಾರ್ಡ್ ಅನ್ನು ಜನ ಹಾಕುವ ವೋಟ್ನಿಂದ ಹಾಗೂ ಸೈಮಾದಲ್ಲಿನ ಹಿರಿಯ ನಟರ ಜ್ಯುರಿ ಗುಂಪು ಆಯ್ಕೆ ಮಾಡುವ ಕಲಾವಿದರಿಗೆ ನೀಡಲಾಗುತ್ತದೆ. ಈ ಜ್ಯುರಿ ಸದಸ್ಯರು ಯಾವ ನಟನಿಗೆ, ಯಾವ ಚಿತ್ರಕ್ಕೆ, ಯಾವ ಕಲಾವಿದರಿಗೆ ಪ್ರಶಸ್ತಿ ನೀಡಬೇಕೆಂದು ಆರಿಸುತ್ತಾರೆ, ಸುಖಾಸುಮ್ಮನೆ ಸಿಕ್ಕವರಿಗೆ ಅವಾರ್ಡ್ ನೀಡುವುದಿಲ್ಲ.