ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬ್ರಹ್ಮಾಸ್ತ್ರಕ್ಕಾಗಿ ರಣಬೀರ್ ಕಪೂರ್ ಪಡೆದ್ರು ಭರ್ಜರಿ ಸಂಭಾವನೆ ಎಷ್ಟು ಗೊತ್ತಾ..

29
ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಮುನ್ನವೇ ಬಹಿಷ್ಕಾರದ ವಿಚಾರಕ್ಕೆ ಸುದ್ದಿಯಾಗಿತ್ತು.ಆದ್ರೆ ರಿಲೀಸ್ ಬಳಿಕ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ. ಆಲಿಯಾ ಭಟ್-ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಚಿತ್ರಮಂದಿರಗಳಲ್ಲಿ ಉತ್ತಮ ಕಲೆಕ್ಷನ್ ಮಾಡ್ತಿದೆ.ನಿರ್ದೇಶಕ ಅಯಾನ್ ಮುಖರ್ಜಿ 7 ವರ್ಷಗಳ ಬಳಿಕ ಬ್ರಹ್ಮಾಸ್ತ್ರ ಚಿತ್ರವನ್ನು ಪೂರ್ಣಗೊಳಿಸಿದರು. ಚಿತ್ರದ ಸೆಟ್ನಲ್ಲೇ ಪ್ರೀತಿಯಲ್ಲಿ ಬಿದ್ದ ರಣಬೀರ್ ಮತ್ತು ಆಲಿಯಾ 5 ವರ್ಷಗಳ ನಂತರ ವಿವಾಹವಾದರು ಮತ್ತು ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಆಲಿಯಾ ಮತ್ತು ರಣಬೀರ್ ಅಲ್ಲದೆ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಮತ್ತು ಶಾರುಖ್ ಖಾನ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ತಾರೆಯರು ಭಾರೀ ಸಂಭಾವನೆಯನ್ನೇ ಪಡೆದಿದ್ದಾರೆ.ರಣಬೀರ್ ಕಪೂರ್ ಬ್ರಹ್ಮಾಸ್ತ್ರಕ್ಕಾಗಿ ತಮ್ಮ ವೃತ್ತಿಜೀವನದ 5 ವರ್ಷಗಳನ್ನು ಮುಡಿಪಿಟ್ಟಿದ್ದರು. ವರದಿಯ ಪ್ರಕಾರ, ರಣಬೀರ್ ಕಪೂರ್ ಚಿತ್ರದಲ್ಲಿ ಶಿವಾಯ್ ಪಾತ್ರದಲ್ಲಿ ನಟಿಸಲು 25-30 ಕೋಟಿ ರೂ. ಪಡೆದಿದ್ದಾರಂತೆ
2022 ಆಲಿಯಾ ಭಟ್ಗೆ ಮುಟ್ಟಿದ್ದೆಲ್ಲವೂ ಚಿನ್ನವಾದ ವರ್ಷ. ಗಂಗೂಭಾಯಿಯ ಮಹಾವಿಜಯದೊಂದಿಗೆ ಆರಂಭವಾದ ಆಲಿಯಾಳ ವಿಜಯಯಾತ್ರೆ ಬ್ರಹ್ಮಾಸ್ತ್ರದಲ್ಲೂ ಮುಂದುವರಿದಿದೆ. ಆಲಿಯಾ ಭಟ್ ಪ್ರಸ್ತುತ ಬಾಲಿವುಡ್ನ ಅತ್ಯಂತ ಜನಪ್ರಿಯ ನಟಿ. ಬ್ರಹ್ಮಾಸ್ತ್ರಕ್ಕಾಗಿ ಆಲಿಯಾ ಭಟ್ 10-12 ಕೋಟಿ ರೂ ಪಡೆದಿದ್ದಾರೆ.
ಅಮಿತಾಬ್ ಬಚ್ಚನ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರ ಪಾತ್ರಕ್ಕಾಗಿ 8 ರಿಂದ 10 ಕೋಟಿ ರೂ ಪಡೆದಿದ್ದಾರೆ.
ಬ್ರಹ್ಮಾಸ್ತ್ರದಲ್ಲಿ ದಕ್ಷಿಣ ಭಾರತದ ನಟ ನಾಗಾರ್ಜುನ ಮತ್ತೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಗಾರ್ಜುನ ಹತ್ತೊಂಬತ್ತು ವರ್ಷಗಳ ನಂತರ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಾಸ್ತ್ರದಲ್ಲಿ ನಾಗಾರ್ಜುನ್ 9-10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ
ಧಾರಾವಾಹಿ ತಾರೆ ಮೌನಿ ರಾಯ್ ಬ್ರಹ್ಮಾಸ್ತ್ರದಲ್ಲಿ ಖಳನಾಯಕಿಯಾಗಿ ನಟಿಸಿದ್ದಾರೆ. ಮೌನಿ ಅಭಿನಯಕ್ಕೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರಕ್ಕಾಗಿ ನಟ 3 ಕೋಟಿ ಸಂಭಾವನೆ ಪಡೆದಿದ್ದಾರೆ.