ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮತ್ತೊಮ್ಮೆ ರಕ್ಕಮ್ಮ ಹಾಡಿಗೆ ಡಾನ್ಸ್ ಮಾಡಿದ ಅಮೂಲ್ಯ…ವಿಡಿಯೋ

994

ಉಲ್ಲಾಸ್ಸದ ಹೂ ಮಳೆ ಜಿನುಗುತಿದೆ ನನ್ನಲಿ ಎಂದು ಮುದ್ದಾಗಿ ಮಾದೇಶ ಎನ್ನುತ್ತಲೆ ಸಿನಿ ರಸಿಕರ ಮನಗೆದ್ದ ನಟಿ ಅಮೂಲ್ಯಾ. ಅಮೂಲ್ಯ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಅವರು ಲಾಲಿ ಹಾಡು, ಚೆಂದು ಸಿನೆಮಾದಲ್ಲಿ ಪುಟ್ಟ ಹುಡುಗಿಯಾಗಿ ಮಾಸ್ಟರ್ ಕಿಶನ್ ಅಕ್ಕನಾಗಿ ಅಭಿನಯಿಸಿದ್ದರು. ‘ಚೆಲುವಿನ ಚಿತ್ತಾರ’ದ ಮೂಲಕ ನಾಯಕಿಯಾದ ಅವರು, ಅದರಲ್ಲಿನ ಪಾತ್ರ ಪೋಷಣೆಗೆ ಅಪಾರ ಜನಪ್ರಿಯತೆ ಗಳಿಸಿದರು. ಸಣ್ಣ ವಯಸ್ಸಿನಲ್ಲಿಯೇ ಖ್ಯಾತ ತಾರೆಯರೊಂದಿಗೆ ತೆರೆ ಹಂಚಿಕೊಂಡ ಕೀರ್ತಿ ಅವರದ್ದು.

‘ಗಜಕೇಸರಿ’, ‘ಮಳೆ’, ‘ರಾಮ್ಲೀಲಾ’, ‘ಮಾಸ್ತಿ ಗುಡಿ’, ‘ಕೃಷ್ಣ ರುಕ್ಕು’ , ಮದುವೆಯ ಮಮತೆಯ ಕರೆಯೊಲೆ, ಖುಷಿ ಖುಷಿಯಾಗಿ, ರಾಮ್ ಲೀಲಾ, ಶ್ರಾವಣಿ ಸುಬ್ರಹ್ಮಣ್ಯ, ಗಣೇಶ್​, ಯಶ್​, ಲವ್ಲೀ ಸ್ಟಾರ್​ ಪ್ರೇಮ್​, ಕೃಷ್ಣ ಅಜಯ್​ ರಾವ್​, ದುನಿಯಾ ವಿಜಯ್​ ಮುಂತಾದ ಸ್ಟಾರ್​ ಕಲಾವಿದರಿಗೆ ಅವರು ಜೋಡಿಯಾಗಿ ನಟಿಸಿದರು. ‘ನಾನು ನನ್ನ ಕನಸು’ ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್​ ರೈ ಜತೆ ತೆರೆಹಂಚಿಕೊಂಡು ಅಪಾರ ಮೆಚ್ಚುಗೆ ಗಳಿಸಿದರು. ಬಳಿಕ ಕೆಲವು ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲೂ ಕಾಣಸಿಕ್ಕರು.

ಅಮೂಲ್ಯ ಅವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತು. ‘ನಾವೀಗ ಕೇವಲ ಇಬ್ಬರಲ್ಲ’ ಎಂಬ ಕ್ಯಾಪ್ಷನ್​ ಮೂಲಕ ಅಮೂಲ್ಯ ಕೆಲ ಸಮಯದ ಹಿಂದೆ ತಾಯಿಯಾಗುತ್ತಿರುವುದನ್ನು ಘೋಷಿಸಿದ್ದರು. 2017ರ ಬಳಿಕ ಅಮೂಲ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಪೂರ್ಣ ಪ್ರಮಾಣದಲ್ಲಿ ಹೀರೋಯಿನ್​ ಆಗಿ ನಟಿಸಿದ ಕೊನೇ ಸಿನಿಮಾ ‘ಮಾಸ್ತಿಗುಡಿ’. 2017ರಲ್ಲಿ ತೆರೆಕಂಡ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಪ್ರಸ್ತುತ ಅಮೂಲ್ಯ ಹಾಗೂ ಜಗದೀಶ್ ಪೋಷಕರಾಗಿದ್ದು ಮಕ್ಕಳ ಆರೈಕೆಯಲ್ಲಿ ತಲ್ಲೀನರಾಗಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿನೆಮಾದ ಕೆಲವು ಕ್ಲೀಪ್ಸ್ ಹಾಕುತ್ತಾ ಸಕ್ರಿಯರಾಗಿದ್ದಾರೆ.

ಬಹಳ‌ಚಿಕ್ಕ ವಯಸ್ಸಿನಲ್ಲಿಯೇ ಸಿನೆಮಾ ರಂಗಕ್ಕೆ‌ ಕಾಲಿಟ್ಟ ಅವರು ಸಕ್ರಿಯ ನಟಿಯಾಗಿದ್ದರು. ಈಕೆಗೆ ಕೇವಲ 29 ವರ್ಷ ವಯಸ್ಸಾಗಿದ್ದು, ಇನ್ನು ನೋಡಲು 18 ವರ್ಷದ ಮುದ್ದು ಚೆಲುವೆಯಂತೆ ಕಾಣುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಿನಿಮಾ ಕ್ಷೇತ್ರಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ. ಮೂಲ್ಯಾ ಪತಿ ಹಾಗೂ ಮಾವ ರಾಮಚಂದ್ರ ಅವರ ರಾಜಕೀಯ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದಾರೆ. ಅಮೂಲ್ಯಾ ಮತ್ತೆ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಲಿದ್ದಾರೆ. ಮತ್ತೆ ಯಾವಾಗ ನಟಿಸ್ತೀರಾ ಎಂಬ ಪ್ರಶ್ನೆ ಕೂಡ ಅಮೂಲ್ಯಾಗೆ ಪದೇ ಪದೇ ಕೇಳಿ ಬರುತ್ತಲಿರುತ್ತದೆ.

ಸದ್ಯ ಮಕ್ಕಳು ಇರೋದರಿಂದ ಅಮೂಲ್ಯಾ ಇನ್ನು ಸ್ವಲ್ಪ ದಿನ ನಟನೆಯತ್ತ ಮರಳೋದು ಅನುಮಾನ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ.ಸದ್ಯ ಸಾಮಾಜಿಕ ಜಾಲತಾಣದಲ್ಲಾದರೂ ಅವರ ರೀಲ್ಸ್ ನೋಡಲಾದರೂ ಸಿಗುತ್ತದೆ ಎಂಬ ಖುಷಿಯಲ್ಲಿ ಅಭಿಮಾನಿಗಳಿದ್ದಾರೆ. ಅದೇ ರೀತಿ‌ ವಿಕ್ರಾಂತ್ ರೋಣ ಸಿನೆಮಾದ ರಕ್ಕಮ್ಮ‌ಹಾಡಿಗೆ ಇವರು ನೃತ್ಯ ಮಾಡಿದ್ದು ಅವಳಿ ಮಕ್ಕಳ ತಾಯಿ ಅಮೂಲ್ಯ ಇವರೆನೇ ಅನ್ನೊ‌ ಅನುಮಾನ ಅಭಿಮಾನಿಗಳಲ್ಲೂ ಮೂಡೊ ಹಾಗೇ ಇವರು ನೃತ್ಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಚೆಂದನವನಕ್ಕೆ ಮರಳಿ ಹಿಟ್ ಸಿನೆಮಾ ನೀಡಲಿ ಎಂಬುದು ಬಹುತೇಕರ ಮನದಾಳದ ಆಸೆಯಾಗಿದೆ. ಅದೇ ರೀತಿ ಇವರ ರೀಲ್ಸ್ ವೀಡಿಯೋ ತುಂಬಾ ಫೇಮಸ್ ಆಗಿದ್ದು ಈ ಕುರಿತು ವೀಡಿಯೋ ಮಾಹಿತಿಗೆ ಕೆಳಗಿನ ಲಿಂಕ್ ಬಳಸಿ.