ಚೆಂದನವನದ ನಟ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ನಟನೆಯ ಕಾಂತಾರ(Kantara) ಚಿತ್ರ ಕಳೆದ ವರುಷ ಸೆಪ್ಟೆಂಬರ್ 30 ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ನಂತರ ಚಿತ್ರ ಬಿಡುಗಡೆಯಾಗಿ 10ನೇ ವಾರಕ್ಕೆ ಕಾಲಿಟ್ಟರು ಕೂಡ ಕಾಂತಾರ ಕ್ರೇಜ್ ಮಾತ್ರ ಕಡಿಮೆಯಾಗಿಲಿಲ್ಲ. ಹೌದು ಚಿತ್ರಮಂದಿರಗಳಲ್ಲಿ (Theatre) ಚಿತ್ರದ ಅಬ್ಬರ ಕೊಂಚವು ಕಡಿಮೆಯಾಗಲಿಲ್ಲ. ಇನ್ನು ಕನ್ನಡ ಭಾಷೆಯಲ್ಲಿ ಯಶಸ್ಸು ಗಳಿಸುತ್ತಿದ್ದಂತೆಯೇ ನಿರ್ಮಾಪಕರು ಹಿಂದಿ (Hindi) ತೆಲುಗು(Telugu) ತಮಿಳು(Tamil) ಮತ್ತು ಮಲಯಾಳಂ (Malyalam) ಭಾಷೆಯಲ್ಲಿಯೂ ಕಾಂತಾರವನ್ನು ಬಿಡುಗಡೆ ಮಾಡಿದ್ದು ನಂತೆ ತುಳು (Tulu) ಆವೃತ್ತಿಯು ಕೂಡ ಡಿಸೆಂಬರ್ 2 ರಂದು ಕರ್ನಾಟಕದಾದ್ಯಂತ ಸುಮಾರು 50 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಯಿತು.
ಇನ್ನು ಬಹು ಭಾಷೆಗಳಲ್ಲಿ ಬಿಡುಗಡೆಯಾದ ಕಾಂತಾರ ಎಲ್ಲಾಕಡೆ ಕೂಡ ಭರ್ಜರಿ ಯಶಸ್ಸನ್ನು(Success) ಕಂಡಿದ್ದು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ಸಿನಿಮಾ ಒಟಿಟಿ (OTT) ವೇದಿಕೆಯಲ್ಲಿಯೂ ಬಿಡುಗಡೆಯಾಗಿದೆ. ಹೌದು ಹೀಗಿದ್ದರೂ ಕಾಂತಾರ ಕ್ರೇಜ್ (Craze) ಇನ್ನು ಕಡಿಮೆಯಾಗಿಲ್ಲ. ಕೆಲವೊಂದು ಕಡೆ ಚಿತ್ರಮಂದಿರಗಳಿಗೆ ಬರುತ್ತಿರುವ ಜನ ಇಂದಿಗೂ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇನ್ನು ನಾಯಕನಾಗಿ ನಟಿಸುವುದರ ಹೊರತಾಗಿ ರಿಷಬ್ ಶೆಟ್ಟಿ ಕಾಂತಾರ ಕಥೆಯನ್ನು (Story) ಬರೆದು ನಿರ್ದೇಶಿಸಿದ್ದಾರೆ.
ಈ ಕಥೆಯು ಜಮೀನು ಅತಿಕ್ರಮಣದ ಸುತ್ತಲಿನ ಗ್ರಾಮಸ್ಥರು ಮತ್ತು ಅರಣ್ಯ ಅಧಿಕಾರಿಗಳ (Forest Officers) ನಡುವಿನ ಹೋರಾಟವನ್ನು ತೋರಿಸುತ್ತದೆ.ಕೇವಲ 16 ಕೋಟಿ ರೂ. ಬಜೆಟ್ ಸಿನಿಮಾ ಈ ಪಾಟಿ ಸದ್ದು ಮಾಡುತ್ತಿರುವುದು 200 ಹಾಗೂ 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡುವವರ ನಿದ್ದೆ ಕೆಡಿಸಿದೆ ಎನ್ನಬಹುದು. ನೂರಾರು ಕೋಟಿ ಕಲೆಕ್ಷನ್ ಮಾಡಲು ನೂರಾರು ಕೋಟಿ ಖರ್ಚು ಮಾಡಬೇಕು ಎನ್ನುವ ಮಾತನ್ನು ಕಾಂತಾರ ಸುಳ್ಳಾಗಿಸಿದೆ.
ಇನ್ನು ಒಂದು ಮೀಡಿಯಂ ಬಜೆಟ್ ಸಿನಿಮಾ 400 ಕೋಟಿ ರೂ. ಗಳಿಸೋದು ಅಂದರೆ ತಮಾಷೆ ಮಾತಲ್ಲ. ಇನ್ನು ಸಿನಿಮಾ ಪ್ರತಿಯೊಂದು ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದು ಅದರಲ್ಲೂ ಸಿಂಗಾರ ಸಿರಿಯೇ ಹಾಡು ಎಲ್ಲರ ಫೇವರೇಟ್ ಎನಿಸಿದೆ.ಹೌದು ಚಿಕ್ಕಮಕ್ಕಳಿಂದ ವಯ್ಯಸ್ಸಾದವವರಿಗೂ ಕೂಡ ಈ ಹಾಡ ಬಹಳ ಇಷ್ಟವಾಗಿದ್ದು ಎಲ್ಲಿ ನೋಡಿದರು ಕೂಡ ಇದೀಗ ಈ ಹಾಡಿನದ್ದೇ ಹವಾ ಎನ್ನಬಹುದು.
ಸದ್ಯ ಕರಾವಳಿಯ ಕುಡ್ಲದಲ್ಲಿ ವಿಜಯ್ ಪ್ರಕಾಶ್( Vijay Prakash)ರವರು ಲೈವ್ ಇವೆಂಟ್ (Live Event) ನೀಡಿದ್ದು ಈ ಸಂದರ್ಭದಲ್ಲಿ ಸಿಂಗಾರ ಸಿರಿಯೇ (SingaraSiriye) ಹಾಡು ಹಾಡಿದ್ದಾರೆ. ವಿಜಯ್ ಪ್ರಕಾಶ್ ಹಾಡುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನ ಕೂಡ ಒಟ್ಟಾಗಿ ಹಾಡಿದ್ದು ಲೇಖನಿಯ ಕೆಳಗೆ ಈ ವಿಡಿಯೋ ನೋಡಬಹುದು. ಇನ್ನು ಕಾಂತರ ಸಿನಿಮಾ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.