ಕನ್ನಡದ ಬೆಡಗಿ ನಟಿ ಆಶಿಕಾ ರಂಗನಾಥ್ (Ashika Ranganath) ಕೈಯಲ್ಲಿ ಅನೇಕ ಸಿನಿಮಾಗಳಿದ್ದು ಗರುಡ (Garuda) ರಂಗಮಂದಿರ(Ranga Mandira) ಅವತಾರ ಪುರುಷ (Avatar Purusha) ಮತ್ತು ರೇಮೋ (Remo) ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗು ಹಾಗೂ ತಮಿಳಿನಲ್ಲಿ ಕೂಡ ನಟಿಸುತ್ತಿದ್ದು ಈ ಹಿಂಸೆ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಕೋಟಿಗೊಬ್ಬ-3 (Kotigobba 3) ಚಿತ್ರದ ಐಟಂ ಸಾಂಗ್ ನಲ್ಲಿಯೂ ಕೂಡ ಅವರು ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು.
ಇನ್ನು 2018ರಲ್ಲಿ ತೆರೆಕಂಡ ಶರಣ್ (Sharan) ಮತ್ತು ಆಶಿಕಾ ಅಭಿನಯದ ರ‍್ಯಾಂಬೋ 2 (Ramboo 2) ಸಿನಿಮಾ ಅಭೂತಪೂರ್ವ ಪ್ರದರ್ಶನ ಕಂಡಿದ್ದಲ್ಲದೆ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯಿತು. ಈ ಚಿತ್ರದ ಚುಟು ಚುಟು ಹಾಡು ಯ್ಯೂಟ್ಯೂಬ್‌ನಲ್ಲಿ (YouTube) ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದಾಗಿ ದಾಖಲೆ ಬರೆದಿದ್ದು ಸದ್ಯ ಈ ಹಾಡು ಬರೋಬ್ಬರಿ 143 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಕಂಡಿದೆ.
ಇನ್ನು ಕ್ರೇಜಿ ಬಾಯ್ (Crazy Boy) ಸಿನಿಮಾದ ಬಳಿಕ ನಟಿ ಆಶಿಕಾರಿಗೆ ಒಂದರ ಮೇಲೊಂದರಂತೆ ಸಿನಿಮಾ ಆಫರ್ ಬರತೊಡಗಿದವು. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ (Shivarajkumar) ಅಭಿನಯದ ಮಾಸ್ ಲೀಡರ್ (Mass Leader) ಗಣೇಶ್ (Ganesh) ಅಭಿನಯದ ಮುಗುಳು ನಗೆ (Mugulunage) ರಾಜು ಕನ್ನಡ ಮೀಡಿಯಂ(Raju Kannada Medium) ತಾಯಿಗೆ ತಕ್ಕ ಮಗ (Tayige Takka Maga) ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡರು.
ನಿರ್ದೇಶಕ ಮಹೇಶ್ ಬಾಬು ಅವರ ಕ್ರೇಜಿ ಬಾಯ್ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ವುಡ್ ಪ್ರವೇಶಿಸಿದರು. ಹೌದು ನಟ ದಿಲೀಪ್ ಪ್ರಕಾಶ್ ಜೊತೆ ಆಶಿಕಾ ನಟಿಸಿದ ಚೊಚ್ಚಲ ಚಿತ್ರ ಕ್ರೇಜಿ ಬಾಯ್ ಸಿನಿಮಾ 100 ದಿನ ಪ್ರದರ್ಶನ ಕಂಡಿದ್ದು ಮೊದಲ ಸಿನಿಮಾದಲ್ಲಿಯೇ ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ಆಶಿಕಾ ಭರವಸೆ ಮೂಡಿಸಿದ್ದರು. ಸದ್ಯ ಇದೀಗ ಭಾರಿ ಬೇಡಿಕೆ ಹೊಂದಿರುವ ಆಶಿಕಾ ಎಲ್ಲರ ಕ್ರಷ್ ಕೂಡ ಹೌದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ವಿಡಿಯೋವೊಂದು ವೈರಸ್ ಆಗುತ್ತಿದ್ದು ಕಾರ್ಯಕ್ರಮವೊಂದರಲ್ಲಿ ನಟ ಧ್ರುವ ಸರ್ಜಾ (Dhruva Sarja) ಆಶಿಕಾರವರ ಬಗ್ಗೆ ಮಾತನಾಡಿದ್ದು ಧ್ರುವ ಮಾತು ಕೇಳಿ ಆಶಿಕಾ ಹೇಗೆ ನಾಚಿ ನೀರಾಗಿದ್ದಾರೆ ನೀವೆ ನೋಡಿ..