ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾಮಿಡಿ ಕಿಲಾಡಿ ಹಿತೇಶ್ ಮದುವೆ ವಿಡಿಯೋ ನೋಡಿ…ಚಿಂದಿ

2,949

ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು (Comedy Khiladigalu) ಕಾರ್ಯಕ್ರಮದಲ್ಲಿ ಭಾಗವಹಿಸಿ ವೀಕ್ಷಕರ ಮನಗೆದ್ದಿದ್ದವರು ಹಿತೇಶ್ ಕುಮಾರ್ ಕಾಪಿನಡ್ಕ (Hithesh Kumar Kapinadka). ಹೌದು ಪ್ಯಾಕು ಪ್ಯಾಕು ಎನ್ನುತ್ತಾ ವೀಕ್ಷಕರನ್ನ ನಗೆಗಡಲಲ್ಲಿ ತೇಲಿಸಿದವರು ಈ ಹಿತೇಶ್ ಕುಮಾರ್ ಕಾಪಿನಡ್ಕ. ಕರಾವಳಿಯ ಪ್ರತಿಭೆ ಹಿತೇಶ್ ಕುಮಾರ್ ಕಾಪಿನಡ್ಕ ಸದ್ಯ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಪ್ರೀತಿಸಿದ ಹುಡುಗಿಯ ಜೊತೆಗೆ ಹಿತೇಶ್ ಕುಮಾರ್ ಕಾಪಿನಡ್ಕ ರವರು ಹಸೆಮಣೆ ಏರಿದ್ದಾರೆ.

ಇನ್ನು ಹಿತೇಶ್ ಕುಮಾರ್ ಕಾಪಿನಡ್ಕ ಮತ್ತು ಸ್ವಾತಿ ಅವರ ವಿವಾಹ ಮಹೋತ್ಸವ (Hithesh Kumar Kapinadka Marriage) ಜರುಗಿದ್ದು ಅದ್ಧೂರಿಯಾಗಿ ಅಷ್ಟೇ ಸಾಂಪ್ರದಾಯಿಕವಾಗಿ ಕೂಡ ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಅವರ ಮದುವೆ ನೆರವೇರಿದೆ. ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಕಲ್ಯಾಣಕ್ಕೆ ಕುಟುಂಬಸ್ಥರು ಆಪ್ತರು ಹಾಗೂ ಕಾಮಿಡಿ ಕಿಲಾಡಿಗಳು ಸಾಕ್ಷಿಯಾಗಿದ್ದರು.

ಇನ್ನು ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಕಳೆದ ಒಂದು ದಶಕದಿಂದ ಪರಸ್ಪರ ಪ್ರೀತಿಸುತ್ತಿದ್ದು ಹಿತೇಶ್ ಕುಮಾರ್ ಕಾಪಿನಡ್ಕ ಮತ್ತು ಸ್ವಾತಿ ಒಂದೇ ಗ್ರಾಮಕ್ಕೆ ಸೇರಿದವರು. ದೇವಸ್ಥಾನವೊಂದರಲ್ಲಿ ಸ್ವಾತಿ ಅವರನ್ನ ಹಿತೇಶ್ ಮೊದಲ ಬಾರಿಗೆ ನೋಡಿದ್ದು ಆನಂತರ ಪರಿಚಯವಾದ ಇವರಿಬ್ಬರು ಸ್ನೇಹಿತರಾದರು. ಸ್ನೇಹ ಪ್ರೀತಿಗೆ ತಿರುಗಿತು.

ಸುಮಾರು ಒಂದು ದಶಕದಿಂದ ಪ್ರೀತಿಸುತ್ತಿದ್ದ ಸ್ವಾತಿ ಹಾಗೂ ಹಿತೇಶ್ ಮದುವೆಗೆ ಕುಟುಂಬಸ್ಥರೂ ಸಮ್ಮತಿ ಸೂಚಿಸಿದ್ದು ಈ ಪರಿಣಾಮ ಇಬ್ಬರ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಇನ್ನು ಡಿಸೆಂಬರ್ 19, 2021 ರಂದು ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಅವರ ನಿಶ್ಚಿತಾರ್ಥ ನಡೆದಿದ್ದು ಒಂದು ವರ್ಷದ ಬಳಿಕ ಹಿತೇಶ್ ಹಾಗೂ ಸ್ವಾತಿ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.

ಇನ್ನು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಹಿತೇಶ್ ಕುಮಾರ್ ಕಾಪಿನಡ್ಕ ಎರಡನೇ ರನ್ನರ್ ಅಪ್ ಆಗಿದ್ದು ಅನೇಕ ಬಾರಿ ಲೇಡಿ ಗೆಟಪ್ ಹಾಕಿ ವೀಕ್ಷಕರಿಗೆ ಕಾಮಿಡಿ ಇಂಜೆಕ್ಷನ್ ನೀಡಿದ್ದವರು ಹಿತೇಶ್ ಕುಮಾರ್ ಕಾಪಿನಡ್ಕ. ಹೌದು ಹಿತೇಶ್‌ಗೆ ಸ್ಯಾಂಡಲ್‌ವುಡ್‌ನಿಂದಲೂ ಅವಕಾಶಗಳು ಹುಡುಕಿಕೊಂಡು ಬಂದಿದ್ದು ಗೋವಿಂದೇ ಗೌಡ ನಿರ್ದೇಶನದ ಜಂತರ್ ಮಂತರ್ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತಾ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್‌ಪೇಟೆ ಯಜಮಾನ ಏಕ್‌ ಲವ್ ಯಾ ಮುಂತಾದ ಸಿನಿಮಾಗಳಲ್ಲಿ ಕೂಡ ಹಿತೇಶ್ ಕುಮಾರ್ ಕಾಪಿನಡ್ಕ ಮಿಂಚಿದ್ದಾರೆ. ತುಳು ಸಿನಿಮಾಗಳಲ್ಲೂ ಹಿತೇಶ್ ಕುಮಾರ್ ಕಾಪಿನಡ್ಕ ಕಾಣಿಸಿಕೊಂಡಿದ್ದಾರೆ.