ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಿಬಾಸ್ ಜೊತೆ 6 ಕೋಟಿಯ ಕಾರಲ್ಲಿ ಹೊರಟ ರಿಷಬ್ ಶೆಟ್ಟಿ..ಚಿಂದಿ ವಿಡಿಯೋ

8,290

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇತ್ತೀಚಿಗೆ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಇನ್ನು ರಿಷಬ್ ಶೆಟ್ಟಿ ಚಾಲೆಂಜಿಂಗ್ ಸ್ಟಾರ್ ಗೆ ಸಿನಿಮಾ ಮಾಡ್ತಿದ್ದಾರಾ? ಸೈಲೆಂಟ್ ಆಗಿ ಸಿನಿಮಾ ಮಾತುಕತೆ ನಡೆಯುತ್ತಿದೆಯಾ? ಎಂದು ಯೋಚಿಸುತ್ತಿದ್ದೀರಾ. ಇಬ್ಬರು ಸಿನಿಮಾ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಮತ್ತು ತಂಡ ಮೈಸೂರಿನಲ್ಲಿ ಬೀಡುಬಿಟ್ಟಿದ್ದು ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಮೈಸೂರಿನಲ್ಲಿ ಭರ್ಜರಿಯಾಗಿ ಚಿತ್ರೀಕರಣ ಮಾಡುತ್ತಿರುವ ತಂಡವನ್ನು ದರ್ಶನ್ ಸಹಜವಾಗಿ ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು.

ದರ್ಶನ್ ಭೇಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇರುವ ಕಾರ್ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೌದು ಡಿ ಬಾಸ್ ಬಳಿ ತರಹೇವಾರಿ ಕಾರುಗಳಿದ್ದು ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿಗೆ ಇಷ್ಟವಾದ ಕಾರಿನಲ್ಲಿ ದರ್ಶನ್ ಮೈಸೂರು ರೌಂಡ್ಸ್ ಹಾಕಿಸಿದ್ದಾರೆ. ದರ್ಶನ್ ಜೊತೆ ರೌಂಡ್ಸ್ ಹಾಕಿದ ಸಂತಸವನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಡ್ರೀಮ್ ಕಾರು ಫೋರ್ಡ್ ಮಸ್ಟಾಂಗ್ ಜಿಟಿ ಕಾರಿನಲ್ಲಿ ದರ್ಶನ್ ಜೊತೆ ಕುಳಿತು ಮೈಸೂರು ಓಡಾಡಿದ್ದು ದರ್ಶನ್ ಜೊತೆ ಕಾರಿನಲ್ಲಿ ಕುಳಿತಿರುವ ಫೋಟೋವನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಇಬ್ಬರ ಕಾರ್ ಡ್ರೈವಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಈ ಬಗ್ಗೆ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಖುಷಿ ಪಟ್ಟಿದ್ದಾರೆ. ನನ್ನ ಡ್ರೀಮ್ ಕಾರ್ FordMustang. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ MustangGT ನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ದರ್ಶನ್ ಸರ್. ಅದ್ಭುತವಾದ ಸಮಯ ಎಂದು ಬರೆದುಕೊಂಡಿದ್ದಾರೆ.

ಇನ್ನು ರಿಷಬ್ ಶೆಟ್ಟಿಯನ್ನು ಭೇಟಿಯಾಗುತ್ತಿದ್ದಂತೆ ಇಬ್ಬರು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು ಅಲ್ಲದೆ ಅಭಿಮಾನಿಗಳು ಇಬ್ಬರು ಒಟ್ಟಿಗೆ ಚಿತ್ರ ಮಾಡಿ ಎಂದು ಹೇಳುತ್ತಿದ್ದಾರೆ. ರಿಷಬ್ ಪೋಸ್ಟ್ ಗೆ ಇಬ್ಬರು ಒಂದು ಸಿನಿಮಾ ಮಾಡಿ ಇಬ್ಬರ ಕಾಂಬಿನೇಷನ್ ಅದ್ಭುತವಾಗಿದೆ. ಹೊಸ ಸಿನಿಮಾದ ಬಗ್ಗೆ ಮಾತನಾಡಿರುವ ಹಾಗಿದೆ ಎನ್ನುವ ಕಾಮೆಂಟ್ಸ್ ಹರಿದು ಬರುತ್ತಿದೆ.

ಅಂದ್ಹಾಗೆ ಈ ಘಟನೆ ನಡೆದಿರುವುದು ರಿಷಬ್ ಶೆಟ್ಟಿ ಸದ್ಯ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದ್ದು ಇದೇ ಸಿನಿಮಾದ ಚಿತ್ರೀಕರಣ ವೇಳೆ ದರ್ಶನ್ ರಿಷಬ್ ಮತ್ತು ತಂಡವನ್ನು ಭೇಟಿಯಾಗಿದ್ದರು.

ಸದ್ಯ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಮಾಡುತ್ತಾರಾ ಇಲ್ವಾ? ಅನ್ನೋದು ಸಿನಿಪ್ರಿಯರಿಗೆ ದೊಡ್ಡ ಪ್ರಶ್ನೆಯಾಗಿಯೇ ಕಾಡುತ್ತಿತ್ತು. ಆ ಗೊಂದಲಕ್ಕಿಂಗ ಪರಿಹಾರ ಸಿಕ್ಕಂತಾಗಿದೆ. ರಿಷಬ್ ಶೆಟ್ಟಿ ಕಾಂತಾರ ಪಾರ್ಟ್ 2 ಮಾಡೋದು ಬಹುತೇಕ ಕನ್ಫರ್ಮ್ ಆಗಿದೆ. ಇನ್ನು ದೇಶಾದ್ಯಂತ ಡಿವೈನ್ ಹಿಟ್ ಪಡೆದ ಕಾಂತಾರಾ ಚಿತ್ರ ಎರಡನೇ ಭಾಗ ಪಡೆಯೋದು ಖಚಿತವಾಗಿದೆ. ಮಂಗಳೂರಿನ‌ ಬಂದಲೆಯ ಮಡಿವಾಳಬೆಟ್ಟುವಿನಲ್ಲಿ ನಡೆದ ರಿಷಬ್ ಶೆಟ್ಟಿ ಯ ಹರಕೆಯ ಅಣ್ಣಪ್ಪ ಪಂಜುರ್ಲಿಯ ದೈವದ ಕೋಲದಲ್ಲಿ ಕಾಂತಾರಾ ಚಿತ್ರ ಎರಡನೇ ಭಾಗಕ್ಕೆ ಶುಭಶಕುನ ತೋರಿದೆ.