ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಐಟಂ ಹಾಡಿಗೆ 18 ವರ್ಷದ ರಚಿತಾರಾಮ್ ಟಪಾಂಗುಚ್ಚು ಡಾನ್ಸ್..ಚಿಂದಿ ವಿಡಿಯೋ

4,860

ಗುಳಿಕೆನ್ನೆ ಸುಂದರಿ ರಚಿತಾ ರಾಮ್ ರವರು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇತರೆ ಭಾಷೆಯ ಅಭಿಮಾನಿಗಳನ್ನ ಗಳಿಸಿಕೊಂಡಿರುವ ಕನ್ನಡದ ನಟಿಯರಲ್ಲಿ ನಟಿ ರಚಿತಾ ರಾಮ್ ಸಹ ಒಬ್ಬರು ಎಂದು ಹೇಳಬಹುದು. ಹಲವು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ರಚಿತಾ ರಾಮ್ ರವರು ಸದ್ಯಕ್ಕೆ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು ಎಂದು ಹೇಳಬಹುದು.

ಹೌದು ಕನ್ನಡದ ಬಹುತೇಕ ನಾಯಕ ನಟರ ಜೊತೆಗೆ ನಟನೆಯನ್ನ ಮಾಡಿರುವ ರಚಿತಾ ರಾಮ್ ಅವರು ಸದ್ಯ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಟಿ ರಚಿತಾ ರಾಮ್ ಅವರು ಸಂಭಾವನೆಯ ವಿಚಾರದಲ್ಲಿ ಕೂಡ ಬಹಳ ಮೇಲೆ ಇದ್ದಾರೆ ಎಂದು ಹೇಳಬಹುದು. ಹೌದು ಇತರೆ ಕನ್ನಡದ ನಟಿಯರಿಗೆ ಹೋಲಿಕೆ ಮಾಡಿದರೆ ನಟಿ ರಚಿತಾ ರಾಮ್ ಅವರ ಸಂಭಾವನೆ ಬಹಳ ಜಾಸ್ತಿ ಎಂದು ಹೇಳಬಹುದು.

ಕರುನಾಡಿನಲ್ಲಿ ಬಹಳ ಅಭಿಮಾನಿ ಬಳಗವನ್ನ ಹೊಂದಿರುವ ರಚಿತಾ ರಾಮ್ ರವರ ಚಿತ್ರಗಳನ್ನ ನೋಡಲು ಜನರು ಬಹಳ ಕಾತುರದಿಂದ ಕಾಯುತ್ತಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ರವರು ಚಂದನವನದ ಪ್ರಮುಖ ನಾಯಕ ನಟಿ.

ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಹೌದು ರಾಜ್ಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ರಚಿತಾ ರಾಮ್ ರವರು ಒಂದು ಚಿತ್ರಕ್ಕೆ 35 ರಿಂದ 40 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯದಲ್ಲಿ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ರಚಿತಾ ಅವರು ಇಷ್ಟು ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ ಅಂದರೆ ನಾವು ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಬಹುದು.

ಹೌದು ನಟಿ ರಚಿತಾ ಅವರು ಬರಿ ನಟನೆಯಲ್ಲಿ ಮಾತ್ರವಲ್ಲದೆ ನೃತ್ಯದಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ ಎಂದು ಹೇಳಬಹುದು. ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನ ನೀಡಿರುವ ರಚಿತಾ ರಾಮ್ ಅವರು ತಮ್ಮ ನೃತ್ಯದ ಮೂಲಕ ಕೂಡ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಎಂದೇ ಹೇಳಬಹುದು. ಇಂತಹ ನಟಿಯ ಅಪರೂಪದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಆರಂಭದ ದಿನಗಳಲ್ಲಿ ರಚಿತಾ ಉದಯ ಟಿವಿಯ ಕಿಕ್ ಕಾರ್ಯಕ್ರಮದ ವೇದಿಕೆ ಏರಿ ಯಾವ ರೀತಿ ನೃತ್ಯ ಮಾಡಿದ್ದಾರೆ ಎಂದು ಲೇಖನಿಯ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

ಸದ್ಯ ಮಾನ್ಸೂನ್ ರಾಗದ ರಚಿತಾ ರಾಮ್ ಪಾತ್ರದ ಬೆನ್ನಲ್ಲಿಯೇ ಮತ್ತೊಂದಷ್ಟು ಸಿನಿಮಾಗಳನ್ನೂ ರಚಿತಾ ಒಪ್ಪಿಕೊಂಡಿದ್ದಾರೆ. ಶಬರಿ ಇನ್​ ಸರ್ಚ್ ಆಫ್ ರಾವಣ ಅನ್ನೋ ಸಿನಿಮಾವನ್ನ ಕೂಡ ರಚಿತಾ ಒಪ್ಪಿಕೊಂಡಿದ್ದಾರೆ. ರಚಿತಾ ರಾಮ್ ಇಲ್ಲಿ ಶಬರಿ ಯಾಗಿಯೇ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರದ ಪೋಸ್ಟರ್​ ಈಗಾಗಲೇ ರಿಲೀಸ್ ಆಗಿದೆ. ಇದು ಅಷ್ಟೇ ವಿಶೇಷ ಅನ್ನೋ ಭಾವನೆಯನ್ನೂ ಮೂಡಿಸುತ್ತದೆ.

ಶಬರಿ ಇನ್ ಸರ್ಚ್ ಆಫ್ ರಾವಣ ಅನ್ನೋದೇ ಇಲ್ಲಿ ವಿಶೇಷವಾ ವಿಷಯ. ಶಬರಿ ಹುಡುಕುತ್ತಿರೋ ಆ ರಾವಣ ಯಾರೂ ಅನ್ನೋದು ಪಾತ್ರ ಇನ್ನೂ ರಿವೀಲ್ ಆಗಿಲ್ಲ. ಆದರೆ ರಚಿತಾ ರಾಮ್ ಪಾತ್ರದ ಗತ್ತು ಇಲ್ಲಿ ನಿಜಕ್ಕೂ ಗಮನ ಸೆಳೆಯುವಂತೇನೆ ಇದೆ. ಇನ್ನು ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಬರೀಶ್ ಅಭಿನಯ ಬ್ಯಾಡ್​ ಮ್ಯಾನರ್ಸ್ ಸಿನಿಮಾದಲ್ಲೂ ಕೂಡ ರಚಿತಾ ರಾಮ್ ಅಭಿನಯಸಿದ್ದು ಬ್ಯಾಡ್ ಮ್ಯಾನರ್ಸ್ ಅಂದ್ಮೇಲೆ ಇಲ್ಲಿ ಅಭಿಷೇಕ್ ಪಾತ್ರದ್ದೇ ಅಬ್ಬರ ಇರುತ್ತದೆ. ಆದರೆ ಈ ಸಿನಿಮಾದಲ್ಲಿ ರಚಿತಾ ರಾಮ್ ಪಾತ್ರ ಹೇಗಿರುತ್ತದೆ ಅನ್ನೋ ಕುತೂಹಲ ಕೂಡ ಇದೆ.